ಲಕ್ಷ್ಮೇಶ್ವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನಿವಾಸ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ಖಂಡಿಸಿ ಲಕ್ಷ್ಮೇಶ್ವರ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ್ಣದ ಶಿಗ್ಲಿ ನಾಕಾದಲ್ಲಿ ಟೈರಗೆ ಬೆಂಕಿ ಹಂಚಿ ಪ್ರತಿಭಟನೆ ಮಾಡಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಖಿಲ ಕರ್ನಾಟಕ ಡಿ.ಕೆ.ಶಿ ಅಭಿಮಾನಿ ಬಳಗದಿಂದ ಶಿಗ್ಲಿ ವೃತ್ತದಲ್ಲಿ ಪ್ರತಿಭಟಿಸಿದರು.

ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಹಾಗೂ ಶ್ರೀಯೋಗಿ ಆದಿತ್ಯನಾಥ, ಉತ್ತರ ಪ್ರದೇಶದ ಮಹಿಳೆ ಮೇಲೆ ಅತ್ಯಾಚಾರ ಮುಚ್ಚುಹಾಕಲು ಹೊರಟಿರುವ ಬಿಜೆಪಿ ಸರಕಾಕ್ಕೆ ನಾಚಿಕೆ ಯಾಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಹತ್ತಿಕ್ಕಲು ಬಿಜೆಪಿ ರಣತಂತ್ರ ಮಾಡ್ತಿದೆ ಅಂತ ಆರೋಪಿಸಿದರು.

ಎಸಿಬಿ, ಸಿಬಿಐ ಸರ್ಕಾರದ ಕೈಗೊಂಬೆಯಾಗಿವೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದು ಹೀಗೆ ಮುಂದುವರೆದ್ರೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಅಂತ ಬಿಜೆಪಿ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಪಿ.ಬಳಿಗಾರ, ವಿ.ಜಿ.ಪಡಗೇರಿ, ಟಿ.ಈಶ್ವರ, ಜಯಕ್ಕ ಕಳ್ಳಿ, ವಿರುಪಾಕ್ಷಿ ನಂದೆಣ್ಣವರ, ರಾಮು ಗಡದವರ, ರಾಮು ಅಡಗಿನಮನಿ, ಭಾಗ್ರಶ್ರಿ ಬಾಬಣ್ಣ, ಲಕ್ಷ್ಮವ ಕುರಿ, ಚನ್ಬಪ್ಪ ಜಗಲಿ, ನೀಲಪ್ಪ ಶೆರಶೂರಿ, ವಿರೇಂದ್ರ ಪಾಟೀಲ್, ಶೇಖಣ್ಣ ಕಾಳಿ, ಅಬಜ್ಜ ರೀತಿ, ಸತೀಶ ಬಾರ್ಕಿ, ಬಾಬಣ್ಣ ಅಳವಂಡಿ, ಅಂಬರೀಶ ತೆಂಬದಮನಿ, ಎಂ.ಎಸ್.ದೊಡ್ಡಗೌಡ್ರು, ಶಾಹಾಭಜಾನ ಹವಾಲ್ದಾರ ಸೇರಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡ ಮಾರುಕಟ್ಟೆಯಲ್ಲಿ ಜಮಜಂಗುಳಿ: ಕೋವಿಡ್ ಗೆ ಕ್ಯಾರೆ ಇಲ್ಲ..!

ಕೋವಿಡ್ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಕೋಟೆ ನಾಡಿನಲ್ಲಿ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೇ ಸಾರ್ವಜನಿಕರು ಗುಂಪು ಗುಂಪಾಗಿ ಮೈಮರೆತು ಓಡಾಡುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿತು.

ಗಣೇಶ ಸಂಭ್ರಮ- ಸಾಂಸ್ಕೃತಿಕ ಕಲರವ

ಉತ್ತರಪ್ರಭ ಸುದ್ದಿಆಲಮಟ್ಟಿ: ಇಲ್ಲಿನ ವಿವಿಧ ಬಡಾವಣೆಯಲ್ಲಿ ಗಣೇಶ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಹಲ ಗಜಾನನ ಯುವಕ…

ರೈತರ ಮೇಲೆ ಕಾನೂನು ಕ್ರಮದ ಬೆದರಿಕೆಗೆ ಕುಮಾರಸ್ವಾಮಿ ವಿರೋಧ

ರೈತರ ಮೇಲೆ ದೌರ್ಜನ್ಯ ಎಸಗುವ, ಗುಂಡಿಕ್ಕುವ, ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಂತೆ ಕಾಣುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.