ನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ ಸೃಷ್ಟಿಸಿದರೆ ಇನ್ನೊಂದೆಡೆ ಮನೆ ಕಳ್ಳತನ,ಕಿಸೆ ಕಳ್ಳತನ,ಬೈಕ್ ಕಳ್ಳತನ ಸೇರಿದಂತೆ ಯಾಮಾರಿಸಿ ದೋಚುವ ಅಪರಾಧ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಈಗ ಆಡು,ಮೇಕೆಗಳ ಮೇಲೆ ಕಳ್ಳಕಾಕರ ಕಣ್ಣುಗಳು ನೆಟ್ಚಿವೆ. ಮೂಕ ಪ್ರಾಣಿಗಳನ್ನು ಸಹ ಕಳ್ಳ ಪೋಕರು ಬಿಡುತ್ತಿಲ್ಲ. ಇಂಥ ಮೂಕ ಜೀವಗಳನ್ನು ಹುಲ್ಲು,ಮೇವು ಆಸೆ ತೋರಿಸಿ ಎಗರಿಸುತ್ತಿದ್ದಾರೆ. ದೋಚುವ ಕಲೆ ಕರಗತಿ ಮಾಡಿಕೊಂಡೇ ಕಳ್ಳತನದ ಫೀಲ್ಡಿಗೆ ಇಳಿದಿರುವಂತಿದೆ ಈ ಪಕ್ಕಾ ಖದೀಮ ಕಳ್ಳರು ! ಕಳ್ಳತನದ ಕಾಯಕ ಚೊಕ್ಕಾಗಿ,ನಿಟಾಗಿ ಶುರು ಹಚ್ಚಿಕೊಂಡಿದ್ದಾರೆ. ಆಡುಗಳ ಕಳ್ಳತನ ಆರಂಭಿಸಿರುವ ಪರಿ ಇಲ್ಲೊಮ್ಮೆ ನೋಡಿ !

ಆಡು ಕಳೆದುಕೊಂಡವರ ಗೋಳು ಚಚೆ೯..

