ನವದೆಹಲಿ : ಸೈನಿಕರ ಹೆಸರಿನಲ್ಲಿ ದೀಪ ಹಚ್ಚಿ ಪೂಜೆ ಸಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಮನ್ ಕೀ ಬಾತ್ ನಲ್ಲಿ ದೇಶ ಉದ್ಧೇಶಿಸಿ ಮಾತನಾಡಿದ ಅವರು, ಸೈನಿಕರು ಹಾಗೂ ಭದ್ರತಾ ಪಡೆಗಳೊಂದಿಗೆ ಭಾರತವು ಯಾವಾಗಲೂ ಇರುತ್ತದೆ. ನಮ್ಮ ಯೋಧರು ದೇಶಕ್ಕಾಗಿ ತಮ್ಮ ಕುಟುಂಬಗಳನ್ನು ತೊರೆದು ದೇಶ ಸೇವೆ ಮಾಡುತ್ತಿರುತ್ತಾರೆ. ವಿದೇಶಗಳ ಬೆದರಿಕೆಗಳಿಂದ ದೇಶವನ್ನು ಕಾಯುವ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ಅವರನ್ನು ನೆನೆದು ದೀಪ ಹಚ್ಚಿ ಬೆಳಗಿಸಿ ಎಂದು ಕರೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಈದ್ ಹಾಗೂ ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಹಬ್ಬದ ಹಂಗಿಲ್ಲದೆ ನಮ್ಮನ್ನು ರಕ್ಷಿಸುತ್ತಿರುವವರನ್ನು ನೆನೆಯುವುದು ಅನಿವಾರ್ಯವಾಗಿದೆ ಎಂದು ಮನವಿ ಮಾಡಿದ್ದಾರೆ. 

ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ಸೇರಿದಂತೆ ಚೀನಾದ ಸುಮಾರು 3,500 ಕಿ.ಮೀ ಉದ್ದದ ಗಡಿಯಲ್ಲಿ ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ಗಮನಾರ್ಹ ರೀತಿಯಲ್ಲಿ ಬಲಪಡಿಸಲಾಗಿದೆ. ಲಡಾಖ್ನದಲ್ಲಿ ಉದ್ವಿಗ್ನತೆ ತಲೆದೋರಿದೆ. ಹಲವು ರೀತಿಯಲ್ಲಿ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರೂ ಸಂಯಮದಿಂದಲೇ ಹಬ್ಬ ಆಚರಿಸಬೇಕು. ವಸ್ತುಗಳನ್ನು ಕೊಳ್ಳುವಾಗ ದೇಶೀಯ ವಸ್ತುಗಳ ಬಗ್ಗೆ ಗಮನ ಹರಿಸಿ, ಸ್ಥಳೀಯ ವ್ಯಾಪಾರಿಗಳೊಂದಿಗೆ ವ್ಯವಹಾರ ಮಾಡುವುದನ್ನು ರೂಢಿ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಗೂಗಲ್ ಫೋಟೋ ಬ್ಯಾಕ್ಅಪ್ ಸ್ಟೋರೇಜ್ ಗೆ ಇನ್ಮುಂದೆ ಹಣ ಪಾವತಿಸಬೇಕು

ಈಗಾಗಲೇ ಹಲವು ವರ್ಷಗಳಿಂದ ಮೊಬೈಲ್ ಗಳಲ್ಲಿ ಗೂಗಲ್ ಫೋಟೋಗಳು ಉಚಿತವಾಗಿ ಸಿಗುತ್ತಿದ್ದವು. ಆದರೆ ಇನ್ಮುಂದೆ ಹಾಗಿಲ್ಲ. ಫೋಟೋ ಬ್ಯಾಕ್ ಅಪ್ ಸ್ಟೋರೇಜ್ ಮಾಡಲು ಹಣ ಪಾವತಿಸುವಂತಾಗಿದೆ.

ಮಾ.20ಕ್ಕೆ ನವೀನ್ ಮೃತದೇಹ ಆಗಮನ: ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ…

ಕೋವಿಡ್ನಿಂದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಪಿಂಚಣಿ ಪ್ರಕಟ: ಕೇಂದ್ರ ಏನೆಲ್ಲ ಸೌಲಭ್ಯಗಳನ್ನು ಘೋಷಿಸಿದೆ?

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿoದ ಪ್ರಾಣ ಕಳೆದುಕೊಂಡವರ ಅವಲಂಬಿತರಿಗೆ ಕುಟುಂಬವನ್ನು ಸಲುಹಲು ಸಂಪಾದನೆ ಮಾಡುತ್ತಿದ್ದ ಸದಸ್ಯನನ್ನು ಕಳೆದುಕೊಂಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಯೋಜನಗಳನ್ನು ಪ್ರಕಟಿಸಿದೆ.

ಮಹಾಮಾರಿಗೆ ಬೆಚ್ಚಿ ಬಿದ್ದ ಮಹಾರಾಷ್ಟ್ರ!

ಮುಂಬಯಿ: ಕೊರೊನಾ ಮಹಾಮಾರಿಗೆ ಇಡೀ ಮಹಾರಾಷ್ಟ್ರವೇ ಕಂಗಾಲಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 41 ಸಾವಿರ ಗಡಿ…