ಮುಳಗುಂದ: ಸ್ಥಳೀಯ ಬಸ್ ನಿಲ್ಧಾಣದ ನಿಲುಗಡೆ ಸ್ಥಳದಲ್ಲೇ ನಿತ್ಯ ಬೈಕ್ ಗಳ ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಹೊಸ ಬಸ್ ನಿಲ್ಧಾಣ ಆರಂಭವಾದಾಗಿನಿಂದ ಬೈಕ ನಿಲ್ಲಿಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಇಲ್ಲದಿರುವದು ಈ ಸಮಸ್ಯೆ ಉಂಟಾಗಿದೆ. ನಿಲ್ಧಾನದಲ್ಲಿ ಯಾವ ಸೂಚನಾ ಫಲಕವನ್ನು ಅಳಡಿಕೆಗೆ ಸಂಬಂಧಿಸಿದ ಸಾರಿಗೆ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.

ನಿಲ್ಧಾಣ ವಿಶಾಲವಾಗಿದ್ದರೂ ಸಹ ಕ್ಯಾಂಟಿನ್ ಗೆ ಬರುವ ಗ್ರಾಹಕರು ಬಸ್ ನಿಲ್ಲುವ ಜಾಗದಲ್ಲೇ ಬೈಕ್‌ಗಳನ್ನ ನಿಲ್ಲಿಸುತ್ತಿದ್ದಾರೆ. ಇದರಿಂದ ಗದಗ ಹಾಗೂ ಲಕ್ಷ್ಮೇಶ್ವರ ಕಡೆಯಿಂದ ಬರುವ ಬಸ್‌ಗಳು ಚಾಲಕರು ನಿಗದಿತ ಜಾಗ ಬಿಟ್ಟು ದೂರವೆ ನಿಲ್ಲಿಸುತ್ತಾರೆ, ಬಸ್ ಹತ್ತುವ ಪ್ರಯಾಣಿಕರು ತಾವು ಕುಳಿತ ಜಾಗದಿಂದ ಎದ್ದು ಬಿದ್ದು ಓಡಬೇಕಾಗಿದೆ.

ಲಾಕ್‌ಡೌನ್ ಪೂರ್ವದಲ್ಲಿ ನಿಲ್ಧಾಣದ ಒಂದು ಭಾಗದಲ್ಲಿ ಬೈಕ್ ನಿಲ್ಲಿಸಲು ವ್ಯವಸ್ಥೆ ಮಾಡಿ, ನಿತ್ಯ ಪೋಲಿಸ್ ಸಿಬ್ಬಂದಿ ನೇಮಿಸಲಾಗುತಿತ್ತು. ಆದರೆ ಅನ್‌ಲಾಕ್ ಆದಾಗಿನಿಂದ ಇಲ್ಲಿ ಅದಾವುದು ವ್ಯವಸ್ಥೆ ನಡೆಯುತ್ತಿಲ್ಲ, ಪೋಲಿಸ್ ಸಿಬ್ಬಂದಿಯು ಇಲ್ಲದಾಗಿದೆ.

ಪ್ರಯಾಣಿಕರಲ್ಲದವರು ಸಹ ಕುಳಿತು ಎಲ್ಲಂದರಲ್ಲಿ ಉಗುಳುವದು, ಧೂಮಪಾನ ಮಾಡುವುದರಿಂದ ಮಹಿಳೆಯರಿಗೆ ಕಿರಿ ಕಿರ ಉಂಟು ಮಾಡುತ್ತಿದೆ. ಇಲ್ಲಿಂದ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ಅಣ್ಣಿಗೇರಿ, ಹುಬ್ಬಳ್ಳಿ ನಗರಗಳಿಗೆ ನಿತ್ಯ ನೂರಾರು ಬಸ್‌ಗಳ ಸೌಲಭ್ಯವಿದ್ದು ಸಾವಿರಾರು ಪ್ರಯಾಣಿಕರು ಬಸ್ ಸಂಚಾರ ಮಾಡುತ್ತಾರೆ.

ಬಸ್‌ ನಿಲ್ಧಾಣ ಸೇರಿದಂತೆ ರಸ್ತೆಯಲ್ಲಿ ವಿನಾಕಾರಣ ಬೈಕ್ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡುವವರ ಬಗ್ಗೆ ಗಮನಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಮತ್ತು ಸಿಬ್ಬಂದಿ ನಿಯೋಜಿಸಲಾಗುವದು ಎಂದು ನೂತನ ಪಿಎಸ್‌ಐ ಸಚಿನ್ ಅಲಮೇಲಕರ ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.

ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ಬ್ಯಾಂಕ್ ಗೆ ವಂಚನೆ

ಉತ್ತರಪ್ರಭ ಸುದ್ದಿ, ಗದಗ: ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ…

ಲಕ್ಷ್ಮೇಶ್ವರ: ಕಾಮಗಾರಿ ಮುಗಿದರೂ ಹಸ್ತಾಂತರವಾಗದ ಅಂಗನವಾಡಿ

ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.