ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಕನಿಷ್ಠ ಮೊತ್ತ ದಾಖಲಿಸುವ ಮೂಲಕ ತಾನು ಆಡಿದ 10ನೇ ಪಂದ್ಯದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್‌, ಪಾಯಿಂಟ್ಸ್ ಟೇಬಲ್‌ ಕೊನೆಯ ಸ್ಥಾನದಲ್ಲಿದೆ. ಈ ಸಾಲಿನಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದು, 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಷ್ಟೇ ಅಲ್ಲದೇ, ಹೀನಾಯ ಪ್ರದರ್ಶನ ತೋರಿದ ತಂಡಗಳಲ್ಲಿ ಒಂದಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್, ಚೆನ್ನೈ ತಂಡದ ಪ್ರದರ್ಶನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಏಳು ವಿಕೆಟ್‌ ಗಳ ಹೀನಾಯ ಸೋಲು ಕಂಡಿದೆ. ಇದರಿಂದಾಗಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ನಾವು ಮೊದಲ ವರ್ಷವನ್ನು ಗೆದ್ದಿದ್ದೇವೆ(2018), ಕಳೆದ ವರ್ಷ ಕೊನೆಯ ಎಸೆತದಲ್ಲಿ ಚಾಂಪಿಯನ್ ಪಟ್ಟ ಕಳೆದುಕೊಂಡೆವು. ಸದ್ಯ ಮೂರನೇ ವರ್ಷದಲ್ಲಿ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಫ್ಲೆಮಿಂಗ್ ಹೇಳಿದ್ದಾರೆ.

ರಾಜಸ್ಥಾನ್ ತಂಡದ ವಿರುದ್ಧದ ಸೋಲಿನ ಬಳಿಕ, ತಂಡದ ನಾಯಕ ಧೋನಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕೇದಾರ್ ಜಾಧವ್, ಪಿಯೂಷ್ ಚಾವ್ಲಾರಂತಹ ಆಟಗಾರರನ್ನು ಪ್ಲೇಯಿಂಗ್‌ ಇಲೆವೆನ್‌ ನಲ್ಲಿ ಆಡಿಸಿದ್ದರ ಕುರಿತು ವಿರೋಧ ವ್ಯಕ್ತವಾಗುತ್ತಿವೆ. ಐಪಿಎಲ್ 12ನೇ ಆವೃತ್ತಿಯ ಅತಿ ಹೆಚ್ಚು ವಿಕೆಟ್ ಪಡೆದ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದ ಇಮ್ರಾನ್ ತಾಹಿರ್ ಅವರು ಮೊದಲ 10 ಪಂದ್ಯಗಳಿಗೆ ಬೆಂಚ್‌ ನಲ್ಲಿಯೇ ಕುರಿಸಿದ ಧೋನಿ ಅವರ ಅನುಚಿತ ತಂಡದ ನಿರ್ವಹಣೆ ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿದೆ.

Leave a Reply

Your email address will not be published. Required fields are marked *

You May Also Like

ಹೊಸ ದಾಖಲೆ ಬರೆದ ಕ್ರಿಸ್ ಗೇಲ್!

ಕ್ರಿಕೆಟ್: ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಕೆರೆಬಿಯನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್…

ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

ಹರ್ಭಜನ್ ಸಿಂಗ್ ವಿರುದ್ಧ ಚೆನ್ನೈ ಅಭಿಮಾನಿಗಳೇಕೆ ಕಿಡಿ ಕಾರುತ್ತಿದ್ದಾರೆ?

ಮುಂಬಯಿ : ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಸನ್‍ ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ನಡೆದ ಪಂದ್ಯದ ಸಂದರ್ಭದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ, ಆಕ್ಷೇಪಿಸುತ್ತಿದ್ದಂತೆ ತೀರ್ಮಾನ ಬದಲಿಸಿದ್ದ ಘಟನೆ ಸದ್ಯ ಚೆರ್ಚೆಗೆ ಕಾರಣವಾಗಿದೆ.

ಚೆನ್ನೈ ತಂಡದ ಕೆಲವರು ಸರ್ಕಾರಿ ನೌಕರಿ ಸಿಕ್ಕಂತೆ ಮಾಡುತ್ತಿದ್ದಾರೆ – ಸೆಹ್ವಾಗ್!

ಮುಂಬಯಿ : ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.