ಶಾರ್ಜಾ : ಇಂದಿನ ಪಂದ್ಯಕ್ಕೂ ಮೊದಲು ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ಪಂದ್ಯಕ್ಕೂ ಮೊದಲು ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕೊಹ್ಲಿ ವ್ಯಾಯಾಮ ಮಾಡಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಡ್ಯಾನ್ಸ್‌ ಮಾಡುತ್ತಾ ವ್ಯಾಯಾಮ ಮಾಡಿದ್ದಾರೆ. ಒಮ್ಮೆ ಕುಳಿತುಕೊಂಡೇ ಕೈಯನ್ನು ಅಲ್ಲಡಿಸುತ್ತ ನೃತ್ಯ ಮಾಡಿದರೆ ಮತ್ತೊಮ್ಮೆ ಬೆನ್ನನ್ನು ನೆಲಕ್ಕೆ ಹಾಕುತ್ತ ಡ್ಯಾನ್ಸ್ ಮಾಡಿದ್ದಾರೆ. 

ಅಲ್ಲದೇ, ಈ ಸಂದರ್ಭದಲ್ಲಿ ಕೊಹ್ಲಿ ಹೆಚ್ಚಿನ ಸಂಭ್ರಮದಲ್ಲಿದ್ದರು. ಸದ್ಯ ಈ ವಿಡಿಯೋ ಅಭಿಮಾನಿಗಳ ಮನಸ್ಸು ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿಡಿಯೋ ಶೇರ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೇ, ಮೊದಲು ಬ್ಯಾಟಿಂಗ್ ಮಾಡಿರುವ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿದೆ. ವಿರಾಟ್‌ ಕೊಹ್ಲಿ 48 ರನ್‌(39 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆಗಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿ ಟೂರ್ನಿಯಿಂದ ಹೊರ ನಡೆದ ಚೆನ್ನೈ!

ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ಪಾಲಿನ ಕೊನೆಯ ಪಂದ್ಯವನ್ನು ಗೆಲ್ಲುವುದರ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದು, ಪಂಜಾಬ್ ತಂಡ ಕೂಡ ಹೊರ ಹೋಗುವಂತೆ ಮಾಡಿದೆ.

ಗೆಲ್ಲಲು ಒಂದು ರನ್ ಬೇಕಿದ್ದರೂ ಕೊಹ್ಲಿ ಓಡಿದ್ದು ಎರಡು ರನ್…ಏಕೆ?

ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರು ಗೆಲ್ಲಲು ಒಂದು ರನ್ ಬೇಕಿದ್ದರೂ 2 ರನ್ ಗಳನ್ನು ಓಡಿದ್ದಕ್ಕೆ ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಧೋನಿ ವಿರುದ್ಧ ಮೂರು ಸಿಕ್ಸರ್ ಸಿಡಿಸುವ ಮೂಲಕ ಅಕ್ಷರ್ ಸೇಡು ತೀರಿಸಿಕೊಂಡರೆ?

ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.

ಪಂಜಾಬ್ ತಂಡ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದ ರಾಜಸ್ಥಾನ್!

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಐತಿಹಾಸಿಕ ಗೆಲುವನ್ನು ರಾಜಸ್ಥಾನ್ ರಾಯಲ್ಸ್ ದಾಖಲಿಸಿದೆ.