ಅಬುಧಾಬಿ : ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಗೆ ಮತ್ತೊಮ್ಮೆ ಅದೃಷ್ಟ ಕೈ ಕೊಟ್ಟಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಪಂಜಾಬ್ ರೋಚಕವಾಗಿ ಸೋಲುಂಡಿದೆ. ಟಾಸ್ ಗೆದ್ದು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಆಟದೊಂದಿಗೆ 20 ಓವರ್ ಗಳಲ್ಲಿ 164 ರನ್ ಬಾರಿಸಿತ್ತು. ಇದನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಇನ್ನೇನು ಪಂಜಾಬ್ ಗೆದ್ದೇ ಬಿಟ್ಟಿತು ಎನ್ನುವಷ್ಟರಲ್ಲಿಯೇ ಮತ್ತೊಮ್ಮೆ ಕೊನೆಯ ಘಳಿಗೆಯಲ್ಲಿ ಸೋಲುಂಡಿತು.
ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್ ಡಳ ಜೊತೆಯಾಟ ಆಡಿದ್ದರು. ಆದರೆ ಕೊನೆಯ ಮೂರು ಓವರ್ ನಲ್ಲಿ ರನ್ ಕಲೆಹಾಕಲು ಎಡವಿದ ಪಂಜಾಬ್ ಕೇವಲ ಎರಡು ರನ್ ಅಂತರದಲ್ಲಿ ಸೋಲು ಕಂಡಿತು.
ಇಷ್ಟೊಂದು ಉತ್ತಮ ಆರಂಭ ಪಡೆದರೂ ಕೊನೆಯ ಎರಡು ಓವರ್ ಗಳಲ್ಲಿ ಸೋಲು ಕಂಡಿತು. 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಅವರು ಆ ಓವರ್ ನಲ್ಲಿ ಕೇವಲ ಎರಡು ರನ್ ಕೊಟ್ಟು ಒಂದು ವಿಕೆಟ್ ಕಿತ್ತರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರ್ ಗೆ ಪಂಜಾಬ್ ಗೆ 14 ರನ್ ಬೇಕಿತ್ತು. ಆಗ ಬೌಲಿಂಗ್ ದಾಳಿಗಿಳಿದ ನರೈನ್ 11 ರನ್ ನೀಡಿ ಒಂದು ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಜಯ ತಂದುಕೊಟ್ಟರು.