ಉತ್ತರಪ್ರಭ ಸುದ್ದಿ

ಆಲಮಟ್ಟಿ: ಕಳೆದ ಐದು ವರ್ಷದಿಂದ ಬಸ್ ನಿಲ್ದಾಣ ನಿಮಾ೯ಣಕ್ಕಾಗಿ ಜನಪ್ರತಿನಿಧಿ ಶಾಸಕರೊಬ್ಬರು ನಿರಂತರ ಸಕಾ೯ರಕ್ಕೆ ಮನವಿ, ಒತ್ತಾಯ ಮಾಡುತ್ತಿದ್ದಾಗ್ಯೂ ಸಕಾ೯ರ ಈ ದಿಸೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ವಿಧಾನ ಮಂಡಲ ಅಧಿವೇಶನ ಸದನದಲ್ಲಿ ತಮ್ಮ ಅಳಿಲು ತೋಡಿಕೊಂಡು ಸಕಾ೯ರದ ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದ ಘಟನೆಯೊಂದು ಜರುಗಿದೆ.

ಅಂದಹಾಗೆ ಈ ವಿಷಯ ಪ್ರಸ್ತಾಪಿಸಿ ಘಜಿ೯ಸಿದ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕ ಸಕಾ೯ರದ ದಿವ್ಯ ನಿರ್ಲಕ್ಷ್ಯದ ನಡೆ ತಮ್ಮ ವಾಕ್ಸಮರ ಮೂಲಕ ಖಂಡಿಸಿ ಗಮನ ಸೆಳೆದಿದ್ದಾರೆ. ಪ್ರವಾಸಿ ತಾಣ ಆಲಮಟ್ಟಿಯ ಪೆಟ್ರೋಲ್ ಪಂಪ್ ಬಳಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸದಿರುವುದನ್ನು ವಿರೋಧಿಸಿ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ವಿಧಾನ ಮಂಡಲದ ಬುಧವಾರದ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಸತತ ಐದು ವರ್ಷದಿಂದ ಪ್ರಯತ್ನಿಸಿದೆ. ಆಗ ಜಾಗ ಇಲ್ಲ ಎಂಬ ಉತ್ತರ ಸಾರಿಗೆ ಇಲಾಖೆಯದ್ದು. ನಾನೇ ಖುದ್ದು ಆಸಕ್ತಿ ವಹಿಸಿ ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿಯ ಅರಳದಿನ್ನಿ ಸರ್ವೆ ಭಾಗದ ಲೋಕೋಪಯೋಗಿ ಇಲಾಖೆಯ 1.29 ಗುಂಟೆ ಜಾಗವನ್ನು ಸಾರಿಗೆ ಇಲಾಖೆಗೆ 2020 ರಲ್ಲಿ ಹಸ್ತಾಂತರಕ್ಕೆ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಿಂದ ಆದೇಶ ಮಾಡಿಸಿದೆ. ಆದರೆ ಇನ್ನೂವರೆಗೂ ಸಾರಿಗೆ ಇಲಾಖೆ ತನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಕಳೆದ ಅಕ್ಟೋಬರ್ ನಲ್ಲಿಯೂ ಚುಕ್ಕೆ ರಹಿತ ಪ್ರಶ್ನೆ ಕೇಳಿದಾಗ ಶೀಘ್ರದಲ್ಲಿಯೇ ಭೂಮಿ ಹಸ್ತಾಂತರಿಸಿ ಬಸ್ ನಿಲ್ದಾಣ ನಿರ್ಮಿಸುವ ಭರವಸೆಯನ್ನು ಸರ್ಕಾರ ನೀಡಿತ್ತು, ಆದರೆ ವರ್ಷ ಕಳೆಯುತ್ತಾ ಬಂದರೂ ಇನ್ನೂ ಜಾಗವೇ ಹಸ್ತಾಂತರಗೊಂಡಿಲ್ಲ ಎಂದು ಪಾಟೀಲ ವಿಧಾನ ಮಂಡಲದ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

