ಗದಗ: ಲಿವರ್ ವೈಫಲ್ಯದಿಂದ ಬಳಲುತ್ತಿರುವ ರೋಗಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. 34 ವರ್ಷದ ಗದಗ ನಿವಾಸಿ ರಾಘು ಗೋಕಾಕ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ರಾಘು ಕೆಲವು ವರ್ಷಗಳಿಂದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ 15 ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಘು ಇಂದು ನೇಣಿಗೆ ಶರಣಾಗಿದ್ದಾನೆ. ಗ್ರಾಮೀಣ ಠಾಣೆ ಪಿ.ಎಸ್.ಐ ಮಲ್ಲಿಕಾರ್ಜುನ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

Leave a Reply

Your email address will not be published. Required fields are marked *

You May Also Like

ಸ್ಮಶಾನವಿದೆ ಆದರೆ ಶವ ಸಂಸ್ಕಾರ..?: ಪಟ್ಟಣ ಪಂಚಾಯತಿ ಮುಂದೆ ಶವ ಇಟ್ಟು ಪ್ರತಿಭಟನೆ!

ಅಂತ್ಯಕ್ರಿಯೇಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಹಾಗೂ ಕೆಸರು ಗದ್ದೆಯಂತಾದ ರಸ್ತೆಗಳಿಂದ ಶವಸಂಸ್ಕಾರಕ್ಕೆ ಜನರು ಪರದಾಡುವಂತಾಗಿದ್ದು, ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತಿ ಗಮನ ಹರಿಸದೇ ಇರುವ ಕ್ರಮ ಖಂಡಿಸಿ ಇಂದು ನರೇಗಲ್ ಪಟ್ಟಣ ಪಂಚಾಯತಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ನರೇಗಲ್ಲನಲ್ಲಿ ನಡೆಯಿತು.

ಭಾರತ ಸೈನಿಕರ ಮೇಲೆ ನಿಗಾ: ಪಾಕ್ ಕುತಂತ್ರ ಬುದ್ದಿ

ಭಾರತದ ಸೈನಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಾಕ್ ಕುತಂತ್ರ ಬುದ್ಧಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಆಮಿಷದ ಆಡಿಯೋ, ಪೊಲೀಸ್, ಕೋರ್ಟ್. ರೆಸಾರ್ಟ್ : ರಾಡಿಯೆದ್ದಿರುವ ರಾಜಸ್ತಾನ ರಾಜಕೀಯ

ಬರುವ ಮಂಗಳವಾರ ಸಾಯಂಕಾಲ 5.30ರವರೆಗೂ ಅರ್ಜಿದಾರರ (ಸಚಿನ್ ಪೈಲಟ್ ಬಣದ ಶಾಸಕರು) ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ತಾನ ಹೈಕೋರ್ಟ್ ವಿಭಾಗೀಯ ಪೀಠ ವಿಧಾನಸಭೆಯ ಸ್ಪೀಕರ್ ಗೆ ಸೂಚಿಸಿದೆ.

ಚರಂಡಿ ಹೂಳು ಎತ್ತಿಸಿ ಸ್ವಚ್ಛತೆ : ಗ್ರಾ.ಪಂ ಸದಸ್ಯನ ಕಾರ್ಯಕ್ಕೆ ಪ್ರಶಂಸೆ

ಕಲ್ಲೂರ ಗ್ರಾಮದ 2ನೇ ವಾರ್ಡಿನ ಯಳವತ್ತಿ ರಸ್ತೆಯ ಚರಂಡಿಯಲ್ಲಿ ಸುಮಾರು ವರ್ಷಗಳಿಂದ ತುಂಬಿಕೊಂಡಿದ್ದ ಹೂಳು ಎತ್ತಿಸಿ ಸ್ವಚ್ಛತೆ ಕೈಗೊಂಡ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ರಾಮರಡ್ಡಿ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.