ಬಸ್ ನಿಲುಗಡೆ ಸ್ಥಳದಲ್ಲೇ ಬೈಕ್ ಪಾರ್ಕಿಂಗ್, ಪ್ರಯಾಣಿಕರ ಪರದಾಟ

mulagunda bus station

ಬಸ್ ನಿಲುಗಡೆ ಸ್ಥಳದಲ್ಲೇ ಬೈಕ್ ಪಾರ್ಕಿಂಗ್: ಪ್ರಯಾಣಿಕರ ಪರದಾಟ

ಮುಳಗುಂದ: ಸ್ಥಳೀಯ ಬಸ್ ನಿಲ್ಧಾಣದ ನಿಲುಗಡೆ ಸ್ಥಳದಲ್ಲೇ ನಿತ್ಯ ಬೈಕ್ ಗಳ ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಹೊಸ ಬಸ್ ನಿಲ್ಧಾಣ ಆರಂಭವಾದಾಗಿನಿಂದ ಬೈಕ ನಿಲ್ಲಿಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಇಲ್ಲದಿರುವದು ಈ ಸಮಸ್ಯೆ ಉಂಟಾಗಿದೆ. ನಿಲ್ಧಾನದಲ್ಲಿ ಯಾವ ಸೂಚನಾ ಫಲಕವನ್ನು ಅಳಡಿಕೆಗೆ ಸಂಬಂಧಿಸಿದ ಸಾರಿಗೆ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.

ನಿಲ್ಧಾಣ ವಿಶಾಲವಾಗಿದ್ದರೂ ಸಹ ಕ್ಯಾಂಟಿನ್ ಗೆ ಬರುವ ಗ್ರಾಹಕರು ಬಸ್ ನಿಲ್ಲುವ ಜಾಗದಲ್ಲೇ ಬೈಕ್‌ಗಳನ್ನ ನಿಲ್ಲಿಸುತ್ತಿದ್ದಾರೆ. ಇದರಿಂದ ಗದಗ ಹಾಗೂ ಲಕ್ಷ್ಮೇಶ್ವರ ಕಡೆಯಿಂದ ಬರುವ ಬಸ್‌ಗಳು ಚಾಲಕರು ನಿಗದಿತ ಜಾಗ ಬಿಟ್ಟು ದೂರವೆ ನಿಲ್ಲಿಸುತ್ತಾರೆ, ಬಸ್ ಹತ್ತುವ ಪ್ರಯಾಣಿಕರು ತಾವು ಕುಳಿತ ಜಾಗದಿಂದ ಎದ್ದು ಬಿದ್ದು ಓಡಬೇಕಾಗಿದೆ.

ಲಾಕ್‌ಡೌನ್ ಪೂರ್ವದಲ್ಲಿ ನಿಲ್ಧಾಣದ ಒಂದು ಭಾಗದಲ್ಲಿ ಬೈಕ್ ನಿಲ್ಲಿಸಲು ವ್ಯವಸ್ಥೆ ಮಾಡಿ, ನಿತ್ಯ ಪೋಲಿಸ್ ಸಿಬ್ಬಂದಿ ನೇಮಿಸಲಾಗುತಿತ್ತು. ಆದರೆ ಅನ್‌ಲಾಕ್ ಆದಾಗಿನಿಂದ ಇಲ್ಲಿ ಅದಾವುದು ವ್ಯವಸ್ಥೆ ನಡೆಯುತ್ತಿಲ್ಲ, ಪೋಲಿಸ್ ಸಿಬ್ಬಂದಿಯು ಇಲ್ಲದಾಗಿದೆ.

ಪ್ರಯಾಣಿಕರಲ್ಲದವರು ಸಹ ಕುಳಿತು ಎಲ್ಲಂದರಲ್ಲಿ ಉಗುಳುವದು, ಧೂಮಪಾನ ಮಾಡುವುದರಿಂದ ಮಹಿಳೆಯರಿಗೆ ಕಿರಿ ಕಿರ ಉಂಟು ಮಾಡುತ್ತಿದೆ. ಇಲ್ಲಿಂದ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ಅಣ್ಣಿಗೇರಿ, ಹುಬ್ಬಳ್ಳಿ ನಗರಗಳಿಗೆ ನಿತ್ಯ ನೂರಾರು ಬಸ್‌ಗಳ ಸೌಲಭ್ಯವಿದ್ದು ಸಾವಿರಾರು ಪ್ರಯಾಣಿಕರು ಬಸ್ ಸಂಚಾರ ಮಾಡುತ್ತಾರೆ.

ಬಸ್‌ ನಿಲ್ಧಾಣ ಸೇರಿದಂತೆ ರಸ್ತೆಯಲ್ಲಿ ವಿನಾಕಾರಣ ಬೈಕ್ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡುವವರ ಬಗ್ಗೆ ಗಮನಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಮತ್ತು ಸಿಬ್ಬಂದಿ ನಿಯೋಜಿಸಲಾಗುವದು ಎಂದು ನೂತನ ಪಿಎಸ್‌ಐ ಸಚಿನ್ ಅಲಮೇಲಕರ ತಿಳಿಸಿದರು.

Exit mobile version