ನವದೆಹಲಿ : ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ (82) ಇಂದ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.


ಹಿರಿಯ ನಾಯಕನ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್, ಸಿಎ ಬಿ.ಎಸ್. ಯಡಿಯೂರಪ್ಪ ಸೇರಿದಂತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿರುವ ಮೋದಿ, ಜಸ್ವಂತ್ ಸಿಂಗ್ ಅವರು ರಾಷ್ಟ್ರಕ್ಕಾಗಿ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದಾರೆ. ಮೊದಲು ಸೈನಿಕರಾಗಿದ್ದ ಅವರು ಆ ನಂತರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಿರ್ಣಾಯಕ ಖಾತೆಗಳನ್ನು ನಿರ್ವಹಿಸಿದ್ದರು. ಬಿಜೆಪಿ ಬಲವರ್ಧನೆಗೆ ಸಾಕಷ್ಟು ಕೆಲಸ ಮಾಡಿದ್ದರು. ಅವರ ನಿಧನ ಬೇಸರ ತಂದದಿದೆ. ಅಲ್ಲದೆ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.

ಮಾ.20ಕ್ಕೆ ನವೀನ್ ಮೃತದೇಹ ಆಗಮನ: ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿ…

ಪಾಕ್ ನ ಉಪಟಳ – ಯೋಧ ಹುತಾತ್ಮ!

ಶ್ರೀನಗರ : ಲಡಾಖ್ ನಲ್ಲಿ ಚೀನಾ ಸಂಘರ್ಷ ನಡೆಸುತ್ತಿದ್ದರೆ, ಇನ್ನೊಂದೆಡೆ ಪಾಕ್ ತನ್ನ ಉಪಟಳ ಮುಂದುವರೆಸಿದೆ. ಗಡಿ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನಾ ಯೋಧರು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿದೆ ಆತಂಕ!

ಬೆಂಗಳೂರು: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹಲವು ದೇಶಗಳಲ್ಲಂತೂ ಇದರ ನಾಗಾಲೋಟ…