ಬೆಂಗಳೂರು : ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ಸಂಜನಾ ಅವರು, ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.


ನಟಿ ಸಂಜನಾ ಅವರು ಸೆ. 16ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಹೀಗಾಗಿ ಶುಕ್ರವಾರ ನಟಿ ಸಂಜನಾ ಗಲ್ರಾನಿ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ, ನ್ಯಾಯಾಲಯ ಈ ಅರ್ಜಿಯನ್ನು ಯಾವಗ ಕೈಗೆತ್ತಿಕೊಳ್ಳಲಿದೆ ಎಂಬುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಸೆ. 28ರಂದು ಬೆಂಗಳೂರಿನ ವಿಶೇಷ ಎನ್‌ ಟಿಪಿಎಸ್ ಕೋರ್ಟ್, ನಟಿ ಸಂಜನಾ ಮತ್ತು ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಸಂಜನಾ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಅವರನ್ನು ಬಂಧಿಸಿದ್ದರು. ವಿಚಾರಣೆಯ ನಂತರ ಸೆ. 16ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. 8 ದಿನಗಳ ಕಾಲ ಸಿಸಿಬಿ ಪೊಲೀಸರು ಸಂಜನಾ ವಿಚಾರಣೆ ನಡೆಸಿದ್ದರು. ಸೆ. 16ರಂದು ಕೋರ್ಟ್, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಅಂದಿನಿಂದ ಅವರು ಜೈಲಿನಲ್ಲಿಯೇ ಇದ್ದಾರೆ.

Leave a Reply

Your email address will not be published. Required fields are marked *

You May Also Like

ಈ ನಟ ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲಿಗ!

ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ.

ಉಸಿರಾಟ ತೊಂದರೆಯಿಂದ ನಟ ಚಿರಂಜೀವಿ ಸರ್ಜಾ ಸಾವು..!

ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಹೊಸ ಆಯಾಮದ ಕಥೆಯನ್ನು ಹೇಳಲು ಹೊರಟ ಅಂಬರೀಶ್

ಚಂದನವದಲ್ಲಿ ಹೊಸಬರ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸುತ್ತಿವೆ. ಇದರ ಜೊತೆಗೆ, ಸಿನಿಮಾಗಳಲ್ಲಿ ಹೊಸಹೊಸ ಪ್ರಯೋಗಗಳನ್ನು ನಡೆಸುವ ನಿರ್ದೇಶಕರಿಗೆ ಕನ್ನಡ ಚಿತ್ರರಂಗ ಕಾಲಕಾಲಕ್ಕೆ ವೇದಿಕೆ ಒದಗಿಸುತ್ತಿದೆ.

ವೈಯಕ್ತಿಕ ಸೌಂದರ್ಯ ವರ್ಧಕಕ್ಕೆ ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಸಲ್ಮಾನ್ ಖಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ FRSH ಹೆಸರಿನ ವೈಯಕ್ತಿಕ ಸೌಂದರ್ಯ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ. ವೈಯಕ್ತಿಕ ಉಡುಪು, ದೇಹದಾರ್ಡ್ಯ ಸಲಕರಣೆ, ಜಿಮ್ ಮತ್ತು ಈ-ಸೈಕಲ್ ಬಿಡುಗಡೆಯ ನಂತರ ಇದೀಗ ಹೊಸ ಬ್ರಾಂಡ್ ಪರಿಚಯಿಸಿದ್ದಾರೆ.