ನವದೆಹಲಿ : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗವಾಸ್ಕರ್ ಕಾಮೆಂಟ್ ಗೆ ಅನುಷ್ಕಾ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಪಂದ್ಯದಲ್ಲಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಎರಡು ಬಾರಿ ಕ್ಯಾಚ್ ಡ್ರಾಪ್ ಮಾಡಿದ್ದರು. ಅಲ್ಲದೇ, ಕಳಪೆ ಬ್ಯಾಟಿಂಗ್ ಮಾಡಿದ್ದರು. ಕೊಹ್ಲಿ ಅವರು ಕೇವಲ 1 ರನ್ ಗೆ ಔಟ್ ಆದರು. ಆ ಸಂದರ್ಭದಲ್ಲಿ ಅವರನ್ನು ಟೀಕಿಸುವ ಭರದಲ್ಲಿ ಗವಾಸ್ಕರ್, Inhone lockdown me to bas Anushka ki gendon ki practice ki hai (ಲಾಕ್‌ಡೌನ್ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಸದ್ಯ ಅನುಷ್ಕಾ ಶರ್ಮಾ ಅವರು, ಮಿಸ್ಟರ್ ಗವಾಸ್ಕರ್. ನಿಮ್ಮ ಸಂದೇಶ ಅಸಹ್ಯಕರವಾಗಿದೆ. ಗಂಡನ ಆಟಕ್ಕೆ ಹೆಂಡತಿಯನ್ನು ದೂಷಿಸಬೇಕೆನ್ನುವ ಆಲೋಚನೆ ನಿಮ್ಮಲ್ಲಿ ಬಂದಿದ್ದೇಕೆ? ಇದನ್ನು ನೀವು ವಿವರಿಸಬೇಕು. ಕಳೆದ ಕೆಲವಾರು ವರ್ಷಗಳಿಂದ ನೀವು ಎಲ್ಲಾ ಕ್ರಿಕೆಟರ್‌ಗಳ ವೈಯಕ್ತಿಕ ಬದುಕನ್ನು ಗೌರವಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಕಾಮೆಂಟರಿ ವೇಳೆ ನನಗೂ ಮತ್ತು ನಮಗೆ ಗೌರವ ಕೊಡಬೇಕು ಎಂದು ನಿಮಗೆ ಅನ್ನಿಸಲಿಲ್ಲವೆ? ಎಂದು ಬೇಸರದಿಂದ ಪ್ರಶ್ನೆ ಮಾಡಿದ್ದಾರೆ.
1 comment
ok