ಗದಗ: ಟಿಪ್ಪು ಜಯಂತಿ ಆಚರಿಸುವ ಮೂಲಕ ಅವರ ಸಾಧನೆ, ರಾಜಕೀಯ ನಿಲುವುಗಳು, ದೇಶಪ್ರೇಮವನ್ನು ಇಂದಿನ ಯುವ ಸಮುದಾಯಕ್ಕೆ ಸಾರಬೇಕು ಎಂದು ದಲಿತ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹೋರಾಟ ಸಮಿತಿಯ ಮುಖಂಡ ಶರೀಫ್ ಬಿಳೆಯಲಿ ಹೇಳಿದರು.

ನಾಡ ಪ್ರೇಮಿ ಟಿಪ್ಪು ಸುಲ್ತಾನ್ ಅವರ 270ನೇ ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಜಯಂತಿಗೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಅನುಮತಿ ನೀಡಲು ಮಲತಾಯಿ ಧೊರಣೆ ತೋರುತ್ತಿದೆ. ಸರ್ಕಾರ ಈ ಆಚರಣೆ ರದ್ದು ಮಾಡಿರುವುದರಿಂದ ಅನುಮತಿ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೊರೋನ ನೆಪ ಹೇಳಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮ ಸರ್ಕಾರದ ಆಯೋಜನೆ ಮಾಡಿರುವುದಲ್ಲ. ನಮ್ಮೊಂದಿಗೆ 35ಕ್ಕೂ ಹೆಚ್ಚಿನ ವಿವಿಧ ಸಂಘಟನೆಗಳು ಹಾಗು ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ. ಜಯಂತಿಯ ಪ್ರಯುಕ್ತ ಎಲ್ಲ ಧರ್ಮ ಮುಖಂಡರು ಟಿಪ್ಪು ಸುಲ್ತಾನ ಅವರ ಸಿದ್ಧಾಂತ, ಅವರ ಸಾಧನೆ ಹಾಗೂ ಅವರ ದೇಶಪ್ರೇಮದ ಬಗ್ಗೆ ಅವರು ದೃಷ್ಠಿಕೋನದಲ್ಲಿ ಅವರು ವಿಚಾರ ಸಂಕಿರ್ಣ ನಡೆಸಲಾಗುವುದು. ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅನುಮತಿ ನೀಡಲಿ ಬಿಡಲಿ ನಾವು ಟಿಪ್ಪು ಜಯಂತಿಗೆ ಆಚರಣೆಗೆ ನಮ್ಮ ಸಂಘಟನೆಗಳು ಸಿದ್ಧ ಎಂದು ಹೇಳಿದರು.
ಸಂಜೆ ನಗರಸಭೆಯಲ್ಲಿನ ಮಹತ್ಮಾಗಾಂಧಿ ಪ್ರತಿಮೆಯಿಂದ ಆರಂಭವಾಗಿ ನಗದರ ಹತ್ತಿಕಾಳ್ ಕೂಟದಲ್ಲಿ ಜಯಂತಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದರು.

ಇಶಾಪ್ ನಮಾಜಿ, ಇಮ್ತಿಯಾಜ್ ಮಾನ್ವಿ, ಯಲ್ಲಪ್ಪ ರಾಮಗೇರಿ, ವಿಜಯ್ ಕಲ್ಮನಿ, ಮುತ್ತು ಬಿಳೆಯಲಿ, ಶಿವಾನಂದ ತಮ್ಮನ್ನವರ ಸೆರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಚುರುಕು: 14 ಕಣ್ಗಾವಲು ಆರೋಗ್ಯ ತಂಡಗಳ ರಚನೆ

ಜಿಲ್ಲಾ ಮಟ್ಟದ 14 ಕಣ್ಗಾವಲು ಸಾರ್ವಜನಿಕ ಆರೋಗ್ಯ ಸುರಕ್ಷತಾ ತಂಡಗಳ ರಚಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ: ಸಚಿವ ಸುರೇಶ ಕುಮಾರ್

ನಿರೀಕ್ಷೆಗಿಂತ ಮೊದಲೇ ಪಿಯುಸಿ ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ನಾಳೆ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.

ಸಂವಿಧಾನದ ಸಮಗ್ರತೆ ಎತ್ತಿ ಹಿಡಿಯೋಣ: ಶಾಸಕ ಆರ್.‌ಬಸನಗೌಡ ತುರವಿಹಾಳ

ವರದಿ:ವಿಠ್ಠಲ ಕೇಳುತ್ ಮಸ್ಕಿ: ಜಾತ್ಯತೀತ, ಸಮಾನತೆಯ ಸಮಾಜ ನಿರ್ಮಾಣ ಗಣರಾಜ್ಯದ ಆಶಯವಾಗಿದ್ದು, ಇದನ್ನು ಸಕಾರಗೊಳಿಸುವ ಜವಬ್ದಾರಿ…

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುವ ಅಧಿಕಾರ ಇಲ್ಲವಂತೆ!

ಮೈಸೂರು : ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡುವ ಅಧಿಕಾರ ನಮಗಿಲ್ಲ. ಅದರ ಬಗ್ಗೆ ಮಾತನಾಡಿದರೆ,…