ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.

2016ರಲ್ಲಿ ಎಂ.ಎಸ್. ಧೋನಿ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡ ಪರ ಆಡಿದ್ದರು. ಆ ಸಂದರ್ಭದಲ್ಲಿ ಚೆನ್ನೈ ತಂಡ ಬ್ಯಾನ್ ಆಗಿತ್ತು. ಅಕ್ಷರ್ ಪಟೇಲ್ ಅವರು ಕಿಂಗ್ಸ್ ಇಲೆವೆನ್ ತಂಡದ ಪರ ಆಡುತ್ತಿದ್ದರು. ಆ ವರ್ಷದ ವಿಶಾಖಪಟ್ಟಣದಲ್ಲಿ ಮೇ 21 ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ 7 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು.

ಈ ಗುರಿ ಬೆನ್ನಟ್ಟಿದ ಪುಣೆ ತಂಡಕ್ಕೆ ಕೊನೆಯ ಓವರ್ ನಲ್ಲಿ 23 ರನ್‌ಗಳು ಬೇಕಿತ್ತು. ಕ್ರೀಜ್ ನಲ್ಲಿ ಮಹೇಂದ್ರಸಿಂಗ್ ಧೋನಿ ಇದ್ದರೆ, ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಆಗ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸುವ ಮೂಲಕ ಧೋನಿ 23 ರನ್ ಬಾರಿಸಿದ್ದರು.

ನಿನ್ನೆ ನಡೆದ ಪಂದ್ಯದಲ್ಲಿ ದೆಹಲಿಗೆ 17 ರನ್ ಬೇಕಿತ್ತು. ಜಡೇಜಾ ಕೊನೆಯ ಓವರ್ ಎಸೆಯಲು ಬಂದಿದ್ದರು. ಈ ಸಂದರ್ಭದಲ್ಲಿ ಅಕ್ಷರ್‌ ಪಟೇಲ್‌ ಮೂರು ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. ಅಕ್ಷರ್ ಅವರ ಆಟಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದು, ಧೋನಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಹೈದರಾಬಾದ್ ತಂಡವನ್ನು ರೈಡ್ ಮಾಡಿ ಮೊದಲ ಜಯ ದಾಖಲಿಸಿದ ಕೋಲ್ಕತ್ತಾ!

ಶಾರ್ಜಾ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ…

ಹಾರ್ದಿಕ್ ಪಾಂಡ್ಯಗೆ ಗೆಳತಿಯ ಸಂದೇಶ!

ಮುಂಬಯಿ : ನೀವು ನನ್ನ ಪೂರ್ಣಗೊಳಿಸಿದ್ದೀರಿ ಎಂದು ಭಾರತ ಕ್ರಿಕೆಟ್ ತಂಡದ ಆಲ್ರೌಂವಡರ್ ಹಾರ್ದಿಕ್ ಪಾಂಡ್ಯ ಅವರ ಗೆಳತಿ ನತಾಶಾ ಸ್ಟಾಂಕೋವಿಕ್ ಹೇಳಿದ್ದಾರೆ.

ಹರ್ಭಜನ್ ಸಿಂಗ್ ವಿರುದ್ಧ ಚೆನ್ನೈ ಅಭಿಮಾನಿಗಳೇಕೆ ಕಿಡಿ ಕಾರುತ್ತಿದ್ದಾರೆ?

ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಸನ್‍ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ, ಆಕ್ಷೇಪಿಸುತ್ತಿದ್ದಂತೆ ತೀರ್ಮಾನ ಬದಲಿಸಿದ್ದ ಘಟನೆ ಸದ್ಯ ಚೆರ್ಚೆಗೆ ಕಾರಣವಾಗಿದೆ.

ಗಂಗೂಲಿ ಬಗ್ಗೆ ಪಾರ್ಥಿವ್ ಪಟೇಲ್ ಹೇಳಿದ್ದೇನು?

ಮುಂಬಯಿ : ಕ್ರಿಕೆಟ್ ಇತಿಹಾಸದಲ್ಲಿ ಎಂ.ಎಸ್. ಧೋನಿಗಿಂತಲೂ ಸೌರವ್ ಗಂಗೂಲಿಯವರು ಬಹಳ ಪರಿಣಾಮಕಾರಿ ನಾಯಕ ಎಂದು ಭಾರತದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ.