ನರಗುಂದ: ಇಲ್ಲಿನ ಶಂಕರಲಿಂಗ ಕಾಲೋನಿಯ ಅಂಬೋಜಿ ಪೇಟೆ ಅವರ ಮನೆ ಮುಂದೆ ಭೂ ಕುಸಿತವಾಗಿದೆ. ಬೆಳಿಗ್ಗೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಬಾರಿ ಅನಾಹುತ ತಪ್ಪಿದೆ. ಸುಮಾರು 20 ಅಡಿಯಷ್ಟು ಭೂ ಕುಸಿತವಾಗಿದೆ. ಇದರಿಂದ ಸ್ಥಳೀಯರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ವಿಷ ತಿಳಿದ ನರಗುಂದ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರ ತವರಲ್ಲಿ ಇಂಥ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದು ಜನರನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ. ಬಯಲು ಸೀಮೆಯಲ್ಲೆ ಈ ರೀತಿ ಘಟನೆಗಳು ನಡೆಯುತ್ತಿರುವುದು ಜನರ ಅಚ್ಚರಿಗೂ ಕಾರಣವಾಗಿದೆ.
