ಗದಗ: ನಗರದಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಾಗಿದೆ. ರಸ್ತೆಯ ಮಧ್ಯೆಯೇ ಪ್ರತಿ ದಿನ ಬಿಡಾಡಿ ದಿನಗಳ ಕಾದಾಟ ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ. ಇವುಗಳಿಂದಾಗಿ ಪ್ರತಿ ದಿನ ಒಂದಿಲ್ಲ ಒಂದು ಹಾನಿಯಾಗುತ್ತಿದೆ.

ಇಂದು ಕೂಡ ಬಿಡಾಡಿ ದನಗಳ ಕಾದಾಟ ನಗರದ ಹಳೆಯ ಡಿಸಿ ಕಚೇರಿ ಬಳಿ ನಡೆದಿದೆ. ಮದವೇರಿದ ಎರಡು ಬಿಡಾಡಿ ಗೂಳಿಗಳು, ತಲೆ ಡಿಕ್ಕಿ ಹೊಡೆಯುತ್ತ ಗುಟುರು ಹಾಕಿವೆ. ಇದನ್ನು ಕಂಡು ಅಲ್ಲಿದ್ದ ಜನ ಭಯದಿಂದ ಅಲ್ಲಿಯೇ ನಿಂತಿದ್ದರು. ವಾಹನ ಸವಾರರು ತಮ್ಮ ವಾಹನಗಳನ್ನು ಗೂಳಿ ಬರುತ್ತಿದ್ದಂತೆ ಹಿಂದೆ ಸರಿಯುತ್ತ ಭಯದಿಂದ ಸಾಗಿದ್ದಾರೆ.

ಹೀಗೆ ಒಂದು ಗೂಳಿ ಕಾಳಗ ಮಾಡಿ ಮಾಡಿ ಸುಸ್ತಾಗಿ ಫುಟ್ ಪಾತ್ ಮೇಲೆ ಬಂದು ನಿಂತಿದೆ. ಆಗ ಮತ್ತೊಂದು ಗೂಳಿ ಅದಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಫುಟ್ ಪಾತ್ ಬಳಿ ನಿಲ್ಲಿಸಿದ್ದ ಮೂರು ಬೈಕ್ ಗಳು ಜಖಂ ಆಗಿವೆ. ಇದರಿಂದಾಗಿ ವಾಹನ ಸವಾರರು ಜಿಲ್ಲಾಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಬಿಡಾಡಿ ದನಗಳ ಬಗ್ಗೆ ಕ್ರಮ ವಹಿಸಿ, ಜನರಿಗೆ ನೆಮ್ಮದಿ ಕಲ್ಪಿಸೇಕೆದು ಪ್ರಜ್ಞಾವಂತರು ಮನವಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಪಾಸಿಟಿವ್ ಹಿನ್ನೆಲೆ ಸವಣೂರು ಸಂಪೂರ್ಣ ಲಾಕ್ ಡೌನ್

ಸವಣೂರು ಪಟ್ಟಣವನ್ನಿಂದು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಎಲ್ಲ ಗಡಿಗಳನ್ನ ಬಂದ್ ಮಾಡಿ ಯಾರೂ ಹೊರ ಹೊಗದಂತೆ ಮತ್ತು ಒಳ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೀಲ್ ಡೌನ್ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಸಂಘಗಳಲ್ಲಿ ಪಡೆದ ಸಾಲದ ಪೂರ್ತಿಬಾಕಿ ಕಟ್ಟಬೇಕು ಎಂಬ ಆದೇಶ ಹಿಂಪಡೆಯಲು ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ/ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಆಲಮಟ್ಟಿ ಬಸ್ ನಿಲ್ದಾಣಕ್ಕೆ ಸದನದಲ್ಲಿ ಆಗ್ರಹ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಕಳೆದ ಐದು ವರ್ಷದಿಂದ ಬಸ್ ನಿಲ್ದಾಣ ನಿಮಾ೯ಣಕ್ಕಾಗಿ ಜನಪ್ರತಿನಿಧಿ ಶಾಸಕರೊಬ್ಬರು ನಿರಂತರ…