ನಾಗ್ಪುರ : ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ 800 ಕಿ.ಮೀ ಪ್ರಯಾಣಿಸಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಖನೌದಿಂದ ಮಹಾರಾಷ್ಟ್ರದ ನಾಗ್ಪುರಕ್ಕೆ ಪ್ರಯಾಣಿಸಿ ಈ ಮಹಿಲೆ ದೂರು ನೀಡಿದ್ದಾರೆ. ಉತ್ತರ ಪ್ರದೇಶದ ರಾಜಧಾನಿ ಲಖನೌನದಲ್ಲಿಯೇ ನನ್ನ ಮೇಲ ಅತ್ಯಾಚಾರ ನಡೆದಿದೆ ಎಂದು ನೇಪಾಳಿ ಮಹಿಳೆ ಆರೋಪಿಸಿದ್ದಾರೆ.
ಅತ್ಯಾಚಾರ ನಡೆಸಿದ ನಂತರ ಪೊಲೀಸರ ಬಳಿ ಹೋದರೆ, ನನ್ನನ್ನು ಕೊಂದು ಹಾಕುತ್ತೇನೆ ಎಂದು ಆ ವ್ಯಕ್ತಿ ಹೆದರಿಸಿದ್ದರಿಂದಾಗಿ ಇಲ್ಲಿಗೆ ಬಂದು ದೂರು ನೀಡುತ್ತಿದ್ದೇನೆ. ಎಂಜನೀಯರ್ ಆಗಿರುವ ಪ್ರವೀಣ್ ರಾಜ್ಪಾಲ್ ಯಾದವ್ ಎಂಬ ವ್ಯಕ್ತಿ ಮಾರ್ಚ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈತ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಡ್ರಗ್ಸ್ ನೀಡಿ ಈ ಕೃತ್ಯ ಎಸಗಿದ್ದಾನೆ. ಸ್ನೇಹಿತನ ಸಹಾಯದಿಂದ ನಾನು ಇಲ್ಲಿಯವರೆಗೂ ಬಂದಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.
ಈ ಕುರಿತು ಪೊಲೀಸರು ಶೂನ್ಯ ಎಫ್ ಐಆರ್ ದಾಖಲಿಸಿದ್ದಾರೆ. ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲು ಅವಕಾಶವಿರುವ ವ್ಯವಸ್ಥೆಗೆ ಶೂನ್ಯ ಎಫ್ ಐಆರ್ ಎನ್ನುತ್ತಾರೆ.