ದುಬೈ : ಐಪಿಎಲ್ ನ 6ನೇ ಪಂದ್ಯದ ಸಮಯದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ ಅವರು ದಿಟ್ಟ ಬ್ಯಾಟ್ಸಮನ್ ಎಂಬುವುದನ್ನು ಸಾಬೀತು ಪಡಿಸಿದ್ದಾರೆ. ಶಾ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದಲೇ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್‌ಗಳ ಭರ್ಜರಿ ಜಯ ಗಳಿಸಿದೆ.

ಅವರ ಆ ರನ್ ಮಳೆಯಲ್ಲಿ 9 ಬೌಂಡರಿಗಳು ಮತ್ತು 1 ಸಿಕ್ಸರ್ ಸಿಡಿದಿದ್ದವು. ಪೃಥ್ವಿ ಶಾಗೆ ಕೇವಲ 20 ವರ್ಷ. 5 ಅರ್ಧ ಶತಕಗಳನ್ನು ದಾಖಲಿಸಿದ ದಾಖಲೆ ಕೂಡ ಶಾ ಹೆಸರಲ್ಲಿದೆ. 22ರ ಹರೆಯದ ಎಡಗೈ ಬ್ಯಾಟ್ಸಮನ್ ರಿಷಭ್ ಪಂತ್‌, ಐಪಿಎಲ್‌ನಲ್ಲಿ ಕಿರಿಯ ಬ್ಯಾಟ್ಸಮನ್ ಆಗಿದ್ದು, ಅತೀ ಹೆಚ್ಚು ಅರ್ಧ ಶತಕಗಳನ್ನು ದಾಖಲಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 21ರ ಹರೆಯಕ್ಕೆ ಕಾಲಿರಿಸುವ ಮುನ್ನ ಪಂತ್ ಒಟ್ಟಿಗೆ 9 ಅರ್ಧ ಶತಕಗಳನ್ನು ಬಾರಿಸಿದ್ದರು.

ಪೃಥ್ವಿ ಶಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. 20ರ ಹರೆಯದ ಶಾ ಡೆಲ್ಲಿ ಪರ 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಶಾಗೆ ಐಪಿಎಲ್ ಮುಗಿಯುವುದರ ಒಳಗೆ ಇನ್ನೂ ಒಂದಿಷ್ಟು ಅರ್ಧ ಶತಕಗಳನ್ನು ಬಾರಿಸಲು ಅವಕಾಶವಿದೆ. ರಾಜಸ್ಥಾನ್ ರಾಯಲ್ಸ್ ನಲ್ಲಿ ಆಡುತ್ತಿರುವ ಸಂಜು ಸ್ಯಾಮ್ಸನ್ 21ನೇ ವಯಸ್ಸಿಗೆ ಬರುವುದಕ್ಕೂ ಮೊದಲು ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಐಪಿಎಲ್‌ ನಲ್ಲಿ 2 ಶತಕಗಳನ್ನು ಬಾರಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಸದ್ಯ ಅವರಿಗೆ 25 ವರ್ಷ. 

ಶ್ರೇಯಸ್ ಐಯ್ಯರ್ ಕೂಡ ಉದಯೋನ್ಮುಖ ಆಟಗಾರ. ಸಣ್ಣ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. ಈಗ 25 ವರ್ಷ. ಕೋಲ್ಕತ್ತಾ ನೈಟ್‌ ರೈಡರ್ಸ್‌ ನ ಲ್ಲಿರುವ ಶುಬ್‌ಮನ್ ಗಿಲ್‌ 21ರ ಹರೆಯಕ್ಕೂ ಮುನ್ನ ಐಪಿಎಲ್‌ನಲ್ಲಿ 4 ಅರ್ಧ ಶತಕಗಳನ್ನು ಬಾರಿಸಿದ್ದರು. 

Leave a Reply

Your email address will not be published. Required fields are marked *

You May Also Like

ಹಸಿರು ಜೆರ್ಸಿ ತೊಟ್ಟಾಗ ಆರ್ ಸಿಬಿಯ ಸಾಧನೆ ಏನು?

ದುಬೈ : ಭಾರೀ ಆತ್ಮವಿಶ್ವಾಸದಲ್ಲಿ ಆರ್ ಸಿಬಿ ತಂಡ ಹಸಿರು ಜೆರ್ಸಿ ತೊಟ್ಟು, ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದಾರೆ.

ಫೆ. 12 ರಂದು ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ

ಮುಳಗುಂದ ಸಮೀಪದ ಹೊಸೂರ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಯಂಗ್ ಸ್ಟಾರ್ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನ ಇದೇ ಫೆ. 12 ರಂದು ಮಹಾಂತೇಶಗೌಡ ಗೌಡರ ಅವರ ಹೊಲದಲ್ಲಿ ಸಿದ್ದಗೊಳಿಸಿದ ಮೈದಾನದಲ್ಲಿ ಏರ್ಪಡಿಸಲಾಗಿದೆ. ಎಂದು ಸಮಿತಿ ಸದಸ್ಯ ಬಸವರಾಜ ಬಂಡಿವಡ್ಡರ ತಿಳಿಸಿದರು.

ಕ್ಯಾಪ್ಟನ್ ಕೂಲ್ ಗೆ ಕ್ರೀಕೆಟ್ ದಿಗ್ಗಜರ ಅಭಿನಂದನೆ

ಕ್ರೀಕೆಟ್ ನಲ್ಲಿ ಭಾರತದ ಸಾಧನೆಯನ್ನು ಹೆಚ್ಚಿಸಿದ ಕೀರ್ತಿ ಎಂ.ಎಸ್.ಧೋನಿ ಅವರಿಗೆ ಸಲ್ಲುತ್ತದೆ. ಇತ್ತಿಚೆಗಷ್ಟೆ ವೃತ್ತಿ ಜೀವನಕ್ಕೆ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದ ಧೋನಿ ನಡೆಯಿಂದ ಅಭಿಮಾನಿಗಳಿಗೆ ಬೇಸರ ಮೂಡಿತ್ತು. ಧೋನಿ ಕ್ರೀಡಾ ಸಾಧನೆ ಬಗ್ಗೆ ಬಿಸಿಸಿಐ ಮೆಚ್ಚುಗೆ ವ್ಯಕ್ತ ಪಡಿಸಿದೆ.

ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರ

2020ರ ಆರನೇ ಐಪಿಎಲ್ ಪಂದ್ಯದದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರಿಸಿತು. ಅವರ ಶತಕದ ಬಲದಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 97 ರನ್ ಗಳಿಂದ ಗೆದ್ದು ಬೀಗಿತು.