ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವತ್ತ ಹೆಜ್ಜೆ ಹಾಕಿದೆ. ಇಂದು ರಾಜ್ಯದಲ್ಲಿ 4,471 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 52 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 7,98,378ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ರಾಜ್ಯದಲ್ಲಿ ಇನ್ನೂ 86,749 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ ಕೊರೊನಾ 10,873 ಸೋಂಕಿತರನ್ನು ಮಹಾಮಾರಿ ಬಲಿ ಪಡೆದುಕೊಂಡಿದೆ. ಐಸಿಯುನಲ್ಲಿ 935 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೋಂಕಿನ ಖಚಿತ ಪ್ರಮಾಣ ಶೇ. 3.97ರಷ್ಟಾಗಿದೆ. ಮೃತಪಟ್ಟವರ ಪ್ರಮಾಣ ಶೇ.1.16ರಷ್ಟಿದೆ. ಇಂದು ಒಟ್ಟು 1,12,545 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇಂದು ಬಾಗಲಕೋಟೆ 57, ಬಳ್ಳಾರಿ 129, ಬೆಳಗಾವಿ 73, ಬೆಂಗಳೂರು ಗ್ರಾಮಾಂತರ 102, ಬೆಂಗಳೂರು ನಗರ 2,251, ಬೀದರ್ 7, ಚಾಮರಾಜನಗರ 34, ಚಿಕ್ಕಬಳ್ಳಾಪುರ 78, ಚಿಕ್ಕಮಗಳೂರು 85, ಚಿತ್ರದುರ್ಗ 84, ದಕ್ಷಿಣ ಕನ್ನಡ 136, ದಾವಣಗೆರೆ 52, ಧಾರವಾಡ 93, ಗದಗ 14, ಹಾಸನ 136, ಹಾವೇರಿ 30, ಕಲಬುರಗಿ 71, ಕೊಡಗು 33, ಕೋಲಾರ 45, ಕೊಪ್ಪಳ 49, ಮಂಡ್ಯ 163, ಮೈಸೂರು 173, ರಾಯಚೂರು 25, ರಾಮನಗರ 22, ಶಿವಮೊಗ್ಗ 79, ತುಮಕೂರು 232, ಉಡುಪಿ 81, ಉತ್ತರ ಕನ್ನಡ 48, ವಿಜಯಪುರ 62 ಮತ್ತು ಯಾದಗಿರಿಯಲ್ಲಿ 27 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಎಡವಟ್ಟು : ತವರಿಂದ ಬಂದ ಪತ್ನಿಗೆ ಪತಿಯಿಂದ ಲಾಕ್ಔಟ್!

ಬೆಂಗಳೂರು: ಸಂದರ್ಭದ ಬಂಧಿಯಾಗಿ ಆಕೆ 3 ತಿಂಗಳು ಕಾಲ ತವರಲ್ಲೇ ಉಳಿಯಬೇಕಾಯಿತು. ಗಂಡ-ಮಗ ಬೆಂಗಳೂರಿನಲ್ಲಿ, ಆಕೆ…

ಸೋನಿಯಾ ವಿರುದ್ಧ ಕೇಸ್ ಬಿಡಲು ಸಿಎಂ ಸಿದ್ಧ: ಬಿಜೆಪಿ ವಿರೋಧ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ಕೈಬಿಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು,

ಲಕ್ಷ್ಮೇಶ್ವರ: ಅಪರಾಧ ತಡೆ ಮಾಸಾಚರಣೆ

ತಾಲೂಕಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಮದುವೆಯಾಗುವುದಾಗಿ 46 ವರ್ಷದ ಮಹಿಳೆಗೆ ವಂಚನೆ!

ಮದುವೆಯಾಗುವುದಾಗಿ ನಂಬಿಸಿ 46 ವರ್ಷದ ಮಹಿಳೆಗೆ ರೂ.5.6 ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.