ಉತ್ತರಪ್ರಭ
ಆಲಮಟ್ಟಿ:
ಶಾಸ್ತ್ರಿ ಜಲಾಶಯ ವ್ಯಾಪ್ತಿಯಲ್ಲಿನ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು ಎಂದು ಆಗ್ರಹಪಡಿಸಿ ಇಲ್ಲಿ ಸೋಮವಾರದಿಂದ ನಡೆಸುತ್ತಿರುವ ಆಮರಣ ಉಪವಾಸ ಸತ್ಯಾಗ್ರಹ ಮಂಗಳವಾರ ಎರಡನೇ ದಿನ ಪೂರೈಸಿ ಮೂರನೇ ದಿನದತ್ತ ಮುಂದುವರೆದಿದೆ.
ಅಖಂಡ ಕನಾ೯ಟಕ ರೈತ ಸಂಘದವರು ಮೊದಲು ಆರುದಿನ ಆಹೋರಾತ್ರಿ ಧರಣಿ ನಡೆಸಿ ಸೋಮವಾರ ದಿಂದ ಕೈಗೊಂಡಿರುವ ಆಮರಣ ಉಪವಾಸ ಸತ್ಯಾಗ್ರಹ ಮಂಗಳವಾರ ಎರಡನೇ ದಿನ ಪೂರೈಸಿ ಮೂರನೇ ದಿನಕ್ಕೆ ಕಾಲಿರಿಸಿದೆ.
ಕಳೆದ ಎರಡು ದಿನದಿಂದ ನೀರು,ಅನ್ನ ಇಲ್ಲದೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗು ವಿಠ್ಠಲ ಬಿರಾದಾರ ಆಮರಣ ಉಪವಾಸ ಕೈಗೊಂಡಿದ್ದಾರೆ. ಸತ್ಯಾಗ್ರಹಿ ನಿರತ ಈ ಇರ್ವರ ಆರೋಗ್ಯವನ್ನು ಸತ್ಯಾಗ್ರಹ ಸ್ಥಳಕ್ಕೆ ನಿಡಗುಂದಿ ಸಮೂದಾಯ ಆರೋಗ್ಯ ಕೇಂದ್ರದ ವೈದ್ಯರು ಆಗಮಿಸಿ ತಪಾಸಣೆ ಮಾಡಿದರು. ಆರೋಗ್ಯದ ಏರುಪೇರುಗಳ ಮೇಲೆ ನಿಗಾ ಇರಿಸಲಾಗಿದ್ದು ವೈದ್ಯರು ಸ್ಥಳದಲ್ಲಿದ್ದರು.
ಸಂಘದ ಇನ್ನುಳಿದ ಕಾರ್ಯಕರ್ತರು ಇದೇ ಸ್ಥಳದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಿದ್ದು ಮಂಗಳವಾರ 8 ನೇ ದಿನ ಪೂರೈಸಿ 9 ನೇ ದಿನಕ್ಕೆ ಕಾಲಿಡುತ್ತಿದೆ.
ಈ ಸಂದರ್ಭದಲ್ಲಿ ಅರವಿಂದ ಕುಲಕರ್ಣಿ ಮಾತನಾಡಿ, ಕಾಲುವೆಗಳಿಗೆ ನೀರು ಹರಿಸಲು ಸಕಾ೯ರ ಮೀನಾ ಮೇಷ ಮಾಡುತ್ತಿದೆ. ಆಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ನೀರಿಗಾಗಿ ನಡೆಯುತ್ತಿದಾಗ್ಯೂ ನೀರಾವರಿ ಇಲಾಖೆ ಅಧಿಕಾರಿಗಳು ಹಠಮಾರಿತನ ಧೋರಣೆ ತಾಳುತ್ತಿದ್ದರೆ ಅತ್ತ ಸಕಾ೯ರ ಮೊಂಡುತನ ಪ್ರದಶಿ೯ಸುತ್ತಿರುವುದು ಅರ್ಥವಾಗುತ್ತಿಲ್ಲ.ನಮ್ಮ ವ್ಯಯಕ್ತಿಕ ಸ್ವಾರ್ಥಕ್ಕಾಗಿ ಸತ್ಯಾಗ್ರಹ ನಡೆಸುತ್ತಿಲ್ಲ. ಬೇಸಿಗೆಯಲ್ಲಿ ಜನ,ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರೈತರ ಬದುಕಿಗಾಗಿ ಹೋರಾಟ ಕೈಗೊಂಡಿದ್ದೆವೆ. ರೈತ ಬದುಕಿದರೆ ಮಾತ್ರ ಎಲ್ಲವೂ ಸುರಕ್ಷಿತವಾಹಿರಲು ಸಾಧ್ಯ. ರೈತ ಕುಲವೇ ಸತ್ತು ಹೋದರೆ ಯಾರು ಉಸರಿಸಲ್ಲಿಕ್ಕೆವಾಗದು.ಇದನ್ನು ಅರ್ಥಮಾಡಿಕೊಂಡು ಕೂಡಲೇ ಕಾಲುವೆಗಳಿಹೆ ನೀರು ಬಿಡಬೇಕು ಎಂದರು.
