ಬೆಂಗಳೂರು : ರಾಜ್ಯದಲ್ಲಿ ಇಂದು ಮತ್ತೆ 8,811 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 5,417 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅಲ್ಲದೇ, ರಾಜ್ಯದಲ್ಲಿ ಇಂದು ಮಹಾಮಾರಿಗೆ 86 ಜನ ಬಲಿಯಾಗಿದ್ದಾರೆ. 832 ಜನ ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಮಾರಿಗೆ 8,503 ಜನ ರಾಜ್ಯದಲ್ಲಿ ಬಲಿಯಾದಂತಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,66,023ಕ್ಕೆ ಏರಿಕೆ ಕಂಡಿದೆ. ಇನ್ನೂ 1,01,782 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ, ಒಟ್ಟು 1,66,267 ಜನರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ 4 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂದು ಬೆಂಗಳೂರು ನಗರದಲ್ಲಿ 4,083 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 27 ಜನ ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿಯೇ ಸೋಂಕಿತರ ಸಂಖ್ಯೆ 2,16,630ಕ್ಕೆ ಏರಿಕೆ ಕಂಡಿದೆ.

ಇನ್ನುಳಿದಂತೆ ಬಾಗಲಕೋಟೆಯಲ್ಲಿ 147, ಬಳ್ಳಾರಿಯಲ್ಲಿ 462, ಬೆಳಗಾವಿಯಲ್ಲಿ 132, ಬೆಂಗಳೂರು ಗ್ರಾಮಾಂತರದಲ್ಲಿ 241, ಬೆಂಗಳೂರು ನಗರದಲ್ಲಿ 4,083, ಬೀದರ್ ನಲ್ಲಿ 56, ಚಾಮರಾಜನಗರದಲ್ಲಿ 63, ಚಿಕ್ಕಬಳ್ಳಾಪುರದಲ್ಲಿ 164, ಚಿಕ್ಕಮಗಳೂರಿನಲ್ಲಿ 109, ಚಿತ್ರದುರ್ಗದಲ್ಲಿ 70, ದಕ್ಷಿಣ ಕನ್ನಡದಲ್ಲಿ 420, ದಾವಣಗೆರೆಯಲ್ಲಿ 144, ಧಾರವಾಡದಲ್ಲಿ 232, ಗದಗದಲ್ಲಿ 44, ಹಾಸನದಲ್ಲಿ 239, ಹಾವೇರಿಯಲ್ಲಿ 111, ಕಲಬುರಗಿಯಲ್ಲಿ 249, ಕೊಡಗಿನಲ್ಲಿ 79, ಕೋಲಾರದಲ್ಲಿ 165, ಕೊಪ್ಪಳದಲ್ಲಿ 352, ಮಂಡ್ಯದಲ್ಲಿ 255, ಮೈಸೂರಿನಲ್ಲಿ 73, ರಾಯಚೂರಿನಲ್ಲಿ 92, ರಾಮನಗರದಲ್ಲಿ 73, ಶಿವಮೊಗ್ಗದಲ್ಲಿ 254, ತುಮಕೂರಿನಲ್ಲಿ 141, ಉಡುಪಿಯಲ್ಲಿ 57, ಉತ್ತರ ಕನ್ನಡದಲ್ಲಿ 104, ವಿಜಯಪುರದಲ್ಲಿ 67 ಮತ್ತು ಯಾದಗಿರಿಯಲ್ಲಿ 133 ಜನರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಪಾನ ನಿಷೇಧ ಒಂದು ವಿಶ್ಲೇಷಣೆ

ಈಗ ನಲವತ್ತು ದಿವಸದಿಂದ ಬಂದ್ ಆಗಿದ್ದ ಮದ್ಯ ಮಾರಾಟ ಈಗ ಪುನರಾರಂಭವಾಗಿದೆ. ಈಗ ಕೆಲವರು ರಾಜಕೀಯ, ಕೆಲವರು ಸಾಮಾಜಿಕ ಕಳಕಳಿಯಿಂದ ಮತ್ತೆ ಕೆಲವರು ಸುಮ್ಮನೆ ಪ್ರಚಾರದ ಕಾರಣ ಪಾನ ನಿಷೇಧ ಮಾಡಿರಿ ಎಂದು ಸರಕಾರಕ್ಕೆ ಹೇಳುತ್ತಿದ್ದಾರೆ. ಈ ಬಗ್ಗೆ ಧಾರವಾಡದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಎಚ್.ಮಿಟ್ಟಲಕೊಡ ಅವರ ವಿಶ್ಲೇಷಣೆ ಇಲ್ಲಿದೆ…

ತಿಮ್ಮಾಪೂರ : ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್.ನಾರಾಯಣರಡ್ಡಿ ಬಣದ ಸಂಘಕ್ಕೆ ತಾಲ್ಲೂಕಿನ ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಆನ್ ಲೈನ್ ತರಗತಿ ಹಾಜರಿಗೆ ವೈಫಲ್ಯ: ಆತ್ಮಹತ್ಯೆ ದಾರಿ ಹಿಡಿದ ವಿದ್ಯಾರ್ಥಿನಿ

9ನೇ ತರಗತಿ ವಿದ್ಯಾರ್ಥಿನಿ ಮಲಪ್ಪುರಂ ಜಿಲ್ಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇರುವ ಕಾರಣಕ್ಕೆ ತೀವ್ರವಾಗಿ ತಳಮಳಕ್ಕೀಡಾಗಿ ಇಂತಹ ಕೃತ್ಯಕ್ಕೆ ಶರಣಾಗಿದ್ದಾಳೆ ಎಂದಿದ್ದಾರೆ. ಇವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.

ಗದಗ: ಜಿಮ್ಸ್ ನಲ್ಲಿ ರೋಗಿ ಆತ್ಮಹತ್ಯೆ..!

ಲಿವರ್ ವೈಫಲ್ಯದಿಂದ ಬಳಲುತ್ತಿರುವ ರೋಗಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.