ಬಳ್ಳಾರಿ : ದಿನದಿಂದ ದಿನಕ್ಕೆ ಜಿಂದಾಲ್ನಲಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯನ್ನು ಮೀರಿಸಿರುವ ಜಿಂದಾಲ್ನದಲ್ಲಿ ಕೊರೊನಾ ಶತಕ ಬಾರಿಸಿದೆ.
ರಾಜ್ಯದ ನಂಬರ್ ಒನ್ ಉಕ್ಕು ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಂದಾಲ್ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಬಳ್ಳಾರಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ 8 ಪ್ರಕರಣ ಜಿಂದಾಲ್ ನೌಕರರಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 181 ಸೋಂಕಿತರಲ್ಲಿ ಸಿಂಹಪಾಲು ಅಂದರೆ 103 ಪ್ರಕರಣ ಜಿಂದಾಲ್ಗೆಡ ಸೇರಿದೆ. ಅಂದರೆ ಜಿಂದಾಲ್ ಒಂದೇ ಶತಕ ಬಾರಿಸಿ ಮುಂದುವರಿಯುತ್ತಿದೆ.
ಹಾಲು ಹಾಕುತ್ತಿದ್ದ ವ್ಯಕ್ತಿಗೆ ಸೋಂಕು ದೃಢವಾಗುತ್ತಿದ್ದಂತೆ ನಗರದ ಜಿಲ್ಲಾ ಕೊರೊನಾ ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿದೆ. ಈತ ವಾಸವಾಗಿರುವ ತಿಮ್ಮಲಾಪುರ ಗ್ರಾಮದ ನಿವಾಸ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಲಾಗಿದೆ.
ಜಿಂದಾಲ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದ್ದು, ಜಿಂದಾಲ್ ಸಂಪೂರ್ಣ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ.

1 comment
Leave a Reply

Your email address will not be published.

You May Also Like

ಲಿಲ್ಲಿ ಆಗಲು ಸಜ್ಜಾಗಿರುವ ಕನ್ನಡದ ಬುಲ್ ಬುಲ್!

ಬೆಂಗಳೂರು: ಚಂದನವನದ ಬೆಡಗಿ, ಡಿಂಪಲ್ ರಾಣಿ ರಚಿತಾ ರಾಮ್ ಮತ್ತೊಂದು ಲುಕ್ ಗೆ ಸಜ್ಜಾಗಿದ್ದಾರೆ.ಈ ಬುಲ್…

ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಿಗೆ ಕೆಟಿಟಿಎಫ್ ನೋಂದಣಿ ಕಡ್ಡಾಯ

ಉತ್ತರಪ್ರಭ ಗದಗ: ಪ್ರವಾಸೋದ್ಯಮ ಇಲಾಖೆಯಿಂದ ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಕಾಯ್ದೆ-2015 ಜಾರಿಯಲ್ಲಿದ್ದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ…

ಭಟ್ಕಳದಲ್ಲಿ ಈಗ ಕೊರೊನಾದ್ದೇ ಆಟ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ದಿನ ಬರೋಬ್ಬರಿ 12 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದ ಕುಟುಂಬ ಸೋಂಕಿಗೆ ಬಲಿಯಾಗಿದ್ದು, ಇಡೀ ಜಿಲ್ಲೆಯ ಜನರೇ ಬೆಚ್ಚಿ ಬೀಳುವಂತೆ ಮಾಡಿದೆ.

ಅಧಿಕಾರಿಗಳ ಆತುರ: ನರೆಗಲ್ಲನಲ್ಲಿ ಅನಾಥವಾದ ಉದ್ಯಾನವನ..!

ಗದಗ ಜಿಲ್ಲೆಯ ನರೇಗಲ್ಲ ನಲ್ಲಿ ಅಧಿಕಾರಿಗಳ ಆತುರದ ನಿರ್ಧಾರದಿಂದ ಉದ್ಯಾನವನ ಇದ್ದು ಇಲ್ಲದಂತಾಗಿದೆ.