ನಿಡಗುಂದಿ ಪಟ್ಟಣದ ಹೊರವಲಯದ ಕಮದಾಳ ಪುನರ್ವಸತಿ ಕೇಂದ್ರದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದು ಆಡು ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ. ಯಾರಿಗೂ ಗೊತ್ತಾಗದಂತೆ ಎರಡು ಆಡುಗಳನ್ನು ಕಳುವು ಮಾಡಿ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.
ಕಮದಾಳದ ಮುದ್ದಪ್ಪ ಹತಾರ ಅವರಿಗೆ ಸೇರಿದ ಸುಮಾರು 18 ಸಾವಿರ ರೂ ಮೌಲ್ಯದ ಎರಡು ಆಡುಗಳನ್ನು ದುಷ್ಟ ಕಿರಾತಕ ಖದೀಮರು ಕಳುವು ಮಾಡಿದ್ದಾರೆ.
ಸ್ಕಾರ್ಪಿಯೋ ವಾಹನದಲ್ಲಿ ಬಂದ ಆ ಕಳ್ಳರು, ಮನೆಯ ಹೊರಗಡೆ ನಿಂತಿದ್ದ ಆಡಿಗೆ ಸ್ವಲ್ಪ ಹುಲ್ಲು, ಮೇವು ಹಾಕಿದ್ದಾರೆ. ತಿನ್ನುವ ಆಸೆಯಿಂದ ವಾಹನದ ಕಡೆ ಆಡುಗಳು ಬಂದಾಗ ವಾಹನದಲ್ಲಿದ್ದ ಮಹಿಳೆಯೊಬ್ಬಳು ಎರಡು ಆಡುಗಳನ್ನು ಸ್ಕಾರ್ಪಿಯೋ ವಾಹನದ ಹಿಂಬದಿಯಲ್ಲಿ ಎಳೆದು ಹಾಕಿಕೊಂಡಳು ಆ ಚಾಲಾಕಿ ಮಹಿಳೆ ಎಂದು ದೂರದಿಂದ ನೋಡುತ್ತಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಕಾರ್ಪಿಯೋ ವಾಹನದ ಹಿಂಬದಿ ಸೀಟು ತೆಗೆಯಲಾಗಿತ್ತು ಎನ್ನಲಾಗಿದೆ.
ಕಳ್ಳತನ ಮಾಡಿದ ಬಗ್ಗೆ ಗಮನಕ್ಕೆ ಬರುವ ವೇಳೆಯಲ್ಲಿ ವಾಹನ ಪರಾರಿಯಾಗಿತ್ತು.
ಕಳೆದ ವಾರ ಕಮದಾಳದ ಬೇರೆಯವರ ಮೂರು ಆಡುಗಳನ್ನು ಕಳವು ಮಾಡಲಾಗಿತ್ತು. ಆ ಘಟನೆ ಮರೆಮಾಚುವ ಮುನ್ನವೇ ಮತ್ತೇ ಹಾಡುಹಗಲೇ ಕಳ್ಳತನವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ನಿಡಗುಂದಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ನಾನಾ ಕಡೆ ಅಳವಡಿಸಿದ ಸಿಸಿ ಕ್ಯಾಮರಾ ಪರಿಶೀಲಿಸಿ ವಾಹನದ ಮಾಲೀಕರನ್ನು ಪತ್ತೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮೊಬೈಲ್ ಕಳ್ಳರ ಹಾವಳಿಯೂ ಹೆಚ್ಚು ! ಈ ಭಾಗದಲ್ಲಿ ಮೊಬೈಲ್‌ ಗಳ್ಳರ ಹಾವಳಿ ವಿಪರೀತವಾಗಿದೆ. ನಿಡಗುಂದಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಹತ್ತುವಾಗ ಅರಿವಿಗೆ ಬಾರದಂತೆ ಖದೀಮರು ಚಾಣಾಕ್ಷತನದಿಂದ ಕ್ಷಣಾರ್ಧದಲ್ಲಿ ಮೊಬೈಲ್ ಕದಿಯುತ್ತಾರೆ. ಅಪ್ರಾಪ್ತ ಯುವಕರೊಂದು ತಂಡವೇ ಇಂಥ ಕೃತ್ಯ ಎಸುಗುವಲ್ಲಿ ನಿಸ್ಸಿಮವಾಗಿದೆ ಎಂದು ಸಾರ್ವಜನಿಕ ಪ್ರಯಾಣಿಕರು ದೂರಿ ಗೋಳು ತೋಡಿಕೊಳ್ಳುತ್ತಾರೆ. ನಿಡಗುಂದಿ ಹಾಗು ಆಲಮಟ್ಟಿ ಸಂತೆ ಮಾರುಕಟ್ಟೆಯಲ್ಲಿ, ಕಾಯಿಪಲ್ಯೆ ಸಂತೆ ದಿನವಂತೂ ಕಳ್ಳರ ಕೈಚಳಕಕ್ಕೆ ಸಂತೆಗೆ ಬರುವ ಜನತೆಯ ಕಿಸೆಯಲ್ಲಿನ ಅದೆಷ್ಟೋ ಮೊಬೈಲ್ ಗಳು ಮಂಗಮಾಯವಾಗಿವೆ. ಈ ಬಗ್ಗೆ ದೂರುಗಳು ವ್ಯಾಪಕ ಕೇಳಿಬಂದಿವೆ.
ವದಂತಿ ಜೋರು ! ಜಿಲ್ಲೆಯಲ್ಲಿಗ ಚಿಕ್ಕ ಮಕ್ಕಳ ಕಿಡ್ನ್ಯಾಪ್ ನಡೆಯುತ್ತಿದೆನ್ನಲಾದ ವದಂತಿಗಳು ಹರಡುತ್ತಿವೆ. ಈ ಬಗ್ಗೆ ಅಲ್ಲಲ್ಲಿ ಚಚೆ೯,ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಕೆಲ ಪಾಲಕ,ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಪುಟ್ಟ ಮಕ್ಕಳನ್ನು ಮನೆಯಿಂದಾಚೆ ಎಲ್ಲೂ ಕಳಿಸಬೇಡಿ.ಮಕ್ಕಳನ್ನು ಅಪಹರಿಸುವರು ಬಂದಿದ್ದಾರೆನ್ನಲಾದ ಚಚೆ೯ಗಳು ಕಾಡ್ಗಿಚ್ಚಿನಂತೆ ಹರಿದಾಡುತ್ತಿವೆ. ಓಣಿ,ಬೀದಿಗಳಲ್ಲಿನ ಜನತೆ ತಮ್ಮ ತಮ್ಮಲ್ಲಿ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತಲ್ಲಿದೆ. ಯಾವುದಕ್ಕೂ ಜನ ಸ್ವಯಂ ಹುಷಾರದಿಂದಿರಬೇಕು ಎಂಬುದೇ ಪ್ರಜ್ಞಾವಂತರ ಅಂಬೋಣ.

Leave a Reply

Your email address will not be published.

You May Also Like

ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.

ಕ್ರಿಕೆಟ್ ರೂಲ್ಸ್ ಚೇಂಜ್ ಮಾಡಿದ ಕೋರೊನಾ!: ಬಾಲ್ ಗೆ ಉಗುಳು ಹಚ್ಚಿ ತಿಕ್ಕಂಗಿಲ್ಲ! ವಿಕೆಟ್ ಬಿದ್ದಾಗ ತಬ್ಬಂಗಿಲ್ಲ!

ಕೋರೊನಾ ಕಾಟದಿಂದ ಹತ್ತಾರು ರೂಲ್ಸ್ ಜಾರಿಗೆ ಬಂದಿವೆ. ಸದ್ಯ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ…

ವಿವಾದ ಮೈಮೇಲೆ ಎಳೆದುಕೊಂಡ ಇಂಗ್ಲೆಂಡ್ ಆಟಗಾರ

ಮ್ಯಾಂಚೆಸ್ಟರ್ : ಕೊರೊನಾ ಅಬ್ಬರದ ಮಧ್ಯೆಯೂ ಇಂಗ್ಲೆಂಡ್ನರಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಆರಂಭದಲ್ಲಿಯೇ ಕಳಂಕವೊಂದು ಇದಕ್ಕೆ ಮೆತ್ತಿಕೊಂಡಿದೆ.

ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿದ್ದು. ಪ್ರತಿಷ್ಠಿತ ಬಹುರಾಷ್ಟಿಯ…