ಗದಗ: ಜಿಲ್ಲೆಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಈ ಸಂಭ್ರಮದ ಸುಸಂದರ್ಭದಲ್ಲಿ ಜಿಲ್ಲೆಯ ಮಹಾ ಜನತೆಗೆ ಹೃದಯ ತುಂಬಿದ ಶುಭಾಶಯಗಳನ್ನು ತಿಳಿಸುವೆ. ಗದಗ ಜಿಲ್ಲೆ ಕರ್ನಾಟಕದ ಶಾಂತಿಯ ತೋಟ. ಕುಮಾರವ್ಯಾಸ, ಆದಿಕವಿ ಪಂಪರತಹ ದಿಗ್ಗಜರ ಕರ್ಮಭೂಮಿ ಇದು. ವೀರನಾರಾಯಣ, ತ್ರಿಕುಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ರೆಮಿಂಗ್ ಟನ್ ಚರ್ಚ್, ತೋಂಟದಾರ್ಯ ಮಠ, ಶಿವಾನಂದ ಮಠ, ವೀರೇಶ್ವರ ಪುಣ್ಯಾಶ್ರಮ, ಶಿರಹಟ್ಟಿಯ ಫಕ್ಕೀರೇಶ್ವರಮಠ, ಮುಂಡರಗಿ ಅನ್ನದಾನೀಶ್ವರ ಮಠ, ಹಾಲಕೆರೆ ಅನ್ನದಾನೇಶ್ವರ ಮಠ, ಜಿಲ್ಲೆಯ ಧಾರ್ಮಿಕ, ಸಾಮಾಜಿಕ ವಲಯದಲ್ಲಿ ಮುಕುಟಪ್ರಾಯವಾಗಿವೆ. ಸಹಕಾರ ರಂಗ ಜನ್ಮ ತಳೆದಿದ್ದೆ ಗದಗ ಜಿಲ್ಲೆಯಲ್ಲಿ ಎನ್ನುವುದು ಹೆಮ್ಮೆ ಪಡುವ ಸಂಗತಿ.

ಗವಾಯಿಗಳು, ಭೀಮಸೇನ ಜೋಶಿ, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು ಜಿ.ಬಿ.ಜೋಶಿ, ಗರುಡ ಸದಾಶಿವರಾಯರು, ಚೆಂಬೆಳಕಿನ ಕವಿ ಕಣವಿ, ಅರ್.ಸಿ.ಹಿರೇಮಠ, ಗಿರಡ್ಡಿ ಗೋವಿಂದರಾಜ್, ಸುನೀಲ್ ಜೋಷಿ, ಬಿನು ಭಾಟಿ, ರಾಜೀವ್, ಮುತಗಾರ ಹಾಗೂ ಇತ್ತಿಚಿನ ದಿನಗಳಲ್ಲಿ ಕುಸ್ತಿಯಲ್ಲಿ ಪ್ರೇಮಾ ಹುಚ್ಚಣ್ಣವರ್ ಹೀಗೆ ಹತ್ತು ಹಲವು ಸಾಧಕರಿಂದ ಹಲವು ಕ್ಷೇತ್ರದಲ್ಲಿ ಗದಗ ಜಿಲ್ಲೆ ಪ್ರಸಿದ್ಧಿ ಪಡೆದಿದೆ. ಮುದ್ರಣ ಕ್ಷೇತ್ರದಲ್ಲಿ ಗದಗ ಜಿಲ್ಲೆ ಮಾದರಿ.

ಇತ್ತಿಚಿನ ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ ಅಭಿವೃದ್ಧಿ ಕ್ರಾಂತಿ ನಡೆದಿದೆ. ಗದಗಿನ ಹಿರಿಮೆ ಸಣ್ಣದಲ್ಲ. ಏನುಂಟು ಎನ್ನುವುದಕ್ಕಿಂತ ಏನಿಲ್ಲ ಎಂದು ಕೇಳಬೇಕಾಗಿದೆ.ಜಿಲ್ಲೆ ಸಣ್ಣದಾದರೂ ಸಾಧನೆ ಬಹುದೊಡ್ಡದು. ಸಾಮಾಜಿಕ, ಸಾಂಸ್ಕೃತಿ, ಶೈಕ್ಷಣಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಂಡಿದೆ. ಮಹಾಜನತೆಯ ಆಶೀರ್ವಾದದಿಂದ ನನಗೆ ಸಿಕ್ಕ ಅವಕಾಶದಲ್ಲಿ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಒತ್ತು ನೀಡಲಾಗಿದೆ.

