ನರೇಗಲ್ಲ: ನಿಗದಿತ ಸಮಯಕ್ಕೆ ಮೇಲ್ಸೆತುವೆ ಕಾಮಗಾರಿ ಮುಕ್ತಾಯವಾಗದ ಕಾರಣ ಗ್ರಾಮಸ್ಥರ ಸ್ಥಿತಿ ಕೊಂಕಣಾ ಸುತ್ತಿ ಮೈಲಾರಕ್ಕೆ ಹೋದ್ರು ಅನ್ನುವಂತಾಗಿದೆ.

ಸಮೀಪದ ಹೊಸಳ್ಳಿ ಜಕ್ಕಲಿ ರಸ್ತೆಯ ಗಡ್ಡಿ ಹಳ್ಳಕ್ಕೆ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಂದಾಜು ಒಂದುವರೆ ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ. ಕಾಮಗಾರಿ ಏನೋ ನಡೆದಿದೆ. ಆದ್ರೆ ಪರ್ಯಾಯ ರಸ್ತೆಯಿಲ್ಲದೆ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ.

ಈ ಯೋಜನೆ ಮಾಜಿ ಶಾಸಕ ಜ್ಞಾನದೇವ ದೂಡಮೇಟಿಯವರ ಕನಸಿನ ಕೂಸು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸೇತುವೆ ನಿರ್ಮಾಣದಿಂದ ನೇರ ಮಾರ್ಗ

ಮೇಲ್ಸೇತುವೆಯಿಂದ ಗದಗದಿಂದ ಗುಡೂರ ತಲುಪಲು ನೇರ ಮಾರ್ಗ ದೊರೆಯುತ್ತದೆ. ಕೂಟುಮಚಗಿ, ನರೇಗಲ್ಲ ಜಕ್ಕಲಿ, ಹೊಸಳ್ಳಿ, ಇಟಗಿಯಿಂದ ಗುಡೂರಿಗೆ ಸಂಪರ್ಕ ದೊರೆಯುತ್ತದೆ.

ಮಳೆಗಾಲದಲ್ಲಿ ಗಡ್ಡಿಹಳ್ಳ ತುಂಬಿ ಹರಿದರೆ ರಸ್ತೆಯ ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಹೀಗಾಗಿ ಈ ಸೇತುವೆ ಕಾಮಗಾರಿಯಿಂದ ಸ್ಥಳೀಯರು ಸಂತಸ ಗೊಂಡಿದ್ದಾರೆ. ಆದರೆ ಕಾಮಗಾರಿ ವಿಳಂಬದಿಂದ ಆಗುತ್ತಿರುವ ತೊಂದರೆಗೆ ಇದೀಗ ಸಂಕಟವೂ ಪಡುತ್ತಿದ್ದಾರೆ.

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ

ಒಂದ್-ಒಂದುವರಿ ವರ್ಷದ್ ಹೊತ್ತಾತ್ರಿ. ಮಳೆ ಬಂದ್ರ ಮನಿ ಸೇರೋದು ಕಷ್ಟ ಆಗೈತಿ. ಗದಗದಿಂದ 40 ಕಿಲೋಮೀಟರ್ ದಾಗ ಊರ ಸೇರತಿದ್ವಿ. ಈಗ ಕಾಮವಾರಿನೂ ಲಗೂನಾ ಮುಗಿವಲ್ದ 60 ಕಿಲೋಮೀಟರ್ ಸುತ್ ಹೊಡೆದ್ ಊರ ಸೇರಾಕುಂತಿವಿ. ಲಗೂನ ಸೇತುವೆ ಕೆಲ್ಸಾ ಮುಗಿಸಿ ನಮ್ ಸಮಸ್ಯೆ ಬಗೆಹರಿಸ್ರಿ.

ಸಂಗಮೇಶ್ ಮೆಣಸಗಿ, ರಾಜೇಂದ್ರ ಜಕ್ಕಲಿ, ಸ್ಥಳೀಯರು.