48 ಗಂಟೆಯಲ್ಲಿ ಉತಾರೆ:
ನಿವೇಶನ ಹಸ್ತಾಂತರದ ಬಗ್ಗೆ ಮಂಗಳವಾರವೇ ಜಿಲ್ಲಾಧಿಕಾರಿಯ ಜತೆ ಮಾತನಾಡಿದ್ದು, 48 ಗಂಟೆಯೊಳಗೆ ಸಾರಿಗೆ ಇಲಾಖೆ ಹೆಸರಿನಲ್ಲಿ ಉತಾರೆ ಮಾಡಿಸಿಕೊಡುವುದಾಗಿ ವಿಜಯಪುರ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮಲು ಉತ್ತರಿಸಿದರು. ನಿತ್ಯವೂ ನೂರಾರು ಪ್ರವಾಸಿಗರು ಬರುವ ಉದ್ಯಾನ ನಗರಿ ಆಲಮಟ್ಟಿಗೆ ಬಸ್ ನಿಲ್ದಾಣ ಗಗನ ಕುಸುಮ ವಾಗಿದೆ. ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಬಂದ ಪ್ರವಾಸಿಗರು, ಪ್ರಯಾಣಿಕರು ಪರದಾಡಬೇಕಾಗುತ್ತದೆ, ಬಿಸಲು, ಮಳೆ,ಚಳಿ ಎನ್ನದೇ ನಿತ್ಯವೂ ರಸ್ತೆ ಬದಿಯಲ್ಲೇ ನಿಂತು ಬಸ್ ಗಾಗಿ ಕಾಯಬೇಕಾದ ಪರಸ್ಥಿತಿ ಸದ್ಯ ಚಾಲ್ತಿಯಲ್ಲಿದೆ. ಪ್ರಯಾಣಿಕರ,ಪ್ರವಾಸಿಗರ ಹಿತ ದೃಷ್ಟಿಯಿಂದ ಇಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಇದೆ. ಈಗಲಾದರು ಈ ಸಮಸ್ಯೆ ಮನಗಂಡು ಶೀಘ್ರವೇ ನೂತನ ಬಸ್ ನಿಲ್ದಾಣ ನಿಮಾ೯ಣಕ್ಕೆ ಸಕಾ೯ರ ಮುಂದಾಗಿ ಚಾಲನೆ ನೀಡಬೇಕು.

ಶಾಸಕರ ಕಳಕಳಿ,ಪ್ರಯಾಣಿಕರ ಹೀನಾಯ ಸ್ಥಿತಿ ಅಥೈ೯ಸಿಕೊಂಡು ಬಸ್ ನಿಲ್ದಾಣಕ್ಕೆ ಮೂರ್ಹತ ಇರಿಸಬೇಕು ಎಂಬುದು ಈ ಭಾಗದ ಜನತೆಯ ಒತ್ತಾಸೆಯೂ ಕೂಡಾ ಅಗಿದೆ. ಈ ನಿರೀಕ್ಷೆ ಈಡೇರುತ್ತೋ ಅಥವಾ ಮತ್ತೆ ಠೂಸ್ಸಾಗತೋ ? ನಿರೀಕ್ಷೆ ಮಾತ್ರ ಇಲ್ಲಿ ನಿರಂತರ. ಜನತೆಯ ಬಹುದಿನಗಳ ಈ ಬೇಡಿಕೆ ಹುಸಿಯಾಗದಿರಲಿ. ರಸ್ತೆ ಪಕ್ಕ ಪ್ರಯಾಣಿಕ ಜನತೆ ಎಲ್ಲ ಋತುವಿನಲ್ಲಿ ನಿಲ್ಲುವ ನರಕಮಯ ಪ್ರಯಾಸ ಕೊನೆಗಾಣಲಿ. ಸಂತಸದ ಪಯಣವುಳ್ಳ ವ್ಯವಸ್ಥೆ ಉದ್ಯಾನ ನಗರಿ ಛಾಪು ಹೊಂದಿರುವ ಆಲಮಟ್ಟಿಯಲ್ಲಿ ಸೂಸುತ್ರವಾಗಿ ಸಾಗಲಿ ಎಂಬುದೇ ಮಾನವೀಯ ಮನತನದ ಕಳಕಳಿ ಅಷ್ಟೇ !

Leave a Reply

Your email address will not be published. Required fields are marked *

You May Also Like

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಕುರಿಕಾರ ಗೆಲುವು ಖಚಿತ: ಮಾಜಿ ಶಾಸಕ ಜಿ.ಎಸ್.ಪಾಟೀಲ

ಉತ್ತರಪ್ರಭ ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ…

ಸಾರಿಗೆ ನೌಕರರಿಗೆ ಅಭದ್ರತೆ: ಉದ್ಯೋಗ ಕಡಿತಕ್ಕೆ ಸ್ವಯಂ ನಿವೃತ್ತಿಯ ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ…

ಇನ್ಮುಂದೇ ಚುನಾಯಿತ ಪ್ರತಿನಿಧಿಗಳು ಕೊರೊನಾ ವಾರಿಯರ್ಸ್

ಬೆಂಗಳೂರು: ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಮೊದಲ ಡೋಸ್ ಕೊವಿಡ್ ಲಸಿಕೆ ನೀಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಆಲಮಟ್ಟಿ : ಕೋಟಿ ಕಂಠ ಗೀತ ಗಾಯನ ಸಂಭ್ರಮ

ಆಲಮಟ್ಟಿ:  ಇಲ್ಲಿನ ಶಾಲಾ,ಕಾಲೇಜುಗಳಲ್ಲಿ ಶುಕ್ರವಾರ ಕನ್ನಡ ಸಿರಿತನದ ಗೀತೆಗಳು ಮೊಳಗಿದವು. ಕನ್ನಡಮ್ಮನ ಜ್ಞಾನ ದೀಪದ ಗೀತಗಾನ…