ಗದಗ: ಜಿಲ್ಲೆಯಲ್ಲಿಂದು ಕೂಡ 99 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1480 ಸೋಂಕಿತರು ಪತ್ತೆಯಾದಂತಾಗಿದೆ.

ಇಂದು 43 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 553 ಜನ ಈವರೆಗೆ ಬಿಡುಗಡೆ ಹೊಂದಿದ್ದಾರೆ. ಸದ್ಯ 913 ಸಕ್ರೀಯ ಪ್ರಕರಣಗಳಿದ್ದು, 02 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಮೃತರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಕೋವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳ ವಿವರ

ನಗರ ಸಭೆಯ ವ್ಯಾಪ್ತಿಯ ಅಂಜುಮನ್ ಕಾಲೇಜ ಹತ್ತಿರ, ವಿವೇಕಾನಂದ ನಗರ, ಜನತಾ ಕಾಲನಿ, ಜಿಮ್ಸ್, ಕಳಸಾಪುರ ರಸ್ತೆ, ಟ್ಯಾಗೋರ ರೋಡ, ಕೇಶವ ನಗರ, ಖಾನತೋಟ, ಯಲಿಗಾರ ಪ್ಲಾಟ, ಸೇವಾಲಾಲ ನಗರ ಹತ್ತಿರ, ಗಂಗಿಮಡಿ, ಕರಿಸಿದ್ಧಮಠ ಓಣಿ, ಶಿವಾನಂದ ನಗರ, ಗಾಂಧೀ ವೃತ್ತದ ಹತ್ತಿರ, ರಾಜೀವಗಾಂಧೀ ನಗರ, ಹೆಲ್ತ ಕ್ಯಾಂಪ್, ಕಿಲ್ಲಾ ಓಣಿ, ಶಾಂತಿ ಟಾಕಿಸ್ ಹಿಂಬಾಗ, ಹುಡ್ಕೋ ಕಾಲನಿ ಮೊದಲನೇ ತಿರುವು, ಸುರಪುರ ಆಸ್ಪತ್ರೆ ಹತ್ತಿರ.

ಗದಗ ತಾಲೂಕಿನ ಲಕ್ಕುಂಡಿ, ಬಿಂಕದಕಟ್ಟಿ, ಹುಲಕೋಟಿ, ಅಂತೂರ-ಬೆಂತೂರ, ಮಲ್ಲಸಮುದ್ರ, ಹುಲಕೋಟಿ, ಕುರ್ತಕೋಟಿ, ಶಿರಹಟ್ಟಿ ಪಟ್ಟಣದ ದ್ಯಾಮವ್ವ ದೇವಸ್ಥಾನದ ಹತ್ತಿರ, ಹಳ್ಳದಕೇರಿ ನಗರ, ಒಂದನೇ ಬಸನಿಲ್ದಾಣ ಹತ್ತಿರ.

ಶಿರಹಟ್ಟಿ ತಾಲೂಕಿನ ಯಳವತ್ತಿ, ಶಿಗ್ಲಿ, ಬಾಳೆಹೊಸೂರ, ಬೆಳ್ಳಟ್ಟಿ, ರಾಮಗೇರಿ, ಮಾಗಡಿ, ಸುವರ್ಣಗಿರಿ ತಾಂಡಾ, ಗೊಜನೂರ. ಲಕ್ಷ್ಮೇಶ್ವರದ ಬಸಾಪುರ ಓಣಿ.

ಗಜೇಂದ್ರಗಡದ ಬಸವೇಶ್ವರ ನಗರ, ನರಗುಂದ ತಾಲೂಕಿನ ಕೊಣ್ಣೂರ, ಹುಣಶಿಕಟ್ಟಿ, ರೋಣ ತಾಲೂಕಿನ ನಾಗರಸಕೊಪ್ಪ, ನಿಡಗುಂದಿ, ನವಲಗುಂದ ತಾಲೂಕಿನ ನಾಗರಹಳ್ಳಿ.

ಮುಂಡರಗಿ ಪಟ್ಟಣದ ಬಸ ನಿಲ್ದಾಣದ ಹತ್ತಿರ, ಹೇಮರೆಡ್ಡಿ ಮಲ್ಲಮ್ಮ ನಗರ, ಟಿ.ಎಲ್.ಎಚ್.ಸ್ಟಾಫ್ ಕ್ವಾಟರ್ಸ,ಭಜಂತ್ರಿ ಓಣಿ, ಅನ್ನದಾನೇಶ್ವರ ನಗರ, ಕಡಲಿಪೇಟ, ಅಂಬಾಭವಾನಿ ನಗರ, ಸಿದ್ದಲಿಂಗನಗರ,
ಮುಂಡರಗಿ ತಾಲೂಕಿನ ಡಂಬಳ, ಬಾಗೇವಾಡಿ, ಕಕ್ಕೂರ ತಾಂಡಾ, ರಾಮೇನಹಳ್ಳಿ, ಹೆಸರೂರ, ಬರದೂರ, ಹಮ್ಮಗಿ, ಹಿರೇವಡ್ಡಟ್ಟಿ,

ಮೃತರ ವಿವರ
ಗದಗ-ಬೆಟಗೇರಿ ನಗರಸಭೆಯ ಬೆಟಗೇರಿ ನಿವಾಸಿ 62 ವರ್ಷದ ಪುರುಷ ಪಿ-102157 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 25 ರಂದು ಕೋವಿಡ್-19 ದೃಢಪಟ್ಟಿದ್ದು, ತೀವ್ರ ಉಸಿರಾಟ ತೊಂದರೆ ಹಾಗೂ ನಿಮೋನಿಯಾದಿಂದಾಗಿ ಜುಲೈ 30 ರಂದು ಮೃತಪಟ್ಟಿರುತ್ತಾರೆ.
ಗದಗ ತಾಲ್ಲೂಕಿನ ಕುರ್ತಕೋಟಿ ನಿವಾಸಿ 70 ವರ್ಷದ ಪುರುಷ ಪಿ-107191 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 27 ರಂದು ಕೋವಿಡ್-19 ದೃಢಪಟ್ಟಿದ್ದು, ನಿಮೋನಿಯಾ ಹಾಗೂ ಹೃದಯ ಸಂಬಂಧಿತ ಕಾಯಿಲೆಯಿಂದ ಜುಲೈ 27 ರಂದು ಮೃತಪಟ್ಟಿರುತ್ತಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿರುತ್ತದೆ.
ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕರವೇ ಮನವಿ

ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪಂಚಾಯ್ತಿಯ ಜನಸಂಖ್ಯೆಗನುಗುಣವಾಗಿ 4-5 ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕತೆ ಇದೆ. ಅವುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಶುಕ್ರವಾರ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಖಾಸಗಿ ವೈದ್ಯರು ವೃತ್ತಿ ಪರತೆ ಮರೆತರೆ ಶಿಕ್ಷೆ ಕಟ್ಟಿಟ್ಟ ಬುತ್ತಿ!

ಖಾಸಗಿ ವೈದ್ಯರು ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕು. ಒಂದು ವೇಳೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅವರ ವೈದ್ಯಕೀಯ ನೋಂದಣಿ ರದ್ದುಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಗದಗ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಆರ್ಭಟ

ಗದಗ:ಭಾನುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,05,325 ಮಾದರಿ ಸಂಗ್ರಹಿಸಿದ್ದು, 6,78,688 ನಕಾರಾತ್ಮಕವಾಗಿವೆ. ಶನಿವಾರದ 117 ಪ್ರಕರಣ…

ಗದಗ ಜಿಲ್ಲೆಯಲ್ಲಿ 72; ರಾಜ್ಯದಲ್ಲಿಂದು 10,947 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 72 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9700ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರೀಯ 676 ಪ್ರಕರಣಗಳಿವೆ. ಇಂದು 63 ಜನರು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು ಬಿಡುಗಡೆಯಾಗಿರುವ ಪ್ರಕರಣಗಳ ಸಂಖ್ಯೆ 8889. ಒಟ್ಟು ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.