ನವದೆಹಲಿ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗವಾಸ್ಕರ್ ಕಾಮೆಂಟ್‌ ಗೆ ಅನುಷ್ಕಾ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ಪಂದ್ಯದಲ್ಲಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಎರಡು ಬಾರಿ ಕ್ಯಾಚ್ ಡ್ರಾಪ್ ಮಾಡಿದ್ದರು. ಅಲ್ಲದೇ, ಕಳಪೆ ಬ್ಯಾಟಿಂಗ್ ಮಾಡಿದ್ದರು. ಕೊಹ್ಲಿ ಅವರು ಕೇವಲ 1 ರನ್ ಗೆ ಔಟ್ ಆದರು. ಆ ಸಂದರ್ಭದಲ್ಲಿ ಅವರನ್ನು ಟೀಕಿಸುವ ಭರದಲ್ಲಿ ಗವಾಸ್ಕರ್, Inhone lockdown me to bas Anushka ki gendon ki practice ki hai (ಲಾಕ್‌ಡೌನ್‌ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.


ಸದ್ಯ ಅನುಷ್ಕಾ ಶರ್ಮಾ ಅವರು, ಮಿಸ್ಟರ್ ಗವಾಸ್ಕರ್. ನಿಮ್ಮ ಸಂದೇಶ ಅಸಹ್ಯಕರವಾಗಿದೆ. ಗಂಡನ ಆಟಕ್ಕೆ ಹೆಂಡತಿಯನ್ನು ದೂಷಿಸಬೇಕೆನ್ನುವ ಆಲೋಚನೆ ನಿಮ್ಮಲ್ಲಿ ಬಂದಿದ್ದೇಕೆ? ಇದನ್ನು ನೀವು ವಿವರಿಸಬೇಕು. ಕಳೆದ ಕೆಲವಾರು ವರ್ಷಗಳಿಂದ ನೀವು ಎಲ್ಲಾ ಕ್ರಿಕೆಟರ್‌ಗಳ ವೈಯಕ್ತಿಕ ಬದುಕನ್ನು ಗೌರವಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಕಾಮೆಂಟರಿ ವೇಳೆ ನನಗೂ ಮತ್ತು ನಮಗೆ ಗೌರವ ಕೊಡಬೇಕು ಎಂದು ನಿಮಗೆ ಅನ್ನಿಸಲಿಲ್ಲವೆ? ಎಂದು ಬೇಸರದಿಂದ ಪ್ರಶ್ನೆ ಮಾಡಿದ್ದಾರೆ.

1 comment
Leave a Reply

Your email address will not be published. Required fields are marked *

You May Also Like

ಗದಗ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮುತ್ತುರಾಜ್ ಶಿರಹಟ್ಟಿ ಹಾಗೂ ಮಹಮ್ಮದ್ ಹುಜೇರ್

ಉತ್ತರಪ್ರಭಗದಗ: ಇಂದು ಜಿಲ್ಲೆಯಾದ್ಯಂತ ಶಟಲ ಬ್ಯಾಡ್ಮಿಂಟನ್ ಸ್ಪರ್ಧೆಯು ಕೆ.ಎಚ್.ಪಾಟೀಲ್ ಒಳಾಂಗಣ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿತ್ತು ಶಟಲ್ ಬ್ಯಾಡ್ಮಿಂಟನ…

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು ?

ನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ ಸೃಷ್ಟಿಸಿದರೆ…

ಡ್ಯಾರೆನ್ ಜನಾಂಗೀಯ ನಿಂದನೆಗೆ ಒಳಗಾಗಿದ್ದು ಸತ್ಯವೇ?

ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್…

ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿದ ಪ್ರೀತಿ ತಂಡ!

ಅಬುಧಾಬಿ : ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಗೆ ಮತ್ತೊಮ್ಮೆ ಅದೃಷ್ಟ ಕೈ ಕೊಟ್ಟಿದೆ.