ನದಿ ಮೂಲದಿಂದ ಜಿಲ್ಲೆಯ ಪ್ರತಿ ಗ್ರಾಮಗಳ, ಪ್ರತಿ ಮನೆಗಳಿಗೂ ನಳದ ಮೂಲಕ ನೀರು ಪೂರೈಕೆ ಯೋಜನೆ ಇದೊಂದು ಕ್ರಾಂತಿಕಾರಕ ಅಭಿವೃದ್ಧಿಯೇ ಸರಿ. ಸ್ವಚ್ಛ ಹಾಗೂ ಶುದ್ಧಗಾಳಿಗೆ ಶ್ರೇಷ್ಟವಾದ ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಗದುಗಿಗೆ ಕಳಶ.

ಶುದ್ಧಕುಡಿಯು ನೀರಿನ ಕಲ್ಪನೆ ಜನ್ಮ ತಳೆದಿದ್ದು, ಗದಗ ಜಿಲ್ಲೆಯಲ್ಲಿ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಜಿಲ್ಲೆಯ ಬಹುಭಾಗ ನೀರಾವರಿಗೆ ಅಳವಡಿಕೆಗೆಯಾಗುವ ಯೋಜನೆ ಅನುಷ್ಟಾನಗೊಳ್ಳುತ್ತಿರುವುದು ರೈತಪರ ಅಭಿವೃದ್ಧಿ ಕಾರ್ಯ.

ತುಂಗಭದ್ರ ನದಿನೀರಿನಿಂದ ಭೀಷ್ಮಕೆರೆ ತುಂಬಿಸುವ ಮೂಲಕ ಬರದ ನಾಡಲ್ಲಿ ಅಂತರ್ ಗಂಗೆ ಪುಟಿದೇಳುವಂತಾಗಿದ್ದು ಸಣ್ಣ ಸಾಧನೆಯೇ. ಶೈಕ್ಷಣಿಕ ಅಭಿವೃದ್ಧಿಗೆ ಸಂಬoಧಿಸಿದoತೆ ಗ್ರಾಮೀಣಾಭಿವೃದ್ಧಿ ವಿಶ್ವ ವಿದ್ಯಾಲಯ ಆರಂಭವಾಗಿದ್ದು ದೇಶದಲ್ಲಿಯೇ ಮೊದಲು ಎನ್ನುವ ಹೆಮ್ಮೆ ನಮ್ಮದು. ಸ್ನಾತಕೋತ್ತರ ಕೇಂದ್ರ, ಪದವಿ ಕಾಲೇಜುಗಳ ಆರಂಭ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ.

ವೈದ್ಯಕೀಯ ಕಾಲೇಜು ಆರಂಭದ ಜೊತೆಗೆ 700-800 ಹಾಸಿಗೆ ಸರ್ಕಾರಿ ಆಸ್ಪತ್ರೆಯ ನಿರ್ಮಾಣ. ಪಶು ವೈದ್ಯಕೀಯ ವಿದ್ಯಾಲಯ ಸ್ಥಾಪನೆ, ಕ್ರೀಡಾ ಕ್ಷೇತ್ರಕ್ಕೆ ಬಂದರೆ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣ, ಹಾಕಿ, ಕಬ್ಬಡ್ಡಿ, ಕುಸ್ತಿ, ಫುಲ್ಬಾಲ್, ಕ್ರಿಕೇಟ್ ಕ್ರೀಡೆಗಳ ಪ್ರೋತ್ಸಾಹಕ್ಕೆ ಕ್ರೀಡಾಂಗಣ ನಿರ್ಮಾಣ. ಸುಂದರ ಹಾಗೂ ಸೌಲಭ್ಯವುಳ್ಳ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿಯನ್ನು ಗದಗ ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಕಂಡಿದೆ.

