ತಿರುವನಂತಪುರಂ : ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವಿಸಿದ ಐವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್ನನಲ್ಲಿ ನಡೆದಿದೆ.

ರಾಮನ್ (61), ಅಯ್ಯಪ್ಪನ್ (55), ಅರುಣ್ (22), ಶಿವನ್ (45) ಮತ್ತು ಮೂರ್ತಿ (24) ಮೃತ ದುರ್ದೈವಿಗಳು. ಸತ್ತವರೆಲ್ಲ ಪಯಾತುಕಾಡು ಪ್ರದೇಶದ ಬುಡಕಟ್ಟು ವಾಸಿಗಳಾಗಿದ್ದಾರೆ. ಇವರೆಲ್ಲ ಒಂದೇ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ಸಂಜೆ ಒಟ್ಟಿಗೆ ಮದ್ಯ ಸೇವಿಸಿ ಅಂದೇ ರಾತ್ರಿಯಲ್ಲಿ ಕುಸಿದು ಬಿದಿದ್ದಾರೆ ಎಂದು ತಿಳಿದು ಬಂದಿದೆ.


ನಿರಂತರವಾಗಿ ವಾಂತಿ ಮಾಡಿಕೊಂಡ ಪರಿಣಾಮ ಅವರೆಲ್ಲ ಸಾವನ್ನಪ್ಪಿದ್ದಾರೆ. ಇವರ ಜೊತೆ ಮದ್ಯ ಸೇವಿಸಿದ ಮಹಿಳೆಯರೂ ಸೇರಿದಂತೆ ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

ಆಸ್ಟ್ರಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರರ 'ಅಮೃತಮತಿ' ಆಯ್ಕೆ

ಬೆಂಗಳೂರು: ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್ನ ಪುಟ್ಟಣ್ಣ ನಿರ್ಮಿಸಿ, ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ‘ಅಮೃತಮತಿ’ ಕನ್ನಡ ಚಿತ್ರ…

ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸಚಿವ!

ಔರಂಗಾಬಾದ್ : ಗಡಿ ಹಾಗೂ ಭಾಷೆಯ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಕೇರಳದಲ್ಲಿ ಕೊರೊನಾ ಪ್ರಮಾಣ ಇಳಿಕೆ: ಪಿಣರಾಯಿ ವಿಜಯನ್

ಇಂದು ಕೇರಳದಲ್ಲಿ ಹೊಸದಾಗಿ ಕೊರೊನಾದ 40 ಪ್ರಕರಣಗಳು ದಾಖಲಾಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಪೊಲೀಸರಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!

ಒಡಿಶಾ : ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಠಾಣೆಯ ಸಿಬ್ಬಂದಿಯೇ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನವೀಯ…