ಲಕ್ಷ್ಮೇಶ್ವರ: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಶಾಸಕ ರಾಮಣ್ಣ ಲಮಾಣಿ ಸಮೀಪದ ಕುಂದ್ರಳ್ಳಿ ತಾಂಡಾದಲ್ಲಿ ವಿತರಿಸಿದರು.

ಈ ವೇಳೆ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ, ಲಾಕ್‍ಡೌನ್ ಸಮಯದಲ್ಲಿ ಬಡ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ತೊಂದರೆಗೆ ಸ್ಪಂದಿಸಿ, ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ಆಹಾರ ಸಾಮಗ್ರಿಗಳ ಕಿಟ್ ವಿತರಿಸುತ್ತಿದೆ ಎಂದರು. 130 ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು.

ತಾಲ್ಲೂಕು ಕಾರ್ಮಿಕ ಇಲಾಖೆ ನಿರೀಕ್ಷಕಿ ಅನುರಾಧ, ಶಿರಹಟ್ಟಿ ಮಂಡಲದ ಬಿಜೆಪಿ ಘಟಕದ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಹಾಲಪ್ಪ ಸೂರಣಗಿ, ಬಸವರಾಜ ಲಮಾಣಿ, ಕೇಶವ ಲಮಾಣಿ, ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಗುಡಿಮನಿ, ಗೋಪಾಲ ಲಮಾಣಿ, ಆನಂದ ಲಮಾಣಿ, ಅರ್ಜುನ ಇದ್ದರು.

Leave a Reply

Your email address will not be published. Required fields are marked *

You May Also Like

ಭಾವಪೂರ್ಣ ಶ್ರದ್ಧಾಂಜಲಿ; ಶ್ರೀಮತಿ ಪ್ರೇಮಲಾಬಾಯಿ ಚಂದಪ್ಪ ರಾಠೋಡ

ನಿಧನ ಸುದ್ದಿ:ಉತ್ತರಪ್ರಭ ಸುದ್ದಿ ಗಜೇಂದ್ರಗಡ : ಪಟ್ಟಣದ ಹಿರಿಯ ಮಹಿಳೆ ಶ್ರೀಮತಿ ಪ್ರೇಮಲಾಬಾಯಿ ಚಂದಪ್ಪ ರಾಠೋಡ(85)…

ಸಾಮಾಜಿಕ ನ್ಯಾಯ ಒದಗಿಸಿ ಮುಸ್ಟೂರು ದಲಿತ ಯುವಕರಿಂದ ಮನವಿ

ಉತ್ತರಪ್ರಭ ಕಾರಟಗಿ: ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆಯು ಇಂದಿಗೂ ಜೀವಂತವಾಗಿದ್ದು, ಗ್ರಾಮದಲ್ಲಿ ವಾಸಿಸುವ 85ಕ್ಕೂ…

ಸೆಪ್ಟಂಬರ್ ಮೊದಲ ವಾರದಲ್ಲಿ ಪದವಿ ತರಗತಿಗಳು ಆರಂಭ

ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಮಸವಾದ ವಿಷಯ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗುವುದು ಯಾವಾಗ ಎನ್ನುವುದು. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ತರಗತಿಗಳು ಯಾವಾಗ ಆರಂಭವಾಗುತ್ತೆವೆಯೋ ಎನ್ನುವುದನ್ನೇ ಎದುರು ನೋಡುತ್ತಿದ್ದರು.