ಗಜೇಂದ್ರಗಡ: ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆರ್ಥಿಕ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಬೆಳವಣಿಗೆಗೆ ನೆರವಾಗಬೇಕು. ರಾಜ್ಯದಲ್ಲಿ ಗೊಲ್ಲ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸರ್ಕಾರದ ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಹಿಂದುಳಿದ ಸಮುದಾಯವನ್ನು ಮೇಲೆತ್ತುವ ದೆಸೆಯಲ್ಲಿ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಗೊಲ್ಲ ಅಭಿವೃದ್ಧಿ ನಿಗಮ ಎಂದು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದಿರಿ, ಬಳಿಕ ನಿಗಮದ ಹೆಸರನ್ನು ಬದಲು ಮಾಡಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಆದೇಶಿಸಿರುವುದು ದ್ವಂದ್ವ ನಿಲುವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧ ನಿಗಮ ಎಂದು ಸ್ಥಾಪನೆ ಮಾಡುವ ಮೂಲಕ ಗೊಲ್ಲ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ, ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಿ.ಎಫ್.ಗೌಡರ, ಪಿ.ವಾಯ್.ಮ್ಯಾಗೇರಿ, ನಾಗಪ್ಪ ಮ್ಯಾಗೇರಿ, ಶರಣಪ್ಪ ದಿವಾಣದ, ಎಚ್.ವಿ. ಬೋನೇರಿ, ಕೆ.ವಾಯ್. ವರಗಾರ, ಪರಶುರಾಮ ಮ್ಯಾಗೇರಿ, ಕಳಕಪ್ಪ ಗುಳೇದ, ಪರಶುರಾಮ ಗುಳೇದ, ಮಲ್ಲು ಮ್ಯಾಗೇರಿ, ಶರಣಪ್ಪ ದಿವಾಣದ, ಮುದಕಪ್ಪ ಬೋನೆರಿ, ಮುತ್ತು ಮ್ಯಾಗೇರಿ, ಮಂಜು ವರಗಾ, ಕಳಕಪ್ಪ ದಿವಾಣದ, ಕಳಕಪ್ಪ ಕುರಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಶಾಸಕ ಎಚ್ಕೆ ಪಾಟೀಲ್ ವಿರೋಧ

ಭೂಸುಧಾರಣೆ ವಿಚಾರವಾಗಿ ಸರಕಾರ ರೈತ‌ ವಿರೋಧಿ ನಿರ್ಣಯ ಕೈಗೊಂಡಿದೆ. ಶ್ರೀಮಂತರು ಹಾಗೂ ಕಂಪನಿಯವರಿಗೆ ಭೂಮಿ ಪಡೆಯಲು ಆದ್ಯತೆ‌ ನೀಡಿದೆ ಎಂದು ಶಾಸಕ ಎಚ್.ಕೆ.ಪಾಟೀಲ ವಿರೋಧ ವ್ಯಕ್ತಪಡಿಸಿದರು.

ನೀರಿನ ಬವಣೆ ನೀಗಿಸಲು ಮುಂದಾದ ರೋಣ ಪುರಸಭೆ

ಜಲಶಕ್ತಿ ಅಭಿಯಾನದಡಿಯಲ್ಲಿ ನೀರಿನ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿದ ಪುರಸಭೆ ಸಿಬ್ಬಂಧಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ನಗರಕ್ಕೆ ಪ್ರತಿನಿತ್ಯ 20 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದೆ. ಬೇಸಿಗೆ ನಿರ್ವಹಣೆ ಸ್ವಲ್ಪ ಕಷ್ಟ. ಆದರೂ ಪುರಸಭೆ ಇದಕ್ಕೆ ಸೂಕ್ತ ಕ್ರಮಗಳನ್ನು ತಗೆದುಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ತೊಂದರೆಯಾಗಬಾರದು ಎಂದು ಕಾಳಜಿವಹಿಸಿದ್ದಾರೆ ಎಂಬುವದು ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆ.ಎಸ್ಆರ.ಟಿ.ಸಿ ನೌಕರರಿಗೆ ಸಂಬಳರಹಿತ ರಜೆ ಅಮಾನವೀಯ:ಸರ್ಕಾರ ದಿವಾಳಿಯಾಗಿದೆಯೇ?: ಸಿದ್ದರಾಮಯ್ಯ ಆಕ್ರೋಶ

ಕೆ.ಎಸ್.ಆರ.ಟಿ.ಸಿ ನೌಕರರಿಗೆ 1 ವರ್ಷ ಸಂಬಳರಹಿತ ರಜೆ ನೀಡಲು ಹೊರಟಿರುವುದು ಕಾರ್ಮಿಕ ವಿರೋಧಿ ನಡೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಸರ್ಕಾರದ ಯೋಚನೆ ಕಾರ್ಮಿಕ ವಿರೋಧಿ ಮತ್ತು ಅಮಾನವೀಯ

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.