ಬೆಂಗಳೂರು: ರೈತ ವಿರೋಧಿ @BSYBJP ಅವರೇ, ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ ಇರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ನಿಮಗೆ ಯಾವ ನೈತಿಕತೆ ಇದೆ? ನಿಮಗೆ ತಾಕತ್ ಇದ್ದರೆ ಮೊದಲು ವಿಧಾನಸಭೆಯನ್ನು ವಿಸರ್ಜಿಸಿ, ಇದೇ ವಿಷಯವನ್ನು ಮುಂದಿಟ್ಟು ಚುನಾವಣೆ ಎದುರಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳ ವಿರುದ್ಧ ಕರ್ನಾಟಕ ಬಂದ್ ಬೆಂಬಲಿಸಿ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಸಂಕಟದಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ರೈತರು ಬೀದಿಗೆ ಬರಲಾರರು ಎಂಬ ದುಷ್ಟ ಆಲೋಚನೆಯಿಂದ ಈ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿದ್ದೀರಲ್ಲಾ? ಕಣ್ಣು ಬಿಟ್ಟು ರಾಜ್ಯದ ಬೀದಿಗಳನ್ನು ನೋಡಿ, ರೈತರು ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಬಂದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ @BSYBJP ಅವರೇ, ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ರೈತರನ್ನು ಗುಂಡಿಟ್ಟು ಸಾಯಿಸಿದಿರಿ, ಈ ಬಾರಿ ಮುಖ್ಯಮಂತ್ರಿಯಾದಾಗ ಇಡೀ ರೈತ ಸಮುದಾಯವನ್ನೇ ಸಾಯಿಸಲು ಹೊರಟಿದ್ದೀರಿ? ನೊಂದ ರೈತರ ಕಣ್ಣೀರ ಶಾಪ ನಿಮಗೆ ತಟ್ಟದೆ ಇರದು ಎಂದಿದ್ದಾರೆ.

ಕಾವೇರಿ-ಕೃಷ್ಣ ನದಿನೀರು ಹಂಚಿಕೆಯಲ್ಲಿ ದ್ರೋಹ ಎಸಗಿದ್ದೀರಿ, ಮಹದಾಯಿ-ಮೇಕೆದಾಟು ಯೋಜನೆಗಳಲ್ಲಿ ಮೋಸ ಮಾಡಿದಿರಿ. ಬೀಜ-ರಸಗೊಬ್ಬರ ಪೂರೈಕೆ ಮಾಡದೆ ರೈತರನ್ನು ಗೋಳುಹೊಯ್ಕೊಂಡಿರಿ. @BSYBJP ಅವರೇ, ನಿಮ್ಮ ಬಿಜೆಪಿಗೆ ಯಾಕೆ ರೈತರ ಮೇಲೆ ಇಷ್ಟೊಂದು ದ್ವೇಷ? ಕರ್ನಾಟಕದ ಬಗ್ಗೆ ಯಾಕೆ ಸೇಡಿನ ಭಾವನೆ? ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ @BSYBJP ಅವರೇ, ನೀವು ರೈತ ಸಮುದಾಯದ ಎದುರು ಬೆತ್ತಲಾಗಿದ್ದೀರಿ, ನೀವು ಹೊದ್ದುಕೊಂಡಿರುವ ಯಾವ ಹಸಿರು ಶಾಲು ಕೂಡಾ ನಿಮ್ಮ ಮಾನ ಮುಚ್ಚಲಾರದು. ನೀವು ನಿಜವಾಗಿಯೂ ರೈತರ ಪರವಾಗಿದ್ದರೆ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರೈತರ ಜೊತೆ ನಿಂತುಕೊಳ್ಳಿ ಎಂದಿದ್ದಾರೆ.

ಮುಖ್ಯಮಂತ್ರಿ @BSYBJP ಅವರೇ,ದೇಶವನ್ನೇ ಕಾರ್ಪೋರೇಟ್ ಕುಳಗಳಿಗೆ ಮತ್ತು ರಿಯಲ್ ಎಸ್ಟೇಟ್ ಧಣಿಗಳಿಗೆ ಮಾರಾಟ ಮಾಡಲು ಹೊರಟಿರುವ ಮೋದಿಯವರ ತಾಳಕ್ಕೆ ನೀವು ಕುಣಿಯತೊಡಗಿದರೆ ವರ್ತಮಾನ ಮಾತ್ರವಲ್ಲ, ಇತಿಹಾಸವೂ ನಿಮ್ಮನ್ನು ಕ್ಷಮಿಸಲಾರದು. ಈಗಲೂ ಕಾಲ ಮಿಂಚಿಲ್ಲ, ಆತ್ಮಸಾಕ್ಷಿಗೆ ಕರೆಗೊಟ್ಟು ರೈತರ ಬೇಡಿಕೆ ಒಪ್ಪಿಕೊಳ್ಳಿ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಲಿಂ.ತೋಂಟದ ಸಿದ್ದಲಿಂಗ ಶ್ರೀ ಅಪರೂಪದ ಸಂತ ಇಂಥ ಪೂಜ್ಯರನ್ನು ನಾನೆಂದೂ ಕಾಣೆನು

ಉತ್ತರಪ್ರಭ ಸುದ್ದಿ ಗದಗ: ಅವರೊಬ್ಬ ಅಪ್ಪಟ ಕನ್ನಡಿಗರು. ಕರುನಾಡು,ದೇಶ ಕಂಡ ಅಪರೂಪದ ಮಹಾನ ಕಾವಿಧಾರಿ ಸಂತರು.…

ಹೋರಾಟದ ಹೆಸರಿನಲ್ಲಿ ಸ್ವಾರ್ಥತನ ಬೇಡ – ಸಂಸದೆ ಸುಮಲತಾ!

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ…

ಸ್ವಾತಂತ್ರ್ಯ ಹೋರಾಟಗಾರರ ಜೀವನ ಹಾಗೂ ಮೌಲ್ಯಗಳ ಕುರಿತು ಆನ್ಲೈನ್ ವೆಬಿನಾರ್

ಉತ್ತರಪ್ರಭ ಗದಗ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ “ಅಮೃತ ಮಹೋತ್ಸವದ”…

ರೋಣ: ಪತ್ರಕರ್ತ ಇಟಗಿ ನಿಧನ

ಗದಗ: ಜಿಲ್ಲೆಯ ರೋಣದ ಹಿರಿಯ ಪತ್ರಕರ್ತ ಎ.ಡಿ. ಇಟಗಿ(62) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅಸ್ವಸ್ಥರಾಗಿದ್ದ ಅವರಿಗೆ…