ಗದಗ: ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ದೊರಕುವವರೆಗೆ ನಿರುದ್ಯೋಗ ಭತ್ಯೆ ನೀಡಲು ನಾನು ಒತ್ತಾಯಿಸುತ್ತೇನೆ ಎಂದು ಪಶ್ಚಿಮ ಪದವಿಧರ ಕ್ಷೇತ್ರದ ಕೆ.ಆರ್.ಎಸ್ ಅಬ್ಯರ್ಥಿ ಶಿವರಾಜ್ ಕಾಂಬಳೆ ಹೇಳಿದರು.

ಅವರು ಗದಗ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸಾಕಷ್ಟು ಪದವಿಧರರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ನಿರುದ್ಯೋಗಿಗಳು ಉದ್ಯೋಗಿಗಳು ಆಗುವವರೆಗೆ ಭತ್ಯೆ ನೀಡಬೇಕು ಎನ್ನುವುದು ನನ್ನ ಪ್ರಥಮ ಆದ್ಯತೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ(ಕೆ.ಆರ್.ಎಸ್) ಅಬ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೇನೆ.

ಜನಪರ ಕಾರ್ಯ ಮಾಡಬೇಕು ಎನ್ನುವ ಉದ್ದೇಶದಿಂದ ಪದವಿಧರ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಪದವಿಧರರ ಸಮಸ್ಯೆಗಳನ್ನು ನಾನು ತೀರಾ ಹತ್ತಿರದಿಂದ ಬಲ್ಲವನಾಗಿದ್ದೇನೆ. ಮುಖ್ಯವಾಗಿ ನಾನು ಕೂಡ ನಿರುದ್ಯೋಗಿ ಪದವಿಧರನಾಗಿದ್ದು, ಸರ್ಕಾರದಿಂದ ಈ ಕ್ಷೇತ್ರಕ್ಕೆ ಆಗುತ್ತಿರುವ ನಿರ್ಲಕ್ಷ್ಯ ಹೋಗಲಾಡಿಸುವ ಮೂಲಕ ಪದವಿಧರರಿಗೆ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮಾಡಬೇಕು ಎನ್ನುವ ಬಯಕೆ ನನ್ನದು ಎಂದರು.

ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ನೀಡಬೇಕೆಂಬ ನಿಯಮ ಜಾರಿಗೆ ತರಲು ಹಾಗೂ ಸ್ವಯಂ ಉದ್ಯೋಗ ಮತ್ತು ಕರಕುಶಲ ಉದ್ಯೋಗಕ್ಕೆ ಬೇಕಾದ ಪೂರಕ ಸಾಲ ಮತ್ತು ತರಬೇತಿ ನೀಡಿ ನಿರುದ್ಯೋಗ ಹೋಗಲಾಡಿಸಲು ಯತ್ನಿಸುತ್ತೆನೆ ಎಂದು ಭರವಸೆ ನೀಡಿದರು.

ನಾನು ಕೂಡ 20 ವರ್ಷ ವಾಟರಮನ್ ಮತ್ತು ಸೆಕ್ಯೂರಿಟಿ ಕೆಲಸ ಮಾಡಿ ಕೆಳಹಂತದಿಂದ ಬಂದಿರುವುದರಿಂದ ನಿರುದ್ಯೋಗ ಸಮಸ್ಯೆಯನ್ನು ಗಮನಿಸಿದ್ದೆನೆ. ಈಗಾಗಲೇ 2 ವರ್ಷಗಳಿಂದ ಪದವೀದರರ ಜೋತೆ ನಿರಂತರ ಸಂಪರ್ಕದಲ್ಲಿದ್ದೆನೆ, ವಿಧಾನ ಪರಿಷತ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರಾಮಾಣಿಕ ಕೆಲಸ‌ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಂದಿರಾ ಬಂಕಾಪೂರ, ರವಿ ಒಡೆಯರ ಇದ್ದರು.

Leave a Reply

Your email address will not be published. Required fields are marked *

You May Also Like

ಮೀಸಲಾತಿ ಪಟ್ಟಿ: ಕಾರಜೋಳ ಹೇಳಿಕೆ ಸ್ವಾಗತಿಸಿದ ಇಮ್ಮಡಿ ಶ್ರೀ

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿಲ್ಲ ಹಾಗೂ ಬಿಡುವುದಿಲ್ಲ…

ನರಗುಂದದಲ್ಲಿ ಭೂ ಕುಸಿತ: ಜನರಲ್ಲಿ ಆತಂಕ.!

ನರಗುಂದ: ಇಲ್ಲಿನ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆ ಅವರ ಮನೆ ಮುಂದೆ ಭೂ ಕುಸಿತವಾಗಿದೆ. ಬೆಳಿಗ್ಗೆ…

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಮೆಣಸಿನಕಾಯಿ ಬೆಳೆ ಬೆಳೆದು ನಿಂತ ಜಮೀನಿನಲ್ಲಿ ಕುರಿ ಹಾಗೂ ದನಕರುಗಳನ್ನು ಬಿಟ್ಟು ಬೆಳೆಯನ್ನು ನಾಶಪಡಿಸಲಾಗಿದೆ.

ಗದಗ ಜಿಲ್ಲೆಯಾಗಿ ಇಂದಿಗೆ 25 ವರ್ಷ ಬೆಳ್ಳಿ ಹಬ್ಬದ ಸಂಭ್ರಮ

ಗದಗ: ಜಿಲ್ಲೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಭ್ರಮದ ಸುಸಂದರ್ಭದಲ್ಲಿ ಜಿಲ್ಲೆಯ ಮಹಾ ಜನತೆಗೆ…