ಮೈಸೂರು : ವೋಟ್ ಹಾಕಿ ಉಳಿಸಿದರೆ ಮಾತ್ರ ಜನರನ್ನ ಬದುಕಿಸುತ್ತೀರಾ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮ ಪಕ್ಷದ ನಿರ್ಧಾರವನ್ನೇ ಬಿಜೆಪಿ ಶಾಸಕ ಎಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ವೋಟ್ ಹಾಕಿ ಗೆಲ್ಲಿಸಿದರೆ ಮಾತ್ರ ಉಚಿತ ಲಸಿಕೆ ಕೊಡುತ್ತೀರಾ? ಆದರೆ, ಸೋಲಿಸಿದರೆ ಜನರನ್ನೇ ಸಾಯಿಸಿ ಬಿಡುತ್ತೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಸದ್ಯ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಬಿಜೆಪಿ ಬಿಹಾರದಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ತಿಳಿಸಿದೆ. ಈ ಕುರಿತು ಸದ್ಯ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. 

ಈ ಕುರಿತು ಮಾತನಾಡಿರುವ ವಿಶ್ವನಾಥ್ ಅವರು, ಕೊರೊನಾ ವಿಚಾರ ರಾಜಕೀಯ ವಿಷಯವಾಗಿ ಅಥವಾ ಚರ್ಚೆಯಾಗಿ ಬಳಕೆ ಮಾಡಿಕೊಳ್ಳಬಾರದು. ವೋಟ್ ಹಾಕಿ ಗೆಲ್ಲಿಸಿದರೆ ಉಚಿತ ಲಸಿಕೆ ಕೊಡುತ್ತೀರಾ ಸರಿ. ಸೋಲಿಸಿಬಿಟ್ಟರೆ ಜನರನ್ನು ಸಾಯಿಸಿ ಬಿಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ತಮ್ಮದೆ ಪಕ್ಷದ ಪ್ರಣಾಳಿಕೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕನ್ನಡ ನಾಡು ನುಡಿಗೆ ಜಕ್ಕಲಿ ಗ್ರಾಮದ ಕೊಡುಗೆ ಅಪಾರ :ವಿವೇಕಾನಂದಗೌಡ ಪಾಟೀಲ

ಉತ್ತರಪ್ರಭ ಸುದ್ದಿ ನರೆಗಲ್ಲ: ಕನ್ನಡ ನಾಡು ನುಡಿಗೆ ಗದಗ ಜಿಲ್ಲೆಯ ಜಕ್ಕಲಿ ಗ್ರಾಮ ಅಪಾರವಾದ ಕೊಡುಗೆ…

ಹಳೆ ವಿದ್ಯಾರ್ಥಿಯಿಂದ ಸರಕಾರಿ ಶಾಲೆಗೆ ಆರ್ಥಿಕ ಸಹಾಯ

ಯಾವ ಮಕ್ಕಳು ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರ ಶಾಲೆಗಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಉಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದು ಶಿಕ್ಷಣವಂತರಾಗಬೇಕು ಎಂದು ಮಹಾಂತೇಶ ಜಕ್ಕಲಿ ಹೇಳಿದರು.

ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣೆ

ಲಕ್ಷ್ಮೇಶ್ವರ: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ…

ನಟಿ ಜಸ್ಲೀನ್ ಅವತಾರಕ್ಕೆ ನೆಟ್ಟಿಗರು ಶಾಕ್!

ಸೆಲೆಬ್ರಟಿಗಳಿಗೆ ಅದೆಂತೆಂಥಾ ಹುಚ್ಚಿರುತ್ತೆ ಅಂತ ಊಹಿಸೋಕು ಆಗಲ್ಲ. ಪ್ರಚಾರಕ್ಕಾಗಿ ಎಂತೆಂಥ ಚಿತ್ರವಿಚಿತ್ರ ಅವತಾರ ತಾಳುತ್ತಾರೆ ಅಂತ ಕಲ್ಪನೆಗೂ ಅಸಾಧ್ಯ. ಇಂತಹ ಪ್ರಚಾರದ ಗೀಳಿಗೆ ಬಿದ್ದ ನಟಿಯೊಬ್ಬರು ಇದೀಗ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.