ಅಂಕಗಳೇ ಎಲ್ಲವನ್ನೂ ನಿರ್ಧರಿಸುವುದಿಲ್ಲ ಎಂದು ಐಎಎಸ್  ಅಧಿಕಾರಿ ಮಾಡಿದ ಟ್ವೀಟ್ನಿಂದ ಸಾವಿರಾರು ಫೇಲಾದ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿದೆ.

ನವದೆಹಲಿ: ಸದ್ಯ ಐಎಎಸ್ ಅಧಿಕಾರಿಯಾಗಿರುವ ನಿತಿನ್ ಸಂಗ್ವಾನ್ ಮೊನ್ನೆ 12ನೆ ತರಗತಿ ಫಲಿತಾಂಶ ಬಂದಾಗ ತಮ್ಮ 12ನೆ ತರಗತಿ ಅಂಕಪಟ್ಟಿ ಹಾಕಿ, ‘ಜೀವನ ಬೋರ್ಡ್ ಫಲಿತಾಂಶಕ್ಕಿಂತ ವಿಶಾಲವಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ಯಾವ ಉದ್ದೇಶಕ್ಕೆ ಹೀಗೆ ಟ್ವೀಟ್ ಮಾಡಿದ್ದು ಎಂದು ಕೇಳಿದಾಗ, ‘ನನ್ನ ಪರಿಚಿತರನೇಕರು ತಮ್ಮ ಮಕ್ಕಳು ಕಡಿಮೆ ಸ್ಕೋರ್ ಮಾಡಿದ್ದಕ್ಕೆ ಬೇಸರ ಮತ್ತು ಒತ್ತಡಕ್ಕೆ ಒಳಗಾಗಿದ್ದರು. 12ನೆ ತರಗತಿ ಫಲಿತಾಂಶ ಬಂದಾಗ ನನ್ನ ಹಾಲತ್ ಇದಕ್ಕೂ ಕೆಟ್ಟದಾಗಿತ್ತು. ಅಂದು ಕೆಮಿಸ್ಟ್ರಿಯಲ್ಲಿ 24 ಪಡೆದ ನಾನು ಇಂದು ಐಎಎಸ್ ಅಧಿಕಾರಿ. ಇದು ಫೇಲ್ ಆದವರಿಗೆ, ಕಡಿಮೆ ಅಂಕ ಪಡೆದವರಿಗೆ ಧೈರ್ಯ ತರಲಿ ಎಂಬ ಕಾರಣಕ್ಕೆ ಆ ರೀತಿ ಟ್ವೀಟ್ ಮಾಡಿದ್ದೆ’ ಎಂದಿದ್ದಾರೆ.

ಅವರ ಟ್ವೀಟ್ ಸಾರಾಂಶ:

‘ನನ್ನ 12 ನೆ ತರಗತಿ ಪರೀಕ್ಷೆಯಲ್ಲಿ ನಾನು ಕೆಮಿಸ್ಟ್ರಿಯಲ್ಲಿ 70ಕ್ಕೆ ಕೇವಲ 24 ಪಡೆದಿದ್ದೆ. ಪಾಸ್ ಆಗಲು ಬೇಕಾದ ಕನಿಷ್ಠ ಅಂಕ 23ಕ್ಕಿಂತ ಒಂದು ಹೆಚ್ಚು ಮಾತ್ರ. ಆದರೆ ಜೀವನದಲ್ಲಿ ನಾನು ಏನಾಗಬೇಕು ಎಂದುಕೊಂಡಿದ್ದೇನೋ ಅದನ್ನು ಆ ಅಂಕ ನಿರ್ಧರಿಸಲಿಲ್ಲ.

·     ಅಂಕಗಳಿಗೆ ಸಂಬಂಧಿಸಿದಂತೆ ಮಕ್ಕಳ ಮೇಲೆ ಒತ್ತಡ ಹಾಕಿ ಅವರನ್ನು ಕುಂದಿಸಬೇಡಿ.

·     ಜೀವನ ಅಂಕಗಳಿಗಿಂತ ವಿಶಾಲವಾಗಿದೆ.

·     ಫಲಿತಾಂಶಗಳು ಆತ್ಮಾವಲೋಕನಕ್ಕೆ ದಾರಿ ಮಾಡಲಿ, ಟೀಕೆಗೆ ಅಲ್ಲ.’

ಅವರ ಈ ಟ್ವೀಟ್ ಸಾವಿರಾರು ಸಲ ರಿಟ್ವೀಟ್ ಆಗಿದೆ. ಫೇಲ್ ಆದ ಮತ್ತು ಕಡಿಮೆ ಅಂಕ ಪಡೆದ ಸಾವಿರಾರು ವಿದ್ಯಾರ್ಥಿಗಳು ಆತ್ಮಸ್ಥೈರ್ಯ ತುಂಬಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದ್ದಾರೆ.

Leave a Reply

Your email address will not be published.

You May Also Like

ಉಗ್ರರಿಗೆ ಚಿಕಿತ್ಸೆ ನೀಡಲು, ಶಸ್ತ್ರಾಸ್ತ್ರ ಪೂರೈಸುವುದಕ್ಕಾಗಿಯೇ ಈತ ಮಾಡಿದ್ದೇನು?

ಐಸಿಸ್ ನ ಉಗ್ರರಿಗೆ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಮಾಡಲು ರಹಸ್ಯವಾಗಿ ಸಂವಹನ ನಡೆಸುವುದಕ್ಕಾಗಿ ಪ್ರತ್ಯೇಕ ಆಪ್ ಗಳನ್ನು ನಗರ ಮೂಲದ ನೇತ್ರ ವೈದ್ಯನೊಬ್ಬ ಅಭಿವೃದ್ಧಿ ಪಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿನ ಬಹುತೇಕ ಸಿಬ್ಬಂದಿಗೆ ಕೊರೊನಾ!

ಮುಂಬಯಿ: ಇಲ್ಲಿಯ ಮಹಾನಗರ ಪಾಲಿಕೆಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯ ಸಾಯನ್‌ ತಿಲಕ್‌ ಆಸ್ಪತ್ರೆಯ 92 ಜನ ವೈದ್ಯರು ಹಾಗೂ ಏಳು ಜನ ತರಬೇತಿ ಪಡೆಯುತ್ತಿದ್ದ ವೈದ್ಯರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿಂದು 416 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 416 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8697…

ಪಶ್ಚಿಮ ಬಂಗಾಳದಲ್ಲಿ ಜುಲೈ 31ರ ವರೆಗೆ ಲಾಕ್ ಡೌನ್!

ಕೋಲ್ಕತ್ತಾ : ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಜುಲೈ…