ದೆಹಲಿ: ಸೆಲೆಬ್ರಟಿಗಳಿಗೆ ಅದೆಂತೆಂಥಾ ಹುಚ್ಚಿರುತ್ತೆ ಅಂತ ಊಹಿಸೋಕು ಆಗಲ್ಲ. ಪ್ರಚಾರಕ್ಕಾಗಿ ಎಂತೆಂಥ ಚಿತ್ರವಿಚಿತ್ರ ಅವತಾರ ತಾಳುತ್ತಾರೆ ಅಂತ ಕಲ್ಪನೆಗೂ ಅಸಾಧ್ಯ. ಇಂತಹ ಪ್ರಚಾರದ ಗೀಳಿಗೆ ಬಿದ್ದ ನಟಿಯೊಬ್ಬರು ಇದೀಗ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ಸಾಮಾನ್ಯವಾಗಿ ಮದುಮಗಳು ಅಂದ ತಕ್ಷಣ ಆಕೆ ದಿರಿಸು ನಮ್ಮ ಕಣ್ಮುಂದೆ ಬರುತ್ತದೆ. ಆದರೆ ಈ ನಟಿ ಮದುಮಗಳಂತೆ ಸಿಂಗಾರಗೊಂಡ್ರು ತೊಟ್ಟಿದ್ದು ಮಾತ್ರ ಲೆಹೆಂಗಾ-ಶಾರ್ಟ್ಸ್. ಈ ಮೂಲಕ ನಟಿ ಜಸ್ಲೀನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಟೀಕೆ-ಟಿಪ್ಪಣೆಗೆ ಗುರಿಯಾಗಿದ್ದಾರೆ. ಜಸ್ಲೀನ್ ವರ್ತನೆ ಭಾರತೀಯ ಸಂಸ್ಕೃತಿಗೆ ಧಕ್ಕೆಯುಂಟುಮಾಡುವಂತಿದೆ. ಈ ಕಾರಣದಿಂದ ಅವರು ಜನರ ಕ್ಷಮೆ ಯಾಚಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಇನ್ನು ಕೆಲವರು ಜಸ್ಲೀನ್ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಜಸ್ಲೀನ್ ಅಂದ್ರೆ ಯಾರು ಅಂತ ಬಹಳಷ್ಟು ಗೊತ್ತಾಗದ ಬಹಳಷ್ಟು ಜನರಿಗೆ ಬಿಗ್ ಬಾಸ್ ಸೀಜನ್ 12ರ ಸ್ಪರ್ಧಿ ಅಂದ್ರೆ ಥಟ್ ಅಂತ ಗೊತ್ತಾಗುತ್ತೆ.

ನಟಿ, ಗಾಯಕಿ, ಬಿಗ್ ಬಾಸ್ ಸ್ಪರ್ಧಿ, ಜಸ್ಲೀನ್ ಮಾಥಾರೂ ವಧುವಿನಂತೆ ಸಿಂಗರಿಸಿಕೊಂಡು, ಅರ್ಧ ಲೆಹಂಗಾ ಕೆಳಗಡೆ ಶಾರ್ಟ್ಸ್ ಧರಿಸಿ ರಸ್ತೆಯಲ್ಲಿ ನಡೆದು ಬಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಮ್ಮ  ಹೊಸ ಅವತಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಲೆಹಂಗಾ – ಶಾರ್ಟ್ಸ್ ತೊಟ್ಟು ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಮುಖ ನೋಡಿದರೆ ಥೇಟ್ ವಧು. ಆದರೆ ವಧು ಅಲ್ಲ. ವಧುವಿನಂತೆಯೇ ಅಲಂಕರಿಸಿಕೊಂಡು ಕೆಂಪು ಬಣ್ಣದ ಲೆಹಂಗಾ ಟಾಪ್, ದುಪ್ಪಟ್ಟಾ ಹಾಗೂ ಜೀನ್ಸ್ ಶಾರ್ಟ್ಸ್ ಧರಿಸಿ ತಾನು ಅತ್ತೆಯ ಮನೆಗೆ ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಏನೇ ಆಗಲಿ ಜಸ್ಲೀನ್ ಉಡುಗೆ ಮಾತ್ರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

Leave a Reply

Your email address will not be published. Required fields are marked *

You May Also Like

ಸಿ.ಟಿ ರವಿ ಚೀಟಿ ಆಟ: ಕೊನೆಗೂ ಪಾಸಿಟಿವ್ ಅಂತೆ!

ಸಚಿವ ಸಿ.ಟಿ.ರವಿ ಎರಡು ದಿನದಿಂದ ತಮ್ಮ ಕೋರೊನಾ ಪರೀಕ್ಷೆಯ ಕುರಿತು ಟ್ವೀಟ್ ಮಾಡಿದ್ದೇ ಮಾಡಿದ್ದು. ಅವರ ಅನುಭವ ನೋಡಿದರೆ ಟೆಸ್ಟ್ ಫಲಿತಾಂಶ ‘ಪಾಸಿಟಿವ್, ನೆಗೆಟಿವ್’ ಎಂಬ ಎರಡು ಚೀಟಿಯಲ್ಲಿ ಒಂದನ್ನು ಎತ್ತಿಕೊಳ್ಳುವ ಆಟದಂತಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯೂ ಆಗಿದೆ.

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 164. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 2605 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 3248 ಸಕ್ರೀಯ ಪ್ರಕರಣಗಳಿವೆ.

ಮಹಾಮಾರಿಗೆ ತತ್ತರಿಸಿದ ಮಹಾರಾಷ್ಟ್ರ- ನಿನ್ನೆ ಒಂದೇ ದಿನ ಎಷ್ಟು ಕೇಸ್ ಗಳು ಗೊತ್ತಾ?

ಮುಂಬಯಿ : ಕೊರೊನಾ ಹಾಟ್ ಸ್ಪಾಟ್ ಎಂದೇ ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ…

ಮಹಿಳಾ ನರ್ಸ್ ಚಿಕಿತ್ಸೆ ನೀಡುವಂತೆ ಆಸ್ಪತ್ರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಯುವಕರು

ಅಪಘಾತದಲ್ಲಿ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ಆಗಮಿಸಿದ ಇಬ್ಬರು ನಮಗೆ ಮಹಿಳಾ ನರ್ಸ್ ಚಿಕಿತ್ಸೆ ನಿಡಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.