ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಗಜೇಂದ್ರಗಡ: ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಗಜೇಂದ್ರಗಡ ಹಾಗೂ ರೋಣ ತಾಲೂಕಾ ಗೊಲ್ಲ ಸಮಾಜ ಬಾಂಧವರು ಪಟ್ಟಣದ ತಹಶೀಲ್ದಾರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆರ್ಥಿಕ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಗೊಲ್ಲ ಸಮುದಾಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಬೆಳವಣಿಗೆಗೆ ನೆರವಾಗಬೇಕು. ರಾಜ್ಯದಲ್ಲಿ ಗೊಲ್ಲ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಸರ್ಕಾರದ ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಹಿಂದುಳಿದ ಸಮುದಾಯವನ್ನು ಮೇಲೆತ್ತುವ ದೆಸೆಯಲ್ಲಿ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಗೊಲ್ಲ ಅಭಿವೃದ್ಧಿ ನಿಗಮ ಎಂದು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದ್ದಿರಿ, ಬಳಿಕ ನಿಗಮದ ಹೆಸರನ್ನು ಬದಲು ಮಾಡಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಆದೇಶಿಸಿರುವುದು ದ್ವಂದ್ವ ನಿಲುವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧ ನಿಗಮ ಎಂದು ಸ್ಥಾಪನೆ ಮಾಡುವ ಮೂಲಕ ಗೊಲ್ಲ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲದಿದ್ದರೆ, ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಿ.ಎಫ್.ಗೌಡರ, ಪಿ.ವಾಯ್.ಮ್ಯಾಗೇರಿ, ನಾಗಪ್ಪ ಮ್ಯಾಗೇರಿ, ಶರಣಪ್ಪ ದಿವಾಣದ, ಎಚ್.ವಿ. ಬೋನೇರಿ, ಕೆ.ವಾಯ್. ವರಗಾರ, ಪರಶುರಾಮ ಮ್ಯಾಗೇರಿ, ಕಳಕಪ್ಪ ಗುಳೇದ, ಪರಶುರಾಮ ಗುಳೇದ, ಮಲ್ಲು ಮ್ಯಾಗೇರಿ, ಶರಣಪ್ಪ ದಿವಾಣದ, ಮುದಕಪ್ಪ ಬೋನೆರಿ, ಮುತ್ತು ಮ್ಯಾಗೇರಿ, ಮಂಜು ವರಗಾ, ಕಳಕಪ್ಪ ದಿವಾಣದ, ಕಳಕಪ್ಪ ಕುರಿ ಸೇರಿ ಇತರರು ಇದ್ದರು.

Exit mobile version