ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಸಮ್ಮಿ ನೀಡಿರುವ ಹೇಳಿಕೆಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರರು ನಿರಾಕರಿಸಿದ್ದಾರೆ.

ಡ್ಯಾರೆನ್ ಸಮ್ಮಿ ಆಡುತ್ತಿದ್ದ ವೇಳೆ ಹೈದರಾಬದ್ ತಂಡದಲ್ಲಿದ್ದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್, ಆಲ್ ರೌಂಡರ್ ಇರ್ಫಾನ್ ಪಠಾಣ್ ಮತ್ತು ಬ್ಯಾಟ್ಸಮನ್ ಆಗಿದ್ದ ವೇಣುಗೋಪಾಲ್ ಈ ಮಾತುಗಳನ್ನು ಅಲ್ಲಗಳೆದಿದ್ದಾರೆ. ಅದು ಮಾತ್ರವಲ್ಲ, ಡ್ಯಾರೆನ್ ಸಮ್ಮಿ ವಿರುದ್ಧ ಅಂತಹ ಟೀಕೆಗಳನ್ನು ನಾವು ಯಾವತ್ತೂ ಕೇಳಿಲ್ಲ ಎಂದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾಗ ನನ್ನನ್ನು ಮತ್ತು ಶ್ರೀಲಂಕಾದ ತಿಸ್ಸರಾ ಪೆರರಾ ಅವರನ್ನು ಕಲು ಎಂದು ಕರೆಯುತ್ತಿದ್ದರು. ಮೊದಲು ಅರ್ಥವಾಗಲಿಲ್ಲ. ನಮ್ಮನ್ನು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಖುಷಿ ಪಟ್ಟಿದ್ದೆ. ಆದರೆ ಈಗ ಅದರ ಅರ್ಥ ಗೊತ್ತಾಗಿದೆ ಎಂದು ಡ್ಯಾರೆನ್ ಹೇಳಿದ್ದಾರೆ.

Leave a Reply

Your email address will not be published.

You May Also Like

ಅಂಬ್ಯೂಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಣೆ..!

ಶಿವಮೊಗ್ಗ: ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ದುರುಪಯೋಗಿಸಿಕೊಂಡು ಜಿಂಕೆ ಮಾಂಸ ಸಾಗಾಟ…

ಕಂದಮ್ಮಗಳಿಗೂ ಕೋವಿಡ್ ಕಾಟ.!: ಗದಗ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ..!

ಗದಗ: ವಿಕೆಂಡ್ ಗದಗ ಜಿಲ್ಲೆಯ ಜನರ ನಿದ್ದೆ ಕದ್ದಂತಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ…

ಪಿಎಂ ಕೇರ್ಸ್ ಯಾರೊಬ್ಬರ ಮನೆಯ ಆಸ್ತಿಯಲ್ಲ: ಸಿದ್ದರಾಮಯ್ಯ

ಬೆಂಗಳೂರು: ದೇಶದ ಜನರ ದೇಣಿಗೆಯ ಪಿಎಂ ಕೇರ್ಸ್ ಫಂಡ್ (PMCaresFund) ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೆ ಇದೆ. ಅದನ್ನೇ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾಗಾಂಧಿಯವರು ಹೇಳಿದ್ದಾರೆ ತಪ್ಪೇನಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿಂದು 120 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 120 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 6041 ಕ್ಕೆ ಏರಿಕೆಯಾದಂತಾಗಿದೆ.