ನವದೆಹಲಿ: 2021ರ ಫೆಬ್ರವರಿ ತಿಂಗಳ ಒಳಗಾಗಿ ದೇಶದ ಕನಿಷ್ಠ ಶೇ.50ರಷ್ಟು ಭಾರತೀಯರಲ್ಲಿ ಸೋಂಕು ಕಂಡು ಬರಲಿದೆ ಎಂದು ಸರ್ಕಾರದ ಸಮಿತಿ ಅಭಿಪ್ರಾಯಪಟ್ಟಿದೆ. 

ಕೇಂದ್ರದ ಸೀರಿಯಾಲಾಜಿಕಲ್ ಸಮೀಕ್ಷೆಗಳಿಗಿಂತಲೂ ಈ ಸಮೀಕ್ಷೆ ಸೋಂಕು ಹೆಚ್ಚಳವಾಗುವ ಸಾಧ್ಯತೆ ತೋರುತ್ತಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಶೇ.14ರಷ್ಟು ಜನರಿಗೆ ಮಾತ್ರ ಸೋಂಕು ತಗುಲಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ. 

ದೇಶದಲ್ಲಿ ಈಗಾಗಲೇ 75 ಲಕ್ಷ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾದ ನಂತರದ ಸ್ಥಾನದಲ್ಲಿದೆ. ಸಮಿತಿಯ ಲೆಕ್ಕಾಚಾರದಲ್ಲಿ ಈಗಾಗಲೇ ಶೇ.30 ರಷ್ಟು ಜನಕ್ಕೆ ಸೋಂಕು ತಗುಲಿದೆ. ಇದು ಫೆಬ್ರವರಿ ವೇಳೆಗೆ ಶೇ.50 ರಷ್ಟಾಗಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ರಾಯ್ಟರ್ಸ್ ಗೆ ಹೇಳಿಕೆ ನೀಡಿದ್ದಾರೆ. 

ಸಾಮಾಜಿಕ ಅಂತರ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಒಂದೇ ತಿಂಗಳಲ್ಲಿ ಕೊರೋನಾ ಪ್ರಕರಣ 2.6 ಮಿಲಿಯನ್ ದಾಟುವ ಸಾಧ್ಯತೆಯೂ ಇದೆ ಎಂದು ಸಮಿತಿ ಎಚ್ಚರಿಸಿದೆ. 

Leave a Reply

Your email address will not be published. Required fields are marked *

You May Also Like

ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗದ ಕಾರಣ, ಕೆಲ ರಿಯಾಯಿತಿಯೊಂದಿಗೆ ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ ಮುಂದುವರೆಯಲಿದೆ.

ಅಮೆರಿಕದಲ್ಲಿ ವೇದ ಮಂತ್ರ ಪಠಣ!

ಅಮೆರಿಕದಲ್ಲಿ ರಾಷ್ಟ್ರೀಯ ಪ್ರಾರ್ಥನಾ ದಿನಾಚರಣೆ ಅಂಗವಾಗಿ ಶ್ವೇತ ಭವನದಲ್ಲಿ ವೇದ ಮಂತ್ರ ಪಠಣ ಮಾಡಲಾಗಿದೆ.

ದೇಶದ ಜನರಲ್ಲಿ ಹೊಸ ಪ್ರಭೇದ ಸೊಂಕು ಪತ್ತೆ

ಜಗತ್ತಲ್ಲಿ ಕೊರೊನಾ ಸೊಂಕು ಜನರ ಬದುಕು ತೆಗೆದರೂ, ಇನ್ನು ತಣ್ಣಗಾಗುವ ಲಕ್ಷಗಳು ಕಾಣುತ್ತಿಲ್ಲ.

ನುಗ್ಗೆಕಾಯಿ ಕದಿಯುವ ವೇಳೆ ಸಿಕ್ಕಿಬಿದ್ದ ಪೊಲೀಸರು

ಖದೀಮರನ್ನು ಹಿಡಿದು ಶಿಕ್ಷೆಗೆ ಗುರಿಯಾಗಿಸಿ ಸರಿ ದಾರಿಗೆ ತರಬೇಕಾದ ಕರ್ತವ್ಯ ಪೊಲೀಸರದ್ದು. ಆದರೆ, ಕೆಲ ಪೊಲೀಸರೇ ಕಳ್ಳತನಕ್ಕೆ ಇಳಿದಾಗ ಅದಕ್ಕಿಂತ ನಾಚಿಕಿಗೇಡಿನ ಸಂಗತಿ ಬೇರೊಂದಿಲ್ಲ.