ಗದಗ ನಗರದ ಹೊಸ ಬಸ್ ನಿಲ್ದಾಣ, ಸಹಕಾರಿ ಕೈಗಾರಿಕಾ ವಸಾಹತು ಹಾಗೂ ಬೆಟಗೇರಿಯ ಕೈಗಾರಿಕಾ ವಸಾಹತು ಮೂಲಕ ಕೈಗಾರಿಕಾ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ. ಪ್ಲಾನಿಟೋರಿಯಮ್ ನಿರ್ಮಾಣ, ಬಿಂಕದಕಟ್ಟೆ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ, ಬಯಲು ಬಹಿರ್ದೆಸೆ ಮುಕ್ತ ಕನಸು ಜಿಲ್ಲೆಯಲ್ಲಿ ನನಸಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಅಭಿವೃದ್ಧಿ ಕಾರ್ಯಗಳಿಂದಾಗಿ ಪ್ರತಿ ವರ್ಷ ಒಂದಲ್ಲ ಒಂದು ಗ್ರಾಮ ಪಂಚಾಯತಿ ಪ್ರಶಸ್ತಿಗೆ ಪಾತ್ರವಾಗುತ್ತಿರುವುದು ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ. ನಗರದಲ್ಲಿ ಅಂಬೇಡ್ಕರ್ ಭವನ, ವಾಲ್ಮಿಕಿ ಭವನ, ಕರ್ನಾಟಕ ಭವನ, ಸಾಹಿತ್ಯ ಭವನ, ಮೌಲಾನಾ ಆಜಾದ್, ಭೀಮ್ ಸೇನ್ ಜೋಷಿ ವಿವೇಕಾನಂದ, ಕೆ.ಎಚ್. ಪಾಟೀಲ್, ಲಿಂ.ಪA.ಪುಟ್ಟರಾಜ ಗವಾಯಿಗಳ ಸ್ಮಾರಕ ಭವನದ ನಿರ್ಮಾಣ ಬಹುದೊಡ್ಡ ಕೊಡುಗೆಯಾಗಿದೆ. ಗ್ರಾಮೀಣ ಭಾಗದಲ್ಲಿ ನಮ್ಮ ಹೊಲ ನಮ್ಮ ರಸ್ತೆಯ ಮೂಲಕ ರೈತರ ಹೊಲಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ, ಶಾಲಾ ಮೈದಾನ ಅಭಿವೃದ್ಧಿ ಹೀಗೆ ಹಲವಾರು ಅರ್ಥಪೂರ್ಣ ಬೆಳೆವಣಿಗೆಯನ್ನು ಜಿಲ್ಲೆ ಕಂಡಿದೆ.

ಕೋವಿಡ್ ಸಂದರ್ಭದಲ್ಲಿ ವಿಶೇಷವಾಗಿ ಹಾಗೂ ವಿನೂತನವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸಿದ್ದು ಮಾದರಿಯಾಗಿದೆ. ಗದಗ ಜಿಲ್ಲೆಯನ್ನು ಯಾವುದೇ ಜಿಲ್ಲೆಯೊಂದಿಗೆ ಹೋಲಿಕೆ ಮಾಡಿದರೂ ಗದಗ ಜಿಲ್ಲೆ ವಿಶೇಷವಾಗಿ ತನ್ನ ಸ್ಥಾನವನ್ನು ಗಳಿಸಿಕೊಂಡಿದೆ.ಈ ಅಭಿವೃದ್ಧಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರ, ಆಡಳಿತ, ಜಿಲ್ಲೆಯ ಪ್ರಜ್ಞಾವಂತ ಜನತೆ, ಸುದ್ದಿ ಮಾದ್ಯಮದವರು ಅಭಿನಂದನೆಗೆ ಅರ್ಹರು.

ಜಿಲ್ಲೆಯನ್ನು ಇನ್ನಷ್ಟು ಭವ್ಯಗೊಳಿಸಬೇಕಿದೆ. ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಉದ್ಯೋಗ ಸಮಸ್ಯೆಗೆ ಸ್ಪಂದಿಸಬೇಕಿದೆ. ಈ ಸವಾಲುಗಳನ್ನು ಎದುರಿಸಲು ನಾವೆಲ್ಲ ಸನ್ನದ್ಧರಾಗೋಣ.

Leave a Reply

Your email address will not be published. Required fields are marked *

You May Also Like

ಈ ಬಾರಿ ಕುಬೇರಪ್ಪ ಗೆಲವು ನಿಶ್ಚಿತ : ವೀರಣ್ಣ ಸೊನ್ನದ

ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಜನಪರ ಸೇವೆಯಲ್ಲಿ ತೊಡಗಿರುವ ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ. ಕುಬೇರಪ್ಪ ಈ ಬಾರಿ ಪಶ್ಚಿಮ ಪದವೀಧರ ಮತದಾರರು ಗೆಲುವು ತಂದು ಕೊಡಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ವೀರಣ್ಣ ಸೊನ್ನದ ವಿಶ್ವಾಸ ವ್ಯಕ್ತಪಡಿಸಿದರು.

ಕೌಜಗೇರಿ ಗ್ರಾಮ ಪಂಚಾಯ್ತಿಗೆ ನೂತನ ಅಧ್ಯಕ್ಷೆಯಾಗಿ ಸಾವಿತ್ರಮ್ಮ ಅವಿರೋಧ ಆಯ್ಕೆ

ರೋಣ: ತಾಲ್ಲೂಕಿನ ಕೌಜಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಯ್ಕೆಯ ಅಂಗವಾಗಿ ಮಂಗವಾರ ಚುನಾವಣಾ ಪ್ರಕ್ರಿಯೆ ಜರುಗಿತು.…