ಮುಂಬಯಿ: ನಟ ವಿಜಯ್‌ ದೇವರಕೊಂಡ ಅವರು ಅರ್ಜುನ್‌ ರೆಡ್ಡಿ ಸಿನಿಮಾದಿಂದ ಫುಲ್ ಫೇಮಸ್ ಆಗಿದ್ದಾರೆ. ಸದ್ಯ ಅವರನ್ನು ಹೊಸ ಸಿನಿಮಾ ಅವಕಾಶಗಳು ಕೈ ಬೀಸಿ ಕರೆಯುತ್ತಿವೆ.

ಅರ್ಜುನ್‌ ರೆಡ್ಡಿ ಬಳಿಕ ಗೀತಾ ಗೋವಿಂದಂ ಹೊರತುಪಡಿಸಿದರೆ ದೇವರಕೊಂಡಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ. ಡಿಯರ್‌ ಕಾಮ್ರೇಡ್‌, ಟ್ಯಾಕ್ಸಿವಾಲ, ನೋಟಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಧನೆ ಮಾಡಲಿಲ್ಲ. ಆದರೂ ಬಾಲಿವುಡ್ ನ ಕೆಲವು ನಾಯಕರನ್ನು ಮಣಿಸಿ ದೇವರಕೊಂಡ ಮುನ್ನುಗ್ಗುತ್ತಿದ್ದಾರೆ. ಆ ರೇಸ್‌ನಲ್ಲಿ ಅಲ್ಲು ಅರ್ಜುನ್‌, ಮಹೇಶ್‌ ಬಾಬು, ಪ್ರಭಾಸ್‌ ಸೇರಿದಂತೆ ಹಲವರನ್ನು ಅವರು ಹಿಂದಿಕ್ಕಿ ಸಾಗಿದ್ದಾರೆ.

ಈ ಹಿಂದೆ ಯಾವ ನಾಯಕನ ಚಿತ್ರ ಎಷ್ಟು ಹಣ ಗಳಿಸಿತು ಎಂಬ ಲೆಕ್ಕಾಚಾರದ ಮೇಲೆ ನಾಯಕನ ಪಟ್ಟ ಬದಲಾಗುತ್ತಿತ್ತು. ಆದರೆ, ಇಂದು ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿನ ಫ್ಯಾನ್ಸ್ ಗಳ ಲೆಕ್ಕಾಚಾರದ ಮೇಲೆಯೂ ನಾಯಕನ ಹಣೆ ಬರಹ ಬರೆಯಲಾಗುತ್ತದೆ. ಹೀಗಾಗಿ ಎಲ್ಲ ನಾಯಕ – ನಾಯಕಿಯರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಈ ವಿಷಯದಲ್ಲಿ ದೇವರಕೊಂಡ ಕೂಡ ಹಿಂದೆ ಬಿದ್ದಿಲ್ಲ.

ಎಲ್ಲ ವರ್ಗದ ಪ್ರೇಕ್ಷಕರಿಗೂ ವಿಜಯ್‌ ದೇವರಕೊಂಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟ ಪಡುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬರೋಬ್ಬರಿ 7 ಮಿಲಿಯನ್‌ ಫಾಲೋವರ್ಸ್‌ ಹೊಂದುವ ಮೂಲಕ ನಂಬರ್‌ ಒನ್‌ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಅವರಿಗಿಂತಲೂ ತೆಲುಗು ಚಿತ್ರರಂಗದ ನಾಯಕಿ ನಟಿಯರು ಮುಂದೆ ಇದ್ದಾರೆ. ಸಮಂತಾ ಅಕ್ಕಿನೇನಿ 9.8 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದರೆ, ತಮನ್ನಾ ಭಾಟಿಯಾರನ್ನು 10.6 ಮಿಲಿಯನ್‌ ಮಂದಿ ಫಾಲೋ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ 10.3 ಮಿಲಿಯನ್‌ ಹೊಂದಿದ್ದರೆ, ಶ್ರುತಿ ಹಾಸನ್‌ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ತಲಾ 13.8 ಮಿಲಿಯನ್‌ ಫಾಲೋವರ್ಸ್‌ ಸಂಪಾದಿಸಿದ್ದಾರೆ. ಕಾಜಲ್‌ ಅಗರ್‌ವಾಲ್‌ ಅವರನ್ನು ಬರೋಬ್ಬರಿ 14.4 ಮಿಲಿಯನ್‌ ಜನರು ಫಾಲೋವರ್ಸ್ ಹೊಂದಿದ್ದಾರೆ.

Leave a Reply

Your email address will not be published.

You May Also Like

ನಾಪತ್ತೆಯಾಗಿದ್ದ ನಟಿ ರಮ್ಯ ಮತ್ತೆ ಪ್ರತ್ಯಕ್ಷ

ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ದರ್ಶನಕ್ಕಾಗಿ ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದರು.

ನಗರಸಭೆ ಚುನಾವಣೆ :ವಾರ್ಡ ನಂ22ರ ಕಾಂಗ್ರೇಸ್ ಅಭ್ಯರ್ಥಿ ಪರ ಮಾಜಿ ಶಾಸಕ ಡಿ ಆರ್ ಪಾಟೀಲ ಗಂಗಿಮಡಿಯಲ್ಲಿ ಪ್ರಚಾರ

ಗದಗ:ನಗರಸಭೆ ಚುನಾವಣೆ ಡಿ. 20-12-2021 ರಂದು ವಾರ್ಡ್ ನಂ 22 ರ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ…

ನಾನು ಎಸ್ಕಾರ್ಟ್ ನಲ್ಲಿ ಓಡಾಡುವುದು ಕೆಲವರಿಗೆ ಬೇಸರ ತಂದಿರಬಹುದು: ಸಚಿವ ಡಾ. ನಾರಾಯಣಗೌಡ

ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರು ಏಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ.

ಲಾಕ್ ಡೌನ್ ಬಗ್ಗೆ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಲಾಕ್ ಡೌನ್ ಬಗ್ಗೆ ಸರ್ಕಾರ ಈಗಾಗಲೇ ನೀಡಿರುವ ಮಾರ್ಗಸೂಚಿಗೆ ಕೆಲವೊಂದು ಅಂಶಗಳನ್ನು ಸೇರ್ಪಡಿಸಿ ರಾಜ್ಯ…