ನೀರು ಯಾರಪ್ಪನ ಸತ್ವ ಅಲ್ಲ. ಅಧಿಕಾರಿಗಳು, ನೀರಾವರಿ ಮಂತ್ರಿಗಳು, ಮುಖ್ಯ ಮಂತ್ರಿ ಯಾರು ನೀರು ಸೃಷ್ಟಿಸಿಲ್ಲ.ನೀರು ನಮಗೆಲ್ಲ ಸೃಷ್ಟಿಯ ಕೊಡುಗೆ. ಭಗವಂತ ರೈತ ಕುಲಕ್ಕಾಗಿ,ಜನಸಾಮಾನ್ಯರ ಬಳಕೆಗಾಗಿ, ಜಲಚರಗಳ ಉಳವಿಗಾಗಿ ಭೂಮಿಗೆ ನೀರು ಕರುಣಿಸಿದ್ದಾನೆ. ಆದರೆ ಅಧಿಕಾರಿಗಳು ,ರಾಜಕಾರಣಿಗಳು ನೀರಿನ ಮೇಲೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇವರಿಗೆ ನಾನೇ ಮತ ನೀಡಿದ್ದು ಎಂಬುದನ್ನು ಮರೆತಿದ್ದಾರೆ. ನಾವು ಇಂಥವರಿಗೆ ಅಧಿಕಾರ ಕೊಟ್ಟ ತಪ್ಪಿಗೆ ನೀರಿಗಾಗಿ ಪರಿಪರಿತಪ್ಪಿಸುವಂತಾಗಿದೆ.ಜನಸಾಮಾನ್ಯರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ಹರಿಸಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಬಿಟ್ಟಿ ನೀರು ಕೇಳುತ್ತಿಲ್ಲ.ಭಿಕ್ಷೆ ಬೇಡುತ್ತಿಲ್ಲ. ನೀರಿನ ಮೇಲೆ ನಮ್ಮ ರೈತರ ಹಕ್ಕಿದೆ.ಅದಕ್ಕೆ ಕೇಳುತ್ತಿದ್ದೆವೆ. ಜಲಾಶಯ ನಿರ್ಮಾಣಕ್ಕಾಗಿ ರೈತರು ತಮ್ಮ ಸರ್ವಸ್ವನ್ನೇ ತ್ಯಾಗ ಧಾರಣೆ ಮಾಡಿದ್ದಾರೆ.ಲಕ್ಷಾಂತರ ಜಮೀನು, ಮನೆ,ಮಠ, ಗುಡಿ,ಗುಂಡಾರ ಹೀಗೆ ಎಲ್ಲವೂ ಕಳೆದುಕೊಂಡು ತ್ಯಾಗಮಯಿಗಳಾಗಿ ನಲುಗಿದ್ದಾರೆ. ಅದಕ್ಕೆ ನೀರು ಕೊಡಿ ಎನ್ನುತ್ತಿದ್ದೆವೆ. ಬಾಗಲಕೋಟ ಹಾಗು ವಿಜಯಪುರ ಅವಳಿ ಜಿಲ್ಲೆಯ ಜನತೆಗೆ,ರೈತರಿಗೆ ಆಡಳಿತಗಾರರು ಮೋಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಳೆದೆರಡು ದಿನದಿಂದ ಆಮರಣ ಉಪವಾಸ ಮಾಡುತ್ತಿದ್ದೇನೆ. ಏನಾದರೂ ಹೆಚ್ಚು ಕಡಿಮೆವಾದರೆ ಸಕಾ೯ರವೇ ನೇರ ಹೊಣೆ ಎಂದು ಎಚ್ತರಿಸಿದರು. ಕ್ಷೇತ್ರದ ಶಾಸಕರು ಸೌಜನ್ಯಕ್ಕಾದರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಬಹುದಿತ್ತು. ಎಲ್ಲಿ ನಾಪತ್ತೇ ಅಗಿದ್ದಾರೆ ಗೊತ್ತಿಲ್ಲ ಎಂದು ಕುಟಕಿದರು. ನೀರಿನ ವಿಷಯದಲ್ಲಿ ಎಲ್ಲರೂ ಗಪ್ಪ್ ಚುಪ್ಪ್ ಆಗಿದ್ದಾರೆ. ತುಟಿ ಬಿಚ್ಚುತ್ತಿಲ್ಲ. ಬರೀ ಕೇಸರಾಟದಲ್ಲಿ ತಲ್ಲಿನರಾಗಿದ್ದಾರೆ. ಆವಾಂತರಗಳನ್ನು ಸೃಷ್ಟಿಸುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಧಾವಂತದಲ್ಲದ್ದಾರೆ. ಆಜಳಿತ ವ್ಯವಸ್ಥೆ ,ವೈಖರಿ ನೋಡಿದರೆ ಆಡಳಿತದಾಹ ನೆತ್ತಿಗೆರಿ ಕುಳಿತಂತಿದೆ. ಅಧಿಕಾರ ಇಲ್ಲದಿದ್ದರೆ ಬದುಕು ನಶ್ವರ್ಯ. ಮುಂದೆ ಸಾಗಲು ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ಮೂಳಗಿದ್ದಾರೆ ಎಂದರು.
ಜಿಲ್ಲಾಡಳಿತ,ನೀರಾವರಿ ಅಧಿಕಾರಿಗಳು, ಸಚಿವರು ಇಲ್ಲಿನ ಸತ್ಯಾಗ್ರಹ ಗಂಭೀರ ಪರಿಗಣಿಸಿ ತಕ್ಷಣ ಸ್ಪಂದಿಸುವ ಮನಸ್ಸು ತೋರಬೇಕು. ಕಾಲುವೆಗಳಿಗೆ ನೀರು ಹರಿಸುವ ನಿರ್ಣಯ ತುತು೯ ತೆಗೆದುಕೊಳ್ಳಬೇಕು ಎಂದು ಅರವಿಂದ ಕುಲಕರ್ಣಿ ಮತ್ತೊಮ್ಮೆ ಮನವಿ ಮಾಡಿಕೊಂಡರು.
ಸದಾಶಿವ ಬರಟಗಿ, ಚನ್ನಬಸಪ್ಪ ಸಿಂಧೂರ, ಶೇಖಪ್ಪ ಸಜ್ಜನ, ಸಿದ್ಲಿಂಗ ಬಿರಾದಾರ, ಅಮರಯ್ಯ ಹಿರೇಮಠ, ಮಾಂತಯ್ಯ ಚಿಕ್ಕಮಠ, ಶಿವಪ್ಪ ಕಲಬುಗಿ೯, ಸೋಮಯ್ಯ ರಾಜೇಸಾಬ್ ವಾಲೀಕಾಕ, ಲಕ್ಷ್ಮಣ ಮನ್ನಿಹಾಳ, ಸಂತೋಷ ಪಾಟೀಲ, ಲೈಬಣ್ಣ ಮಾದರ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಲಾಟರಿಯಿಂದ ಕಾಂಗ್ರೆಸ್ ಬೆಂಬಲಿತರಿಗೆ ಒಲಿದು ಬಂದ ಕುರ್ಚಿ!

ಚಾಮರಾಜನಗರ – ತಾಲೂಕಿನ ಜ್ಯೋತಿಗೌಡನಪುರ ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರಿಗೆ ಲಾಟರಿ ಮೂಲಕ ಒಲಿದು ಬಂದಿದೆ.

ಶೀಘ್ರವಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾರಂಭಿಸಿಲು: ಮನವಿ

ಶಿರಹಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬೆಂಗಳೂರು ಗಲಭೆ ಪ್ರಕರಣ – ಮಾಜಿ ಮೇಯರ್ ಪತ್ತೆಗಾಗಿ ವಿಶೇಷ ತಂಡ ರಚನೆ!

ಬೆಂಗಳೂರು : ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್ ಅವರ ಪತ್ತೆಗಾಗಿ ಸಿಸಿಬಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.