ಕ್ರೀಕೆಟ್ ನಲ್ಲಿ ಭಾರತದ ಸಾಧನೆಯನ್ನು ಹೆಚ್ಚಿಸಿದ ಕೀರ್ತಿ ಎಂ.ಎಸ್.ಧೋನಿ ಅವರಿಗೆ ಸಲ್ಲುತ್ತದೆ. ಇತ್ತಿಚೆಗಷ್ಟೆ ವೃತ್ತಿ ಜೀವನಕ್ಕೆ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದ ಧೋನಿ ನಡೆಯಿಂದ ಅಭಿಮಾನಿಗಳಿಗೆ ಬೇಸರ ಮೂಡಿತ್ತು. ಧೋನಿ ಕ್ರೀಡಾ ಸಾಧನೆ ಬಗ್ಗೆ ಬಿಸಿಸಿಐ ಮೆಚ್ಚುಗೆ ವ್ಯಕ್ತ ಪಡಿಸಿದೆ.
ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಗಷ್ಟ್ 15ರಂದು ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.
ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಧೋನಿ ಕಮ್ ಬ್ಯಾಕ್ ಮಾಡಬಹುದು ಎಂದು ಭಾವಿಸಿದ್ದ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮೀಯ ಸ್ನೇಹಿತ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾರೆ. ದೇಶಕ್ಕೆ ಎರಡು ವಿಶ್ವಕಪ್, ಒಂದು ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿರುವ ‘ಕ್ಯಾಪ್ಟನ್ ಕೂಲ್’ಗೆ ಕ್ರಿಕೆಟ್ ನ ದಿಗ್ಗಜರು, ಅಭಿಮಾನಿಗಳು ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಸದ್ಯ ಬಿಸಿಸಿಐ ಈ ನಾಯಕನಿಗಾಗಿ ವಿಶೇಷ ವಿಡಿಯೋ ಮಾಡಿದೆ. ಅಲ್ಲದೇ, ಇದನ್ನು ಅಧಿಕೃತವಾಗಿ ಟ್ವೀಟರ್ ನಲ್ಲಿ ಶೇರ್ ಮಾಡಿದೆ. ವೃತ್ತಿ ಜೀವನಕ್ಕೆ ಕೊನೆ ಹಾಡಿದ ಎಂಎಸ್ ಧೋನಿಗೆ, ಭಾರತ ತಂಡದ ಸದಸ್ಯರು ಅದ್ಭುತ ಕ್ಷಣಗಳನ್ನು ನೆನಪಿಸಿಕೊಂಡು ತನ್ನ ನಾಯಕನಿಗೆ ತುಂಬು ಹೃದಯದ ಗೌರವ ಸಲ್ಲಿಸಿದ್ದಾರೆ ಎಂದು ಬರೆದುಕೊಂಡಿದೆ.