1.74 ಕೋಟಿ ಮೊತ್ತದ ಕಾಮಗಾರಿ

ಶಾಸಕ ಕಳಕಪ್ಪ ಬಂಡಿ ಅವರು 2018ರಲ್ಲಿ 1.74 ಕೋಟಿ ಮೊತ್ತದ ಈ ಕಾಮಗಾರಿಗೆ ಚಾಲನೆ ನೀಡಿದ್ದರು. ಶೇ.50 ಮಾತ್ರ ಕಾಮಗಾರಿ ಮುಗಿದಿದ್ದು ಉಳಿದ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭ ಮಾಡಿದ್ದರಿಂದಾಗಿ ಸ್ವಲ್ಪ ಮಳೆಯಾದರೆ ಸಾಕು ಸಂಚಾರ ಸ್ಥಗಿತವಾಗುತ್ತದೆ.

ಮಳೆಗಾಲ ಮುಗಿದ ನಂತರ ಕಾಮಗಾರಿ

ಹೊಸಳ್ಳಿ-ಜಕ್ಕಲಿ ಗಡ್ಡಿ ಹಳ್ಳದ ಮೇಲ್ಸೇತುವೆ ಕಾಮಗಾರಿ ಮಳಗಾಲವಿದ್ದರಿಂದ ಸ್ಥಗಿತಗೊಂಡಿದೆ. ದೊಡ್ಡ ಪ್ರಮಾಣದ ಕ್ರೇನ್ ಬಳಸಿ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ಮಳೆಗಾಲ ಕಳೆದ ಮೇಲೆ ಕಾಮಗಾರಿ ಮುಂದುವರೆಸುತ್ತೆವೆ. – ರಾಜಶೇಖರ, ಪ್ರೊಜೆಕ್ಟ್ ಮ್ಯಾನೇಜರ್

40 ಕಿಮಿ ರಸ್ತೆಗೆ 60 ಕಿಮಿ ಸುತ್ತು

ಗದಗದಿಂದ ಹೊಸಳ್ಳಿಗೆ 40 ಕಿಮಿ ಅಂತರವಿದೆ. ಆದರೆ ಈಗ ಕಾಮಗಾರಿ ನಡೆದಿರುವುದರಿಂದ ಇಲ್ಲಿನ ಜನರು ರೋಣ ಮಾರ್ಗವಾಗಿಯೇ ಊರು ಸೇರಬೇಕಿದೆ. ಇದರಿಂದ 20 ಕಿಮಿ ಹೆಚ್ಚುವರಿಯಾಗಿ ಅಂದರೆ 60 ಕಿಮಿ ದೂರವಾಗುತ್ತದೆ. ಇದರಿಂದ ಪ್ರಯಾಣಿಕರ ಸಮಯ ಹಾಗೂ ಹೆಚ್ಚು ಹಣ ವ್ಯಯವಾಗುತ್ತದೆ. ಇನ್ನು ಮಳೆಯಾದರೆ ಸಾಕು ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಕಾಮಗಾರಿ ಯಾವಾಗ ಮುಗಿಯಿತ್ತೂ ಅಂತಾ ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ.


Leave a Reply

Your email address will not be published. Required fields are marked *

You May Also Like

ಆನ್ ಲೈನ್ ಶಿಕ್ಷಣದ ಬಗ್ಗೆ ನಾಳೆ ಮಹತ್ವದ ಸಭೆ: ಸಚಿವ ಸುರೇಶ್ ಕುಮಾರ್

ಎಲ್ ಕೆಜಿ, ಯುಕೆಜಿ ಆನ್ ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒಳಿತಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಸೋಂಕಿತರ ವಿಶೇಷ ಚಿಕಿತ್ಸೆಗಾಗಿ ಐಸಿಯು ವಾರ್ಡನಲ್ಲಿ…

ಹಾನಗಲ್ ಬೈ ಎಲಕ್ಷನ್ ನಲ್ಲಿ ಕಾಂಗ್ರಸ್ ಗೆ ಜಯ

ಹಾನಗಲ್: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7598 ಮತಗಳ ಅಂತರದಿಂದ ಗೆಲುವು.ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ…