ನವದೆಹಲಿ: ಲಡಾಕ್ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.
ಚೀನಾ ದೇಶದ ಸೇನೆಯೊಂದಿಗೆ ಗಡಿಯಲ್ಲಿ ಸೇನೆಯ ನಿಲುಗಡೆ ಮತ್ತು ಅಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಭಾರತೀಯ ಸೇನೆ ಮೂರು ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಮೋದಿಯವರು ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದರು. ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರೂ ಪಡೆಗಳ ಮುಖ್ಯಸ್ಥರು ಭೇಟಿ ಮಾಡಿ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಸಿಕ್ಕಿಮ್ ಮತ್ತು ಲಡಾಕ್ ನಲ್ಲಿ ಸೇನೆಯ ನಿಯೋಜನೆ ಸಮಯದಲ್ಲಿ ಈ ಮಾತುಕತೆ ನಡೆದಿದ್ದು ಮಹತ್ವ ಪಡೆದಿದೆ. ಸ್ಯಾಟಲೈಟ್ ಚಿತ್ರದಲ್ಲಿ ಚೀನಾ ಲಡಾಕ್ ಬಳಿ ವಾಯುನೆಲೆ ವಿಸ್ತರಿಸುತ್ತಿರುವುದು ಕಂಡುಬಂದಿದೆ.

ಲಡಾಕ್ ನ ವಿವಾದಿತ ಪ್ರದೇಶದಲ್ಲಿ ಚೀನಾದ ಹೆಲಿಕಾಪ್ಟರ್ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಭದೌರಿಯಾ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆಸ್ಪತ್ರೆಗೆ ದಾಖಲು

ಬೆಳಗಾವಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರು ಸ್ನಾನ ಗೃಹದಲ್ಲಿ ಬಿದ್ದ ಕಾರಣ ಗಾಯಗೊಂಡಿದ್ದು, ಆಸ್ಪತ್ರೆಗೆ…

ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗದ ಕಾರಣ, ಕೆಲ ರಿಯಾಯಿತಿಯೊಂದಿಗೆ ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ ಮುಂದುವರೆಯಲಿದೆ.

ಕೋರಾನಾ: ಭಾರತೀಯ ಔಷಧಿಗೆ ತಡೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ…