ನಿಡಗುಂದಿ: ಸಂವಿಧಾನ ಕರ್ತೃ ಡಾ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿರುವ ರಾಯಚೂರ ಜಿಲ್ಲಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಪರ ನಾನಾ ಸಂಘಟನೆಗಳು ನಿಡಗುಂದಿ ಪಟ್ಟಣದಲ್ಲಿ ಭಾರೀ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು ಇಲ್ಲಿಯ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟಿಸಿದರು.

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ


ವಿವಿಧ ಸಂಘಟನೆಯ ಮುಖಂಡರಾದ ಅಶೋಕ ಚಲವಾದಿ, ಶ್ರೀನಾಥ ಭೈರವಾಡಗಿ, ಪೀರಪ್ಪ ದೊಡಮನಿ, ಲಕ್ಷ್ಮಣ ಮುಂದಿನಮನಿ ಘಟನೆ ಖಂಡಿಸಿ ಮಾತನಾಡಿ, ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಸ್ಪೃಶ್ಯರ ಏಳಿಗೆ ಸಹಿಸದ ಅನೇಕರು ಮೇಲಿಂದ ಮೇಲಿ ಸಂವಿಧಾನ ಶಿಲ್ಪಿಯನ್ನು ಅಪಮಾನ ಮಾಡುತ್ತಿದ್ದಾರೆ ಎಂದರು.

ತಹಶೀಲ್ದಾರ್ ‌ಮೂಲಕ ರಾಜ್ಯಪಾಲರಿಗೆ ಮನವಿ


ಪರಶುರಾಮ ದಿಂಡವಾರ, ಅಶೋಕ ನಡುವಿನಮನಿ, ಮಂಜುನಾಥ ಕಟ್ಟೀಮನಿ, ರಮೇಶ ಹಾಲ್ಯಾಳ, ಹನುಮಂತ ಬಾಗೇವಾಡಿ, ಪ್ರಶಾಂತ ಚಲವಾದಿ, ಶಂಕರ ಅಮೀನಪ್ಪಗೋಳ, ಸಿದ್ದು , ಯಮನೂರಿ ತಳಗೇರಿ, ಕೃಷ್ಣಾ ಅದ್ವಾನಿ, ಮುತ್ತು ನಡುವಿನಮನಿ ಇದ್ದರು.
ಉಪತಹಶೀಲ್ದಾರ್ ಕೆ.ವೈ. ಹೊಸಮನಿ‌ ಮನವಿ ಸ್ವೀಕರಿಸಿದರು. ತಹಶೀಲ್ದಾರ್ ‌ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 6 ಕ್ಕೂ ಹೆಚ್ಚು ನಾನಾ ದಲಿತ ಸಂಘಟನೆಗಳು ಪ್ರತ್ಯೇಕವಾಗಿ ಮನವಿ ಅರ್ಪಿಸಿದರು.

Leave a Reply

Your email address will not be published. Required fields are marked *

You May Also Like

ಬಸ್ ನಿಲ್ದಾಣದಲ್ಲಿ ಶೌಚಾಲಯ ಅವ್ಯವಸ್ಥೆ ಸಾರಿಗೆ ಅಧಿಕಾರಿ ತರಾಟೆಗೆ

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಅವ್ಯವಸ್ಥೆಯನ್ನು ಸಾರಿಗೆ ಇಲಾಖೆ ಸಂಚಾರಿ ನಿರೀಕ್ಷಕರಿಗೆ ತೋರಿಸುವ ಮೂಲತ ಜೈ ಭೀಮ ಆರ್ಮಿ ಸಂಘಟನೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಜಿಲ್ಲಾದ್ಯಂತ ಶೇಕಡ 38.98 ಮತದಾನ: ಮದ್ಯಾಹ್ನ 1ಗಂಟೆವರೆಗಿನ ವಿವರ

ಗದಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ ಮಧ್ಯಾಹ್ನ 1=00 ಗಂಟೆಯವರೆಗೆ ಶೇಕಡಾವಾರು ಮತದಾನ ಇಂತಿದೆ.…

ಖಾಸಗಿ‌ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರಿಗೆ ಮನವಿ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ತಮ್ಮ ಒಂದು ಅಥವಾ ಎರಡು ದಿನದ ಸಂಬಳವನ್ನು…

ಕೊರೋನಾ ಯೋಧರಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದು ಏಕೆ?

ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣ ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಹೀಗಾಗಿ ಈ ಕಾರ್ಯದಲ್ಲಿ ಬಹಳಷ್ಟು ಕಾಳಜಿಯಿಂದ ಸೇವೆ ಸಲ್ಲಿಸಿದ ಕೊರೋನಾ ಯೋಧರ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.