ಮುಳಗುಂದ: ಸ್ಥಳೀಯ ಬಸ್ ನಿಲ್ಧಾಣದ ನಿಲುಗಡೆ ಸ್ಥಳದಲ್ಲೇ ನಿತ್ಯ ಬೈಕ್ ಗಳ ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಹೊಸ ಬಸ್ ನಿಲ್ಧಾಣ ಆರಂಭವಾದಾಗಿನಿಂದ ಬೈಕ ನಿಲ್ಲಿಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಇಲ್ಲದಿರುವದು ಈ ಸಮಸ್ಯೆ ಉಂಟಾಗಿದೆ. ನಿಲ್ಧಾನದಲ್ಲಿ ಯಾವ ಸೂಚನಾ ಫಲಕವನ್ನು ಅಳಡಿಕೆಗೆ ಸಂಬಂಧಿಸಿದ ಸಾರಿಗೆ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.

ನಿಲ್ಧಾಣ ವಿಶಾಲವಾಗಿದ್ದರೂ ಸಹ ಕ್ಯಾಂಟಿನ್ ಗೆ ಬರುವ ಗ್ರಾಹಕರು ಬಸ್ ನಿಲ್ಲುವ ಜಾಗದಲ್ಲೇ ಬೈಕ್‌ಗಳನ್ನ ನಿಲ್ಲಿಸುತ್ತಿದ್ದಾರೆ. ಇದರಿಂದ ಗದಗ ಹಾಗೂ ಲಕ್ಷ್ಮೇಶ್ವರ ಕಡೆಯಿಂದ ಬರುವ ಬಸ್‌ಗಳು ಚಾಲಕರು ನಿಗದಿತ ಜಾಗ ಬಿಟ್ಟು ದೂರವೆ ನಿಲ್ಲಿಸುತ್ತಾರೆ, ಬಸ್ ಹತ್ತುವ ಪ್ರಯಾಣಿಕರು ತಾವು ಕುಳಿತ ಜಾಗದಿಂದ ಎದ್ದು ಬಿದ್ದು ಓಡಬೇಕಾಗಿದೆ.

ಲಾಕ್‌ಡೌನ್ ಪೂರ್ವದಲ್ಲಿ ನಿಲ್ಧಾಣದ ಒಂದು ಭಾಗದಲ್ಲಿ ಬೈಕ್ ನಿಲ್ಲಿಸಲು ವ್ಯವಸ್ಥೆ ಮಾಡಿ, ನಿತ್ಯ ಪೋಲಿಸ್ ಸಿಬ್ಬಂದಿ ನೇಮಿಸಲಾಗುತಿತ್ತು. ಆದರೆ ಅನ್‌ಲಾಕ್ ಆದಾಗಿನಿಂದ ಇಲ್ಲಿ ಅದಾವುದು ವ್ಯವಸ್ಥೆ ನಡೆಯುತ್ತಿಲ್ಲ, ಪೋಲಿಸ್ ಸಿಬ್ಬಂದಿಯು ಇಲ್ಲದಾಗಿದೆ.

ಪ್ರಯಾಣಿಕರಲ್ಲದವರು ಸಹ ಕುಳಿತು ಎಲ್ಲಂದರಲ್ಲಿ ಉಗುಳುವದು, ಧೂಮಪಾನ ಮಾಡುವುದರಿಂದ ಮಹಿಳೆಯರಿಗೆ ಕಿರಿ ಕಿರ ಉಂಟು ಮಾಡುತ್ತಿದೆ. ಇಲ್ಲಿಂದ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ಅಣ್ಣಿಗೇರಿ, ಹುಬ್ಬಳ್ಳಿ ನಗರಗಳಿಗೆ ನಿತ್ಯ ನೂರಾರು ಬಸ್‌ಗಳ ಸೌಲಭ್ಯವಿದ್ದು ಸಾವಿರಾರು ಪ್ರಯಾಣಿಕರು ಬಸ್ ಸಂಚಾರ ಮಾಡುತ್ತಾರೆ.

ಬಸ್‌ ನಿಲ್ಧಾಣ ಸೇರಿದಂತೆ ರಸ್ತೆಯಲ್ಲಿ ವಿನಾಕಾರಣ ಬೈಕ್ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡುವವರ ಬಗ್ಗೆ ಗಮನಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಮತ್ತು ಸಿಬ್ಬಂದಿ ನಿಯೋಜಿಸಲಾಗುವದು ಎಂದು ನೂತನ ಪಿಎಸ್‌ಐ ಸಚಿನ್ ಅಲಮೇಲಕರ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 453 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 9150…

ಗದಗ ಜಿಲ್ಲೆಯಲ್ಲಿಂದು 18 ಪಾಸಿಟಿವ್! : ಯಾವ ಯಾವ ತಾಲೂಕಿಗೆ ಕೊರೊನಾ ನಂಟು?

ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40…

ವಿಧಾನ ಮಂಡಲದಲ್ಲಿ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆ-ಶಿಕ್ಷಕರ ಸಂಘ ಹರ್ಷ

ಉತ್ತರಪ್ರಭ ಸುದ್ದಿಆಲಮಟ್ಟಿ: ಶಿಕ್ಷಕರ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕವು ವಿಧಾನಮಂಡಲದಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಶಿಕ್ಷಕರ…

ಆಡಳಿತ ಅನುಮತಿ ನೀಡಲಿ, ಬಿಡಲಿ ನಾವು ಟಿಪ್ಪು ಜಯಂತಿ ಆಚರಣೆ ಸಿದ್ಧ: ಶರೀಫ ಬಿಳೆಯಲಿ

ಟಿಪ್ಪು ಜಯಂತಿ ಆಚರಿಸುವ ಮೂಲಕ ಅವರ ಸಾಧನೆ, ರಾಜಕೀಯ ನಿಲುವುಗಳು, ದೇಶಪ್ರೇಮವನ್ನು ಇಂದಿನ ಯುವ ಸಮುದಾಯಕ್ಕೆ ಸಾರಬೇಕು ಎಂದು ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹೋರಾಟ ಸಮಿತಿಯ ಮುಖಂಡ ಶರೀಫ್ ಬಿಳೆಯಲಿ ಹೇಳಿದರು.