ಜೈಪುರ: ಪೆಟ್ರೋಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡು ಪ್ರತಿ ಲೀ. ದರ 100 ರು ಗಡಿ ದಾಟಿದ್ದು, ವಾಹನ ಸವಾರರ ಆಕ್ರೋಶಕ್ಕೆ ಮಣಿದ ರಾಜಸ್ಥಾನ ಸರ್ಕಾರವು ತೆರಿಗೆ ಇಳಿಕೆ ಮಾಡಿದೆ.

ರಾಜಸ್ಥಾನದ ಶ್ರೀಗಂಗಾನಗರದಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬಿಲ್ ವೈರಲ್ ಆಗಿತ್ತು. ಶ್ರೀ ಗಂಗಾನರದಲ್ಲಿ ಸೇರಿದಂತೆ ದೇಶದ ಹಲವು ನಗರಗಳಲ್ಲೂ 100 ರೂ. ಗಡಿ ದಾಟಿದೆ. ಆದರೆ, ಸದ್ಯಕ್ಕೆ ರಾಜಸ್ಥಾನ ಸರ್ಕಾರ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್ ತಗ್ಗಿಸುವುದಾಗಿ ಘೋಷಣೆ ಮಾಡಿದೆ.

ಶ್ರೀಗಂಗಾನಗರದಲ್ಲಿ ಸಾದಾ ಪೆಟ್ರೋಲ್ ಬೆಲೆಯೇ ಪ್ರತಿ ಲೀಟರ್‌ಗೆ 98.40 ರೂ., ಪ್ರೀಮಿಯಂ ಬ್ರ್ಯಾಂಡೆಡ್ ಪೆಟ್ರೋಲ್ ದರ 101.15 ರು ಆಗಿದೆ. ಜ.28ರಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಅಂಥಾ ವ್ಯತ್ಯಾಸ ಕಂಡು ಬಂದಿರಲಿಲ್ಲ. ಆದರೆ, ವಾಹನ ಸವಾರರ ಆಕ್ರೋಶಕ್ಕೆ ಮಣಿದ ರಾಜಸ್ಥಾನ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಶೇ.2 ರಷ್ಟು ತಗ್ಗಿಸಿರುವುದಾಗಿ ಘೋಷಿಸಿದೆ.

Leave a Reply

Your email address will not be published. Required fields are marked *

You May Also Like

ಈ ವರ್ಷ ಮುಂಗಾರು ಮಳೆ ರಾಜ್ಯವನ್ನು ಯಾವಾಗ ಪ್ರವೇಶಿಸಲಿದೆ ಗೊತ್ತಾ?

ನೈರುತ್ಯ ಮುಂಗಾರು ಮಳೆ ಜೂ. 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೂರರ ಗಡಿದಾಟಿದ ಕೊರೊನಾ ಪ್ರಕರಣಗಳು

ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ…

ಮಹಿಳೆಯಿಂದ ಕಾಂಗ್ರೆಸ್ ಮುಖಂಡನಿಗೆ ಥಳಿತ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ.

ಸುರಕ್ಷೆ ಮತ್ತು ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ ಎಲ್ಲ ಅಗತ್ಯ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು

ಉತ್ತರಪ್ರಭ ಸುದ್ದಿ: ಬೆಂಗಳೂರು: ಆ. ೨-ಇಡೀ ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಸಾವು-ನೋವುಗಳು ಆಗಿವೆ. ಈ…