ಗದಗ: ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40 ವರ್ಷದ ಪುರುಷ ಪಿ-9729 ಸಂಪರ್ಕದಿಂದಾಗಿ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರ ನಿವಾಸಿಗಳಾದ 36 ವರ್ಷದ ಪುರುಷ (ಪಿ-24739) ಹಾಗೂ 25 ವರ್ಷದ ಮಹಿಳೆ (ಪಿ-24740)  ಸೋಂಕು ದೃಢವಾಗಿದೆ.
ಜೂನ್ 28 ರಂದು ಮಹಾರಾಷ್ಟ್ರದಿಂದ ಆಗಮಿಸಿದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮೇಂವುಡಿ ಜನತಾ ಪ್ಲಾಟ್ ನಿವಾಸಿಗಳಾದ ಐವರಲ್ಲಿ ಸೋಂಕು ದೃಡವಾಗಿದೆ. 38 ವರ್ಷದ ಪುರುಷ (ಪಿ-24741), 35 ವರ್ಷದ ಮಹಿಳೆ (ಪಿ-24742), 16 ವರ್ಷದ ಯುವತಿ (ಪಿ-24743), 16 ವರ್ಷದ ಯುವಕ (ಪಿ-24744), 9 ವರ್ಷದ ಬಾಲಕಿ (ಪಿ-24745).ಲಕ್ಷ್ಮೇಶ್ವರದ 39 ವರ್ಷದ ಪುರುಷ ಪಿ-11230 ಸೋಂಕಿತ ಸಂಪರ್ಕದಿಂದಾಗ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಹತ್ತಿರದ ಹೂಲಗೇರಿ ಬಣದ 6 ನಿವಾಸಿಗಳಿಗೆ ಸೋಂಕು ದೃಢವಾಗಿದೆ. 32 ವರ್ಷದ ಮಹಿಳೆ (ಪಿ-24746), 14 ವರ್ಷದ ಯುವಕ (ಪಿ-24747), 25 ವರ್ಷದ ಪುರುಷ (ಪಿ-24748), 39 ವರ್ಷದ ಪುರುಷ (ಪಿ-24749), 12 ವರ್ಷದ ಯುವತಿ (ಪಿ-24750), 7 ವರ್ಷದ ಬಾಲಕಿ (ಪಿ-24751).
ಗದಗ ತಾಲ್ಲೂಕಿನ ಹೊಂಬಳ ಗ್ರಾಮದ ದೊಡ್ಡ ಓಣಿ ನಿವಾಸಿ 70 ವರ್ಷದ ವೃದ್ಧೆಗೆ (ಪಿ-24752) ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಹಾಗೂ ಬೆಂಗಳೂರಿನಿಂದ ಆಗಮಿಸಿದ ರೋಣ ಪಟ್ಟಣದ ಡಿ ಪೌಲ್ ಶಾಲೆ ಹತ್ತಿರದ ನಿವಾಸಿ 36 ವರ್ಷದ ಪುರುಷ (ಪಿ-24753) ಇವರಿಗೆ ಸೋಂಕು ದೃಢವಾಗಿದೆ.
ನರಗುಂದ ಪಟ್ಟಣದ ಗಡಿ ಓಣಿಯ 42 ವರ್ಷದ ಪುರುಷ ಪಿ-18279 ಸಂಪರ್ಕದಿಂದಾಗಿ ಅದೇ ಪ್ರದೇಶದ 30 ವರ್ಷದ ಮಹಿಳೆ (ಪಿ-24754), 38 ವರ್ಷದ ಮಹಿಳೆ (ಪಿ-24755) ಸೋಂಕು ದೃಢವಾಗಿದೆ. ಹಾಗೂ ನರಗುಂದ ಪಟ್ಟಣದ ಗಡಿ ಓಣಿಯ 39 ವರ್ಷದ ಪುರುಷ ಪಿ-15320 ಸಂಪರ್ಕದಿಂದಾಗಿ ಹೊರಕೇರಿ ಓಣಿಯ 26 ವರ್ಷದ ಮಹಿಳೆ (ಪಿ-24756) ಸೋಂಕು ದೃಡವಾಗಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಯೋಧರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದು ಏಕೆ?

ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಹೀಗಾಗಿ ಈ ಕಾರ್ಯದಲ್ಲಿ ಬಹಳಷ್ಟು ಕಾಳಜಿಯಿಂದ ಸೇವೆ ಸಲ್ಲಿಸಿದ ಕೊರೋನಾ ಯೋಧರ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿ

ಬೆಂಗಳೂರು : ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೊಳಿಸಲು…

ಚೀನಾ ಹಿಂದಿಕ್ಕಿ ಸಾಗುತ್ತಿದೆ ಭಾರತ!

ನವದೆಹಲಿ: ಮಹಾಮಾರಿ ಕೊರೊನಾ ಭಾರತದಲ್ಲಿ ತನ್ನ ಉಗ್ರ ಪ್ರತಾಪ ಮುಂದುವರೆಸಿದ್ದು, ದೇಶದಲ್ಲಿ 24 ಗಂಟೆಗಳಲ್ಲಿ 3,904…

ಗದಗ ಜಿಲ್ಲೆಯಲ್ಲಿ 2 ಸಾವಿರ ತೋಟ ನಿರ್ಮಾಣ ಗುರಿ: ಜಿ.ಪಂ ಅಧ್ಯಕ್ಷ ರಾಜೂಗೌಡ

ಗದಗ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2 ಸಾವಿರ ಹೊಸ ತೋಟಗಳನ್ನು ನಿರ್ಮಿಸಲು ತೋಟಗಾರಿಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಸೂಚಿಸಿದರು.