ಗದಗ: ರೈತ ವಿರೋಧಿ ಮಸೂದೆ ಜಾರಿ ಖಂಡಿಸಿ ಕರ್ನಾಟಕ ಬಂದ್ ಗೆ ಗದಗ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಗರದಲ್ಲಿ ಬೆಳ್ಳಂಬೆಳಿಗ್ಗೆಯೇ ಕನ್ನಡಪರ ಸಂಘಟನೆ ಕಾ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ರೈತವಿರೋಧ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ರೈತ ವಿರೋಧ ನಿಲುವಿನ ಬಗ್ಗೆ ಕಿಡಿಕಾರಿದರು.

ನಗರದ ಮುಳಗುಂದ ನಾಕಾದಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಬಾಯಿಬಾಯಿ ಬಡೆದುಕೊಂಡು ಸರ್ಕಾರದ ನಿಲುವು ಖಂಡಿಸಿದರು. ಮಾನವ ಸರಪಳಿ ನಿರ್ಮಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ರೈತ ವಿರೋಧಿ ತಿದ್ದುಪಡಿ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತರಕಾರಿ ಮಾರುಕಟ್ಟೆ ಬಂದ್ ಮಾಡಲು ಯತ್ನಿಸಿದರು.

ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮುಂಜಾಗೃತ ಕ್ರಮವಾಗಿ ಮುಳಗುಂದ ನಾಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಇನ್ನು ರೈತ ಹಾಗೂ ಕಾರ್ಮಿಕ ಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಜಿಲ್ಲೆಯಲ್ಲಿ 10 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.

ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚೌವ್ಹಾಣ್,  ಜಿಲ್ಲಾಧ್ಯಕ್ಷ ಹಾಲಪ್ಪ ವರವಿ, ರಮೇಶ್ ರಾಠೋಡ್, ಈಶ್ವರ ಲಕ್ಷ್ಮೇಶ್ವರ, ನಾಗರಾಜ್ ಕ್ಷತ್ರಿಯ, ಈರಣ್ಣ ಹಿರೇಮಠ, ಶರೀಫ್ ಬೆಣಕಲ್, ಬಾಷಾಸಾಬ ಮಲ್ಲಸಮುದ್ರ, ವಿಠಲ್ ಬೆಂತೂರು, ರಾಜು ಪೂಜಾರ್, ಮೇಘರಾಜ್ ಮೇಲ್ಮನಿ, ಮೋಹನ್ ವರವಿ ಸೇರಿದಂತೆ ಇತರರು ಪಾಲ್ಗೊಂಡಿದ್ರು.

Leave a Reply

Your email address will not be published. Required fields are marked *

You May Also Like

ಕೋರಿಯಾದಿಂದ ಕೋಲಾರಕ್ಕೂ ಬಂದಿವೆ ಸೋಂಕು ಟೆಸ್ಟ್ ಕಿಟ್ ಗಳು

ಕೊರೋನಾ ಸೋಂಕು ತುರ್ತಾಗಿ ಪತ್ತೆ ಹಚ್ಚಲು ಕೋರಿಯಾದಿಂದ ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಗೆ ರ್ಯಾಪಿಡ್ ಆಂಟಿ ಬಾಡಿ ಟೆಸ್ಟಿಂಗ್ ಕಿಟ್ ಗಳು ಬಂದಿವೆ. ಈ ಮೂಲಕ ಇಪ್ಪತ್ತು ನಿಮಿಷದೊಳಗಾಗಿ ಕೊರೋನಾ ಸೇರಿ ಯಾವುದೇ ಸೋಂಕಿದ್ದರೂ ಪತ್ತೆ ಹಚ್ಚಬಹುದಾಗಿದೆ. ಇದು ದೇಶದಲ್ಲಿ ಮೊದಲ ಪ್ರಯತ್ನ ಎಂದು ಹೇಳಲಾಗುತ್ತಿದೆ.

ನಟಿ ಜಸ್ಲೀನ್ ಅವತಾರಕ್ಕೆ ನೆಟ್ಟಿಗರು ಶಾಕ್!

ಸೆಲೆಬ್ರಟಿಗಳಿಗೆ ಅದೆಂತೆಂಥಾ ಹುಚ್ಚಿರುತ್ತೆ ಅಂತ ಊಹಿಸೋಕು ಆಗಲ್ಲ. ಪ್ರಚಾರಕ್ಕಾಗಿ ಎಂತೆಂಥ ಚಿತ್ರವಿಚಿತ್ರ ಅವತಾರ ತಾಳುತ್ತಾರೆ ಅಂತ ಕಲ್ಪನೆಗೂ ಅಸಾಧ್ಯ. ಇಂತಹ ಪ್ರಚಾರದ ಗೀಳಿಗೆ ಬಿದ್ದ ನಟಿಯೊಬ್ಬರು ಇದೀಗ ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

ಆಮರಣ ಉಪವಾಸ ಸತ್ಯಾಗ್ರಹ 3ನೇ ದಿನದತ್ತ : ಧರಣಿ ನಿರತರ ಆರೋಗ್ಯ ತಪಾಸಣೆ

ಉತ್ತರಪ್ರಭಆಲಮಟ್ಟಿ: ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿನ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು ಎಂದು…