ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾರ್ಖಾನೆ ಸ್ಥಗಿತಗೊಂಡ ಸಂದರ್ಭದಲ್ಲಿ ಬಾಯಿ ಮುಚ್ಚಿಕೊಂಡು ಇದ್ದವರು ಈಗ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ತಮ್ಮ ಆವೇಶ ತೋರಿಸುತ್ತಿದ್ದಾರೆ. ಇದು ಅವರ ಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕನ್ನಡಿ. ಹೋರಾಟದ ನೆಪದಲ್ಲಿ ಕಾರ್ಖಾನೆ ಆರಂಭವಾಗದಂತೆ ನೋಡಿಕೊಳ್ಳುವುದೇ ಅವರ ಮೂಲ ಉದ್ಧೇಶ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭವಾಗದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳುತ್ತಿದ್ದಾರೆ. ಉಗ್ರ ಹೋರಾಟ ಎಂಬ ಮಾತನ್ನು ಹೇಳುವ ನೈತಿಕತೆ ಅವರಿಗಿಲ್ಲ. ಸದ್ಯ ಯಾವ ಚುನಾವಣೆ ಇಲ್ಲ. ಹೀಗಿದ್ದರೂ ಕಾರ್ಖಾನೆ ತೆರೆಯಲು ನೀವು ಬಿಡುತ್ತಿಲ್ಲ. ಖಾಸಗೀಕರಣ ಮಾಡಿ ಕಾರ್ಖಾನೆ ತೆರೆದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ಕೊಡುತ್ತಾರೆ. ನಿಮ್ಮದು ಉಗ್ರ ಹೋರಾಟವಲ್ಲ. ಸ್ವಾರ್ಥ ರಾಜಕಾರಣ ಎಂದರು.

ದ್ವಂದ್ವ ನಿಲುವಿನ ಹೋರಾಟದಿಂದ ಯಾರನ್ನೂ ಮೋಸಗೊಳಿಸುವುದಕ್ಕೆ ಸಾಧ್ಯವಿಲ್ಲ. ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು. ಮೈಶುಗರ್ ಕಾರ್ಖಾನೆ ಆರಂಭವಾಗದೆ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀವು ಮಾಡುವ ಅಡಚಣೆಯಿಂದ ಕಾರ್ಖಾನೆ ಈಗಲೂ ಆರಂಭಗೊಳ್ಳದೆ ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

You May Also Like

“ತಿಳಿಗೊಳ”ಅಭಿನಂದನ ಗ್ರಂಥದ ಲೋಕಾರ್ಪಣೆ ಹಾಗೂ ಗುರುವಂದನ ಕಾರ್ಯಕ್ರಮ”

ಉತ್ತರಪ್ರಭ ರಾಯಬಾಗ: ತಾಲ್ಲೂಕಿನ ಹಾರೂಗೇರಿಯ ಬಿ.ಆರ್. ದರೂರ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು, ಕನ್ನಡ ಪ್ರಾಧ್ಯಾಪಕರು,…

ಜ್ಞಾನಗಿರಿಯಲ್ಲಿ ಡಿ.5 ರಂದು ದಿವ್ಯ ದೀಫೋತ್ಸವ

ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದ ದಿವ್ಯ ಚೇತನ ಶಾಲಾ ಆವರಣದಲ್ಲಿ ಡಿ.5 ಶನಿವಾರ ಸಂಜೆ 2 ನೇ ವರ್ಷದ ದಿವ್ಯ ದೀಪೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ

ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿಗೆ ಎನ್.ಬಿ.ಎ ಮಾನ್ಯತೆ ದೊರೆತಿದೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಎನ್.ಬಿ.ಎ ಮಾನ್ಯತೆ ಪಡೆದ ಮೊದಲ ಕಾಲೆಜು ಎನ್ನುವ ಹೆಗ್ಗಳಿಗೆ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜ್ ಪಾತ್ರವಾಗಿದೆ.

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ: ದಲಿತ ಪರ ನಾನಾ ಸಂಘಟನೆಗಳಿಂದ ನಿಡಗುಂದಿಯಲ್ಲಿ ಭಾರೀ ಪ್ರತಿಭಟನೆ

ನಿಡಗುಂದಿ: ಸಂವಿಧಾನ ಕರ್ತೃ ಡಾ ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿ ಅಪಮಾನ ಮಾಡಿರುವ ರಾಯಚೂರ ಜಿಲ್ಲಾ…