ಉಡುಪಿ: ಎಲ್ ಕೆಜಿ, ಯುಕೆಜಿ ಆನ್ ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒಳಿತಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಅವರು ಈ ಕುರಿತು ಉಡುಪಿಯಲ್ಲಿ ಮಾತನಾಡಿ, ಆನ್ಮ ಲೈನ್ ಲೈನ್ ಶಿಕ್ಷಣ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಿಕ್ಷಕರ, ಪೋಷಕರಿಗೂ ಒತ್ತಡವನ್ನುಂಟು ಮಾಡುತ್ತದೆ. ಚಿಕ್ಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಆರೋಗ್ಯಕರ ಅಲ್ಲ. ಆನ್ ಲೈನ್ ಶಿಕ್ಷಣ ಕೊಡುವುದು ಹಣ ಮಾಡುವ ದಾರಿ ಆಗಬಾರದು. ಹೀಗಾಗಿ ಈಬಗ್ಗೆ ನಾಳೆ ಸಭೆ ನಡೆಸಲಿದ್ದೇನೆ. ಆನ್ ಲೈನ್ ಶಿಕ್ಷಣ ನೀಡುವ ಕುರಿತಂತೆ ಈಗಾಗಲೇ ಸಭೆ ನಡೆಸಿದ್ದು, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಭೆ ಅಪೂರ್ಣವಾಗಿದೆ. ನಾಳೆ ಮತ್ತೆ ಸಭೆ ಮಾಡುತ್ತೇವೆ. ನಿಮ್ಕಾನ್ಸ್ ನ ಮನೋರೋಗ ತಜ್ಞರು ಸಭೆಯಲ್ಲಿ ಇರುತ್ತಾರೆ. ಈ ಬಗ್ಗೆ ನಾಳೆ ವಿಸ್ತ್ರತ ಚರ್ಚೆ ನಡೆಸಿ ತೀರ್ಮಾನಿಸುತ್ತೇನೆ ಎಂದರು.

Leave a Reply

Your email address will not be published. Required fields are marked *

You May Also Like

ಮದ್ಯ ಮಾರಾಟ ನಿಷೇಧಕ್ಕೆ ಗೋರ್ ಸೇನಾ ಒತ್ತಾಯ

ಮದ್ಯೆ ಮಾರಾಟ ಸಂಪೂರ್ಣವಾಗಿ ನಿಶೇಧಿಸುವಂತೆ ಒತ್ತಾಯಿಸಿ ಗೋರ್ ಸೇನಾ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಗದಗನಲ್ಲಿ ಮಾಶಾಸನ ಪಡೆಯಲು ಎರಡು ಕಿಲೋಮಿಟರ್ ನಡೆದು ಬಂದ ಅಜ್ಜಿ

ಗದಗ: ಕೊರೊನಾದ ಸಂಕಷ್ಟದ ದಿನಗಳು ಕೇವಲ ಬಡ ಜನರಿಗಷ್ಟೆ ಅಲ್ಲದೇ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣದಿಂದ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ತುತ್ತಿನ ಚೀಲ ತುಂಬಿಕೊಳ್ಳಲು ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಪಾಡಂತೂ ಹೇಳತೀರದು. ಇದೆಲ್ಲದಕ್ಕಿಂತ ಮುಖ್ಯವಾಗಿ ಅದೆಷ್ಟೋ ವೃದ್ಧರು, ವಿಕಲಚೇತನರು, ವಿದವೆಯರು ಮಾಶಾಸನವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಂತಹವರ ಪಾಡಂತೂ ಹೇಳತೀರದು

ಸಂವಾದ ನಡೆಸಿದ ಶಾಸಕ ನಡಹಳ್ಳಿ..! ಅನುದಿನವೂ ಇಷ್ಟಪಟ್ಟು ಓದಿ ಭವಿಷ್ಯ ಕಟ್ಟಿಕೊಳ್ಳಿ ಗುಲಾಬಚಂದ ಜಾಧವ;

ಉತ್ತರಪ್ರಭ ಆಲಮಟ್ಟಿ: ದಿನದ 24 ಗಂಟೆಯಲ್ಲಿ ಎಷ್ಟು ಕಾಲ ಓದ್ತಿರಾ, ಟಿವಿ ನೋಡ್ತಿರಾ, ಹರಟೆ ಹೋಡ್ತಿರಾ,…

ಗಜೇಂದ್ರಗಡದಲ್ಲಿ ಮುಷ್ಕರ: ಪೊಲೀಸ್-ಪ್ರತಿಭಟನಾಕಾರರ ಮದ್ಯೆ ಮಾತಿನ ಚಕಮಕಿ

ರೈತ, ಕಾರ್ಮಿಕ, ವಿದ್ಯುತ್, ಎಪಿಎಂಸಿ ಕಾಯ್ದೆ, ಬೆಲೆ ನಿಯಂತ್ರಣ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಜನ ವಿರೋದಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ, ಕಾರ್ಮಿಕ, ರೈತ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಅಂಗವಾಗಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.