ವಿಶ್ವಸಂಸ್ಥೆ : ಕೊರೊನಾ ಆತಂಕದ ನಂತರ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ದೇಶಗಳಿಗೆ ವಿಶ್ವ ಬ್ಯಾಂಕ್ ಸಹಾಯಕ್ಕೆ ಮುಂದಾಗಿದೆ. 

ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ 12 ಶತಕೋಟಿ ಡಾಲರ್ ನಿಧಿಗೆ ಅನುಮೋದನೆ ನೀಡಿದೆ. ಔಷಧಿ, ಲಸಿಕೆ ಖರೀದಿ ಮತ್ತು ಬಿಡುಗಡೆ ಪ್ರಯೋಗ ಮತ್ತು ಚಿಕಿತ್ಸೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ವಿಶ್ವಬ್ಯಾಂಕ್ 12 ಶತಕೋಟಿ ಡಾಲರ್ ಅನ್ನು ಬಿಡುಗಡೆ ಮಾಡಲು ಸಹಿ ಹಾಕಿದೆ. 

ಕೊರೊನಾ ವೇಗ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸುರಕ್ಷಿತ ಚಿಕಿತ್ಸೆಗಾಗಿ ವಿಶ್ವ ಬ್ಯಾಂಕ್‍ ನ 160 ಶತಕೋಟಿ ಡಾಲರ್ ಮೊತ್ತದ ಬೃಹತ್ ಯೋಜನೆಯ ಭಾಗವಾಗಿ ಅಭಿವೃದ್ದಿಶೀಲ ದೇಶಗಳಿಗೆ ಈ ಮೊತ್ತ ಈ ಮೊತ್ತ ಬಿಡುಗಡೆಯಾಗಲಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೊರೊನಾ ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಯತ್ನಿಸುತ್ತಿವೆ. ವಿಶ್ವಬ್ಯಾಂಕ್‍ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿವೆ. ಹೀಗಾಗಿ ಈ ದೇಶಗಳ ನೂರು ಕೋಟಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆರವಾಗುವ ಉದ್ಧೇಶ ಹೊಂದಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. 

Leave a Reply

Your email address will not be published. Required fields are marked *

You May Also Like

ಒಬ್ಬನ ಕೊಲ್ಲಲು ಇಲ್ಲಿ ಲಾಂಗ್ ಹಿಡಿದು ಬಂದವರು ಎಷ್ಟು ಜನ ಗೊತ್ತಾ?

ಮುಂಬಯಿ : ಒಬ್ಬನನ್ನು ಕೊಲ್ಲಲು ನೂರು ಜನ ಲಾಂಗ್ ಹಿಡಿದುಕೊಂಡು ಬಂದಿದ್ದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ಯೋಧರಿಗಿಲ್ಲ ಪ್ರಾಮುಖ್ಯತೆ : ಕಾಂಗ್ರೆಸ್ ಟೀಕೆ

ಬಿಜೆಪಿಯ ಹಮ್ ದೋ ಹಮಾರೆ ದೋ ಸರ್ಕಾರದಲ್ಲಿ ಅಂಬಾನಿಗಿರುವ ಪ್ರಾಮುಖ್ಯತೆ ಯೋಧರಿಗಿಲ್ಲ ಎಂದು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಟೀಕಿಸಿದೆ.

ಪ್ಲಾಸ್ಮಾ ಚಿಕಿತ್ಸೆಯಿಂದ ಗಂಭೀರ ಪರಿಸ್ಥಿತಿಯ ಸೋಂಕಿತರ ರಕ್ಷಣೆ ಕಷ್ಟ: ಕೇಜ್ರಿವಾಲ್

ದೆಹಲಿ: ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಜೀವವನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಉಳಿಸುವುದು ತೀರಾ ಕಷ್ಟ ಎಂದು…