ನವದೆಹಲಿ: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ಏರಿಕೆ ಕಾಣುತ್ತಿದೆ. ಪ್ರತಿ ದಿನ ಕೊರೊನಾ ತನ್ನ ದಾಖಲೆಯನ್ನು ತಾನೇ ಮುರಿದು ಸಾಗುತ್ತಿದೆ. ಮಂಗಳವಾರ ಬರೋಬ್ಬರಿ 14,933 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 4,40,215ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ನಿನ್ನೆ ಒಂದೇ ದಿನ ಮಹಾಮಾರಿಗೆ 312 ಜನ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿನಿಂದ ಸತ್ತವರ ಸಂಖ್ಯೆ 14,933ಕ್ಕೆ ಏರಿಕೆ ಕಂಡಿದೆ.
2,48,190 ಸೋಂಕಿನಿಂದ ಗುಣಮುಖರಾಗಿದ್ದು, 1,78,014 ಜನ ಸೋಂಕಿನಿಂದ ಬಳಲುತ್ತಿದ್ದಾರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಸತತ 11 ದಿನಗಳಿಂದ 10ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜೂ.1ರಿಂದ ಜೂ.21ರ ಅವಧಿಯಲ್ಲಿ 2,31,747 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ.